ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈಕೋರ್ಟ್‌ ಈಗ ಹೈಟೆಕ್‌! : ಮೊಬೈಲ್‌ನಲ್ಲಿ ಮಾಹಿತಿ!

By Staff
|
Google Oneindia Kannada News

ಬೆಂಗಳೂರು : ಹೈಕೋರ್ಟ್‌ ಕಾರ್ಯ ಕಲಾಪಗಳನ್ನು ಹೈಟೆಕ್‌ ಮಾಡಲಾಗಿದೆ. ಹೈಕೋರ್ಟ್‌ನಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಬಗ್ಗೆ ಮತ್ತು ದಿನನಿತ್ಯದ ಕಲಾಪಗಳ ಬಗ್ಗೆ ಸದ್ಯದಲ್ಲಿಯೇ ವಿವರಗಳನ್ನು ಮೊಬೈಲ್‌ ಪೋನ್‌ಗಳಲ್ಲಿ ಪಡೆಯಬಹುದಾಗಿದೆ.

ಹೈಕೋರ್ಟ್‌ನಲ್ಲಿ ನಡೆದ ಬಿಜ್‌ಬೆರ್ರಿ ಪ್ರಿಂಡ್‌ ಅಂಡ್‌ ಸೇವ್‌ ಸೆಂಟರ್‌ನ ಉದ್ಘಾಟನಾ ಸಮಾರಂಭದಲ್ಲಿ, ಈ ವಿಚಾರವನ್ನು ನ್ಯಾಯಮೂರ್ತಿ ಎಸ್‌.ಆರ್‌.ಬನ್ನೂರಮಠ ತಿಳಿಸಿದ್ದಾರೆ.

ಮೊಬೈಲ್‌ ಸೇವೆಯಿಂದ ವಕೀಲರಿಗೆ ಅನುಕೂಲವಾಗಲಿದೆ. ಜೊತೆಗೆ ಹೈಕೋರ್ಟ್‌ನಲ್ಲಿ ವೈ-ಪೈ ತಂತ್ರಜ್ಞಾನ ಅಳವಡಿಸಲಾಗಿದೆ. ಕೇಬಲ್‌ಗಳ ಅಗತ್ಯವಿಲ್ಲದೆಯೇ, ಹೈಕೋರ್ಟ್‌ ಆವರಣದ 100ಮೀ. ವ್ಯಾಪ್ತಿಯಲ್ಲಿ ಲ್ಯಾಪ್‌ಟಾಪ್‌ಗಳ ಮೂಲಕ ಇಂಟರ್‌ನೆಟ್‌ ಸೇವೆ ಪಡೆಯಬಹುದಾಗಿದೆ. ಇದರಿಂದ ನ್ಯಾಯಾಂಗ ಕಲಾಪಗಳು ಸರಳೀಕರಣಗೊಳ್ಳಲಿವೆ ಎಂದರು.

ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸಿರಿಯಾಕ್‌ ಜೋಸೆಫ್‌, ವೆಪ್‌ ಸಂಸ್ಥೆ ಅಧ್ಯಕ್ಷ ರಾಮ್‌ ಎನ್‌. ಅಗರ್‌ವಾಲ್‌, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಡಿ.ಎಲ್‌.ಜಗದೀಶ್‌ ಮತ್ತಿತರರು ಪಾಲ್ಗೊಂಡಿದ್ದರು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X