ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾ.25ರಿಂದ ಮಂಗಳೂರಿನಿಂದ ಮತ್ತೊಂದು ವಿಮಾನ

By Staff
|
Google Oneindia Kannada News

ಮಂಗಳೂರು : ಮಾರ್ಚ್‌ 25ರಿಂದ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ಸೇವೆ ಆರಂಭವಾಗಲಿದೆ. ಈ ವಿಮಾನ ದೋಹಾ-ಬಹ್ರೇನ್‌-ಮಂಗಳೂರು ನಡುವೆ ಸಂಚರಿಸಲಿದೆ.

ಮಾರ್ಚ್‌ 25ರಂದು ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌(ಎಐಇ)ನ ವಿಮಾನ, ದೋಹಾದಿಂದ ಬಹ್ರೇನ್‌ ಮಾರ್ಗವಾಗಿ ಬಜ್ಪೆ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. 23.55ಕ್ಕೆ ಬರುವ ವಿಮಾನ 00.55 ಕ್ಕೆ ಮರಳಿ ಹೊರಡಲಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ಹೇಳಿವೆ.

ವಿಮಾನ 19.00ಗಂಟೆಗೆ ಆಗಮಿಸುವಂತೆ ಹಾಗೂ 20.00ಗಂಟೆಗೆ ಮರಳುವಂತೆ ವೇಳಾಪಟ್ಟಿ ಬದಲಿಸಬೇಕು ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ, ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ಗೆ ಕೇಳಿಕೊಂಡಿದೆ.

ಹೊಸ ವಿಮಾನ ಸೇವೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ಈಗಾಗಲೇ ಚಲಾವಣೆಯಲ್ಲಿರುವ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಸಮಯವೂ ಬದಲಾವಣೆಯಾಗಲಿದೆ ಎಂದು ಮೂಲಗಳು ಹೇಳಿವೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X