ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಬಿಸಿಯೂಟ, ಶಿಕ್ಷಕರಿಗೆ ಸಜೆ!

By Staff
|
Google Oneindia Kannada News

ಬೆಂಗಳೂರು : ‘ಇಷ್ಟು ದಿನ ಬಿಸಿಯೂಟ ಸಿಗುತ್ತಿತ್ತು... ಬೇಸಿಗೆ ರಜೆಯಲ್ಲಿ ಹೇಗಪ್ಪಾ?’ ಎಂದು ಮಕ್ಕಳು ಚಿಂತೆ ಮಾಡುವುದು ಬೇಕಿಲ್ಲ. ರಾಜ್ಯದ ಬರಪೀಡಿತ 128 ಜಿಲ್ಲೆಗಳಲ್ಲಿನ ವಿದ್ಯಾರ್ಥಿಗಳಿಗೆ, ಬೇಸಿಗೆ ರಜೆಯಲ್ಲೂ ಬಿಸಿಯೂಟ ಲಭ್ಯ.

ಸಾರ್ವಜನಿಕ ಶಿಕ್ಷಣ ಇಲಾಖೆ, ಸಂಬಂಧಿಸಿದ ಜಿಲ್ಲಾ ಪಂಚಾಯಿತಿಗಳಿಗೆ ಸುತ್ತೋಲೆ ಕಳುಹಿಸಿದ್ದು, ಬಿಸಿಯೂಟ ಒದಗಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಹೇಳಿದೆ. ಇದಕ್ಕಾಗಿ 40ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.

ಏ.11ರಿಂದ ಮೇ.28ರವರೆಗೆ ನಡುವೆ ಬಿಸಿಯೂಟ ಲಭ್ಯ. ಈ ಕಾರ್ಯಕ್ರಮ ಅನುಷ್ಠಾನಕ್ಕೆ ಶಿಕ್ಷಕರು ಮುಂದಾಗಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಈ ಪರಿಣಾಮ, ಬೇಸಿಗೆ ರಜೆಯಲ್ಲಿ ಊರು ಸುತ್ತುವ ಶಿಕ್ಷಕರ ಹಂಬಲಕ್ಕೆ ಕಡಿವಾಣ ಬಿದ್ದಿದೆ!

ಸರ್ಕಾರದ ನಿರ್ಧಾರ ಸೂಕ್ತವಾಗಿದೆ. ಆದರೆ ಶಿಕ್ಷಕರಿಗೆ ಇದರಿಂದ ಅಘೋಷಿತ ಸಜೆ ವಿಧಿಸಿದಂತಾಗಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.

2007-08ನೇ ಸಾಲಿನಿಂದ 10ನೇ ತರಗತಿವರೆಗೆ ಬಿಸಿಯೂಟದ ಕಾರ್ಯಕ್ರಮ ವಿಸ್ತರಣೆಗೊಳ್ಳಲಿದೆ. ಇದರಿಂದ 17.18ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X