• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಾಬ್‌ ವೂಲ್ಮರ್‌ ಸಾವಿನ ಸುತ್ತ ಅನುಮಾನಗಳ ಹುತ್ತ

By Staff
|

Bob Woolmerಕಿಂಗ್‌ಸ್ಟನ್‌ : ಪಾಕಿಸ್ತಾನದ ಕ್ರಿಕೆಟ್‌ ಕೋಚ್‌ ಬಾಬ್‌ ವೂಲ್ಮರ್‌ ಸಾವಿನ ಹಿಂದೆ ಇದ್ದ ಅನುಮಾನವನ್ನು ಜಮೈಕಾ ಪೊಲೀಸರು ಖಚಿತಪಡಿಸಿದ್ದಾರೆ.

ಜಮೈಕಾದ ಪೊಲೀಸ್‌ ಉಪ ಆಯುಕ್ತ ಮಾರ್ಕ್‌ಶೀಲ್ಡ್ಸ್‌ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತ, ಪ್ರಾಥಮಿಕ ತನಿಖಾ ವರದಿಯ ಪ್ರಕಾರ 58ವರ್ಷದ ಬಾಬ್‌ ವೂಲ್ಮರ್‌ ಅವರ ಸಾವು ಅನುಮಾನಸ್ಪದವಾಗಿ ಕಾಣುತ್ತಿದೆ ಎಂದು ಮಾರ್ಕ್‌ ಶೀಲ್ಡ್ಸ್‌ ಹೇಳಿದ್ದಾರೆ. ಈ ವರದಿಯನ್ನು ವೂಲ್ಮರ್‌ ಕುಟುಂಬದವರಿಗೆ ಹಾಗೂ ಪಾಕ್‌ ಕ್ರಿಕೆಟ್‌ ಮಂಡಳಿಗೆ ನೀಡಲಾಗಿದೆ.

ಈ ಮಧ್ಯೆ ‘ಪೊಲೀಸ್‌ ತನಿಖೆ ಮುಗಿಯುವವರೆಗೂ ಪಾಕ್‌ ತಂಡ ಹಾಗೂ ತಂಡದ ಅಧಿಕಾರಿಗಳು ವೆಸ್ಟ್‌ ಇಂಡೀಸ್‌ ಬಿಟ್ಟು ಕದಲುವಂತಿಲ್ಲ.’ ‘ವೂಲ್ಮರ್‌ ಸಾವಿನ ಹಿಂದೆ ಪಾಕ್‌ ಆಟಗಾರರ ಕೈವಾಡ ಇದೆ’ ಮುಂತಾದ ಗಾಳಿ ಸುದ್ದಿಗಳನ್ನು ದಯವಿಟ್ಟು ಹರಡಬೇಡಿ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಪಾಕ್‌ ಕ್ರಿಕೆಟ್‌ ಅಧಿಕಾರಿಗಳು ಮನವಿ ಮಾಡಿದರು.

ತಂಡದ ಸೋಲು, ಸಾವಿನ ಪರಿಣಾಮ : ಪಾಕ್‌ ಕ್ರಿಕೆಟ್‌ ಮಂಡಳಿಯ ಅಧ್ಯಕ್ಷ ನಸೀಂ ಅಶ್ರಫ್‌ ಹಾಗೂ ಆಯ್ಕೆ ಸಮಿತಿಯ ಮೂವರು ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.

‘ವೆಸ್ಟ್‌ ಇಂಡೀಸ್‌ ಹಾಗೂ ಐರ್ಲೆಂಡ್‌ ತಂಡದ ವಿರುದ್ಧ, ಪಾಕ್‌ ತಂಡ ಸೋತ ಕಾರಣ ರಾಜೀನಾಮೆಯನ್ನು ಕ್ರಿಕೆಟ್‌ ಪೋಷಕ ಹಾಗೂ ಪಾಕ್‌ ಅಧ್ಯಕ್ಷ ಪರ್ವೆಜ್‌ ಮುಷರಫ್‌ ಅವರಿಗೆ ಕಳಿಸಿದ್ದೇವೆ’ ಎಂದು ಆಯ್ಕೆ ಸಮಿತಿಯ ವಾಸಿಂ ಬೇರಿ, ಇಕ್ಬಾಲ್‌ ಕಾಸಿಂ ಹಾಗೂ ಏತೆಶಮುದ್ದೀನ್‌ ಹೇಳಿದ್ದಾರೆ.

ಪಾಕ್‌ ತಂಡದ ನಾಯಕ ಇಂಜಮಾಮ್‌ ಉಲ್‌ ಹಕ್‌ ವಿಶ್ವಕಪ್‌ ಟೂರ್ನಿಯ ನಂತರ ನಾಯಕತ್ವ ಹಾಗೂ ಏಕದಿನ ಪಂದ್ಯಾವಳಿಯಲ್ಲಿ ಆಡುವುದನ್ನು ತ್ಯಜಿಸುವುದಾಗಿ ಘೋಷಿಸಿದ್ದಾರೆ.

ಈಗಾಗಲೇ ವಿಶ್ವಕಪ್‌ ಟೂರ್ನಿಯಿಂದ ಹೊರಬಿದ್ದಿರುವ ಪಾಕ್‌ ತಂಡ, ವಿಶ್ವಕಪ್‌ ಪಂದ್ಯಾವಳಿಯ ಕಡೆಯ ಲೀಗ್‌ ಪಂದ್ಯವನ್ನು ಬುಧವಾರ(ಮಾ.21) ಜಿಂಬಾಬ್ವೆ ವಿರುದ್ಧ ಆಡಲಿದೆ. ಈ ಪಂದ್ಯವನ್ನು ಗೆದ್ದು ಬಾಬ್‌ ವೂಲ್ಮರ್‌ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವುದಾಗಿ ಪಾಕ್‌ ತಂಡ ಹೇಳಿದೆ.

(ಏಜನ್ಸೀಸ್‌)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more