• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಹುಲ್‌ ಹೇಳಿಕೆ ಹಿಂದೂ ವಿರೋಧಿ : ಬಿಜೆಪಿ ಕಟು ಟೀಕೆ

By Staff
|

ನವದೆಹಲಿ : ತಮ್ಮ ಕುಟುಂಬ ರಾಜಕೀಯದಲ್ಲಿ ಸಕ್ರಿಯವಾಗಿದ್ದಿದ್ದರೆ ಬಾಬ್ರಿ ಮಸೀದಿ ಧ್ವಂಸವಾಗುತ್ತಿರಲಿಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿರುವುದು, ಹಿಂದೂ ಭಾವನೆಗಳಿಗೆ ಅವಮಾನ ಉಂಟುಮಾಡಿದೆ ಎಂದು ಬಿಜೆಪಿ ಆರೋಪಿಸಿದೆ.

ಬಿಜೆಪಿ ಹಿರಿಯ ನಾಯಕ ವಿಜಯ್‌ಕುಮಾರ್‌ ಮಲ್ಹೋತ್ರಾ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಹುಲ್‌ ಮತ್ತು ಕಾಂಗ್ರೆಸ್‌ ಪಕ್ಷ ಮುಸ್ಲಿಮರನ್ನು ಓಲೈಸಲು ಇಷ್ಟು ಕೀಳುಮಟ್ಟಕ್ಕಿಳಿದಿರುವುದು ನಮಗೆ ಆಘಾತವುಂಟುಮಾಡಿದೆ. ರಾಹುಲ್‌ ಮತ್ತು ಕಾಂಗ್ರೆಸ್‌ ಪಕ್ಷ ಹಿಂದೂ ಸಮುದಾಯಕ್ಕೆ ಅವಮಾನ ಮಾಡಲು ಏನು ಬೇಕಾದರೂ ಮಾಡಬಲ್ಲರು ಎಂದು ಖಂಡಿಸಿದರು.

1949ರಲ್ಲಿ ದಿವಂಗತ ಪ್ರಧಾನಿ ಜವಾಹರಲಾಲ್‌ ನೆಹರೂ, ಮುಸ್ಲಿಂ ಭಕ್ತಾದಿಗಳು ಬಾಬ್ರಿ ಪ್ರವೇಶಿಸುವುದನ್ನು ನಿಷೇಧಿಸಿದರು. ರಾಹುಲ್‌ ಗಾಂಧಿಯವರ ತಂದೆ ರಾಜೀವ್‌ ಗಾಂಧಿ ಹಿಂದೂ ಭಕ್ತಾದಿಗಳಿಗೆ ದ್ವಾರವನ್ನು ಮುಕ್ತಗೊಳಿಸಿದರು ಎಂದು ಸ್ಮರಿಸಿದ ಮಲ್ಹೋತ್ರಾ, ಈ ನಿಟ್ಟಿನಲ್ಲಿ ರಾಹುಲ್‌ ಅಜ್ಜ ಜವಾಹರಲಾಲ್‌ ನೆಹರೂ ಹಾಗೂ ತಂದೆ ರಾಜೀವ್‌ ಗಾಂಧಿ ಅವರಿಗೆ ಅಗೌರವ ತೋರಿದ್ದಾರೆ. ಎಲ್ಲಕ್ಕೂ ಹೆಚ್ಚಾಗಿ ಹಿಂದೂ ಸಮುದಾಯದ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಹಿನ್ನೆಲೆ : ಈಗ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣಾ ಅಬ್ಬರ. ಮುಸ್ಲಿಮರೇ ಅಧಿಕವಾಗಿರುವ ದೇವ್‌ಬಂದ್‌ ಪ್ರದೇಶದಲ್ಲಿ, ರಾಹುಲ್‌ ಗಾಂಧಿ ಇತ್ತೀಚೆಗೆ ಚುನಾವಣಾ ಪ್ರಚಾರದಲ್ಲಿ ಮಾತನಾಡುತ್ತಾ, 1992ರಲ್ಲಿ ತಮ್ಮ ಕುಟುಂಬ ರಾಜಕೀಯದಲ್ಲಿ ಸಕ್ರಿಯವಾಗಿದ್ದಿದ್ದರೆ ಬಾಬ್ರಿ ಮಸೀದಿ ಧ್ವಂಸವಾಗುತ್ತಿರಲಿಲ್ಲ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X