ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಿವಿಪರೀತ : ಹುಬ್ಬಳ್ಳಿಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು!

By Staff
|
Google Oneindia Kannada News

ಹುಬ್ಬಳ್ಳಿ : ತರಾತುರಿಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹೊರಟಿದ್ದ ಬಾಲಕಿಯಾಬ್ಬಳು, ಗೂಡ್ಸ್‌ ರೈಲಿಗೆ ಸಿಲುಕಿ ಗುರುವಾರ ಮೃತಪಟ್ಟಿದ್ದಾಳೆ.

ಮೃತಪಟ್ಟ ನತದೃಷ್ಟೆಯನ್ನು ಶಿಲ್ಪಾ ರಾಣೆ(16) ಎಂದು ಗುರ್ತಿಸಲಾಗಿದೆ. ಪಿಳ್ಳೆ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ತೆರಳುತ್ತಿದ್ದ ಆಕೆ, ರೈಲ್ವೆ ಹಳಿಗಳನ್ನು ದಾಟುವಾಗ ಈ ದುರ್ಘಟನೆ ನಡೆದಿದೆ. ರೈಲ್ವೆ ಹಳಿ ದಾಟುವಾಗ ಕೆಳಕ್ಕೆ ಬಿದ್ದ ಜಾಮಿತ್ರಿ ಬಾಕ್ಸ್‌ ಮತ್ತು ಪ್ರವೇಶ ಪತ್ರವನ್ನು ತೆಗೆದುಕೊಳ್ಳಲು ಹಿಂದೆ ಬಂದಾಗ, ಗೂಡ್ಸ್‌ ರೈಲು ಡಿಕ್ಕಿ ಹೊಡೆದಿದೆ. ಕಾಲು ತುಂಡಾಗಿದ್ದು, ಶಿಲ್ಪಾ ಸ್ಥಳದಲ್ಲಿಯೇ ಮೃತಪಟ್ಟಳು.

ಶಿಲ್ಪಾ ರಾಣೆ ಪ್ರತಿಭಾವಂತೆಯೆಂದು ಗುರ್ತಿಸಲ್ಪಟ್ಟಿದ್ದು, ಗಣಿತದ ಪರೀಕ್ಷೆ ಬರೆಯಲು ಮನೆಯಿಂದ ಪರೀಕ್ಷಾ ಕೇಂದ್ರಕ್ಕೆ ತೆರಳುತ್ತಿದ್ದಳು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X