ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವೆಗೆ ಮೊದಲು ಎಚ್‌ಐವಿ ಪರೀಕ್ಷೆ : ಕರ್ನಾಟಕ ರೆಡಿ

By Staff
|
Google Oneindia Kannada News

ಬೆಂಗಳೂರು : ಭಾವೀ ದಂಪತಿಗಳು ಮದುವೆಗೆ ಮುಂಚೆ ಎಚ್‌ಐವಿ/ಏಡ್ಸ್‌ ಪರೀಕ್ಷೆಗೊಳಗಾಗುವ ನಿಟ್ಟಿನಲ್ಲಿ ಕಾನೂನು ರೂಪಿಸುವಂತೆ, ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ರಾಜ್ಯ ಆರೋಗ್ಯ ಇಲಾಖೆ ಪ್ರಸ್ತಾವನೆ ಮುಂದಿಟ್ಟಿದೆ.

ಆರೋಗ್ಯ ಸಚಿವ ಆರ್‌.ಅಶೋಕ್‌ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಏಡ್ಸ್‌ ಹಾವಳಿ ತಡೆಯುವ ನಿಟ್ಟಿನಲ್ಲಿ ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಮಾರ್ಚ್‌ 14ರಂದು ಪತ್ರ ಬರೆಯಲಾಗಿದೆ. ಪ್ರಸ್ತಾವನೆ ಜಾರಿಗೆ ಬಂದರೆ ಪರಿಣಾಮಕಾರಿಯಾಗಿ ಏಡ್ಸ್‌ ನಿಯಂತ್ರಣ ಮಾಡಬಹುದು ಎಂದು ಹೇಳಿದರು.

ರಾಜ್ಯಾದ್ಯಂತ 70,000ಕ್ಕೂ ಹೆಚ್ಚು ಜನರು ಎಚ್‌ಐವಿ/ಏಡ್ಸ್‌ ಸೋಂಕಿಗೆ ಒಳಗಾಗಿದ್ದಾರೆ. 849ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರ ಒಂದು ವೇಳೆ ಪ್ರಸ್ತಾವನೆ ಜಾರಿಗೆ ತರದಿದ್ದರೆ, ರಾಜ್ಯ ತನ್ನ ಪಾಡಿಗೆ ತಾನು ಜಾರಿಗೆ ತರಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ಮದುವೆಗೆ ಮೊದಲು ಎಚ್‌ಐವಿ/ಏಡ್ಸ್‌ ಪರೀಕ್ಷೆ ನಡೆಸಲಾರದ ಕಾರಣ ರಾಜ್ಯಾದ್ಯಂತ ಈ ರೋಗ ವೇಗವಾಗಿ ಹರಡುತ್ತಿದೆ. ಮಹಾನಗರಗಳಲ್ಲಿ ಕೆಲಸ ಮಾಡುವ ಯುವಕರು, ಸಣ್ಣ ಪಟ್ಟಣಗಳು ಹಾಗೂ ಹಳ್ಳಿಗಳಲ್ಲಿನ ಹುಡುಗಿಯರನ್ನು ಮದುವೆಯಾಗುವ ಪದ್ಧತಿಯಿದೆ. ಬಹುತೇಕ ಪ್ರಕರಣಗಳಲ್ಲಿ ಹುಡುಗನಿಗೆ ಎಚ್‌ಐವಿ/ಏಡ್ಸ್‌ ಇರುವುದು ಪತ್ತೆಯಾಗಿದೆ. ಆನಂತರ ಇದು ಹೆಂಡತಿ ಮತ್ತು ಮಕ್ಕಳಿಗೆ ಹರಡಿಕೊಂಡಿದೆ ಎಂದು ಅವರು ವಿವರಿಸಿದರು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X