ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಈ-ಕವಿ’ ಇಬ್ಭಾಗ: ಸತೀಶ್‌ಗೌಡ ಸಾರಥ್ಯದಲ್ಲಿ ‘ಅವಿರತ’

By Staff
|
Google Oneindia Kannada News

ಬೆಂಗಳೂರು : ಮತ್ತೊಂದು ಹೊಸ ಕನ್ನಡ ಸಂಘಟನೆಯನ್ನು ಹುಟ್ಟಿಹಾಕಲು, ಉತ್ಸಾಹಿ ಕನ್ನಡ ಮನಸ್ಸುಗಳು ಸಿದ್ಧತೆ ನಡೆಸಿವೆ. ಈ ಕಾರ್ಯಕ್ಕೆ ಭಾನುವಾರವೇ(ಮಾ.25) ಮುಹೂರ್ತ.

‘ಈ-ಕವಿ’ ಎಂಬ ಜಾಗತಿಕ ಸಂಘಟನೆ, ಒಡೆದು ಇಬ್ಭಾಗವಾಗಿದ್ದು ಅದರ ಒಂದು ಗುಂಪು, ‘ಅವಿರತ’ ಎಂಬ ಹೆಸರಲ್ಲಿ ಕ್ರಿಯಾಶೀಲವಾಗಲು ಪ್ರಯತ್ನ ನಡೆಸಿದೆ. ಕನ್ನಡ ನಾಡು-ನುಡಿಗೆ ಪೂರಕವಾಗುವಂತಹ ಚಟುವಟಿಕೆಗಳ ಮೂಲಕ, ಸಂಘಟನೆಯನ್ನು ಜೀವಂತವಾಗಿಡುವ ಹಟ ಮತ್ತು ಉತ್ಸಾಹ ‘ಅವಿರತ’ ತಂಡದಲ್ಲಿದೆ.

‘ಅವಿರತ’ ಸಂಘಟನೆಯ ಧ್ಯೇಯ, ನಿಲುವು ಮತ್ತು ಕಾರ್ಯ ಚಟುವಟಿಕೆಗಳ ಬಿಂಬಿಸುವ, ಅಂತರ್ಜಾಲ ತಾಣದ ಉದ್ಘಾಟನೆ ಭಾನುವಾರ ನಡೆಯಲಿದೆ. ಮಲ್ಲೇಶ್ವರಂನಲ್ಲಿರುವ ಶ್ರೀಗಂಧ ಪ್ರಿವ್ಯೂ ಥಿಯೇಟರ್‌ನಲ್ಲಿ ಮಧ್ಯಾಹ್ನ 3ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ.

ಈ ಸಂದರ್ಭದಲ್ಲಿಯೇ ‘ಅವಿರತ’, ವಿಪ್ರೋ ಕನ್ನಡ ಬಳಗಕ್ಕಾಗಿ ‘ನಾಯಿ ನೆರಳು’ ಚಿತ್ರ ಪ್ರದರ್ಶನವನ್ನು ಆಯೋಜಿಸಿದೆ. ನಂತರ ನಡೆಯಲಿರುವ ಸಂವಾದ ಕಾರ್ಯಕ್ರಮದಲ್ಲಿ ಚಿತ್ರದ ನಿರ್ದೇಶಕ ಗಿರೀಶ್‌ ಕಾಸರವಳ್ಳಿ, ಛಾಯಾಗ್ರಾಹಕ ರಾಮಚಂದ್ರ ಪಾಲ್ಗೊಳ್ಳಲಿದ್ದಾರೆ. ಏ.15ರಂದು ಸಾರ್ವಜನಿಕ ಪ್ರದರ್ಶನ ಏರ್ಪಡಿಸುವುದಾಗಿ ‘ಅವಿರತ’ ಸದಸ್ಯರು ‘ದಟ್ಸ್‌ ಕನ್ನಡ’ಕ್ಕೆ ತಿಳಿಸಿದ್ದಾರೆ.

ಕಾರ್ಯಕ್ರಮದ ಬಗ್ಗೆ ಹೆಚ್ಚಿನ ವಿವರಗಳಿಗೆ ‘ಅವಿರತ’ದ ಅಧ್ಯಕ್ಷ ಕೆ.ಟಿ.ಸತೀಶ್‌ ಗೌಡ ಅವರನ್ನು ಸಂಪರ್ಕಿಸಬಹುದು. ಇ-ಮೇಲ್‌ ವಿಳಾಸ : [email protected]

ಸ್ಥಳ :
ಶ್ರೀಗಂಧ ಪ್ರಿವ್ಯೂ ಥಿಯೇಟರ್‌,
ಲಾವಣ್ಯ ಟವರ್ಸ್‌, ಬಿಡಬ್ಲು ಎಸ್‌ಎಸ್‌ಬಿ ರಸ್ತೆ ಸಮೀಪ,
4ನೇ ಮುಖ್ಯರಸ್ತೆ,
ಮಲ್ಲೇಶ್ವರಂ 18ನೇ ಅಡ್ಡ ರಸ್ತೆ,
ಮಲ್ಲೇಶ್ವರಂ, ಬೆಂಗಳೂರು.

ಅವಿರತ ಬಳಗದಲ್ಲಿ ಯಾರ್ಯಾರಿದ್ದಾರೆ? :

  • ಗೌರವ ಸಮಿತಿ ಸದಸ್ಯರು ಮತ್ತು ಸಲಹೆಗಾರರು -ಮಾಸ್ಟರ್‌ ಹಿರಣ್ಣಯ್ಯ, ಗಿರೀಶ್‌ ಕಾಸರವಳ್ಳಿ, ನಲ್ಲೂರು ಪ್ರಸಾದ್‌, ಕೆ.ಎಸ್‌.ಅಶ್ವತ್ಥ್‌, ಶ್ರೀನಿವಾಸ .ಜಿ. ಕಪ್ಪಣ್ಣ, ಪ್ರಕಾಶ್‌ ಬೆಳವಾಡಿ, ಸುಚೇಂದ್ರಪ್ರಸಾದ್‌, ಡಾ. ಪ್ರಸನ್ನಕುಮಾರ್‌. ಕೆ.ಎಂ., ಡಾ. ಮೋಹನ್‌ಕುಮಾರ್‌.
  • ಅಧ್ಯಕ್ಷ -ಸತೀಶ್‌ಗೌಡ. ಕೆ.ಟಿ
  • ಕಾರ್ಯದರ್ಶಿ: ಗುರುಪ್ರಸಾದ್‌
  • ಉಪಾಧ್ಯಕ್ಷರು- ಸಂಪಿಗೆ ಶ್ರೀನಿವಾಸ್‌, ಮಂಜುನಾಥ್‌ರಾವ್‌, ಅನಿಲ್‌ .ಟಿ. ಹಳ್ಳಿ, ಡಾ. ಹಿಮಾಂಶು,
  • ವಕ್ತಾರರು - ಗಿರೀಶ್‌ ಅಂದಲಗಿ, ಡಾ. ಹಿಮಾಂಶು
(ದಟ್ಸ್‌ ಕನ್ನಡ ವಾರ್ತೆ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X