• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬರಹ ವಾಸು ತಂದೆ ಕೆ.ಟಿ. ಚಂದ್ರಶೇಖರ್‌ಗೆ ಬಸವನಗುಡಿಯಲ್ಲಿ ಅವಮಾನ

By Staff
|

ಕನ್ನಡಕ್ಕಾಗಿ ತಮ್ಮನ್ನು ತಮ್ಮ ಮಕ್ಕಳನ್ನು ಮುಡಿಪಿಟ್ಟ ಅಪ್ಪಟ ಕನ್ನಡಿಗ ಕೆ.ಟಿ. ಚಂದ್ರಶೇಖರ್‌ ಅವರಿಗೆ ಬಸವನಗುಡಿಯಲ್ಲಿ , ಹಿಂದಿ ಹೆಸರಲ್ಲಿ ಅವಹೇಳನ. ಎಲ್ಲಿಗೆ ಬಂತು ನೋಡಿ, ಕರ್ನಾಟಕ!

K.T. Chandrashekhar, father of Baraha Vasu insulted in Bangaloreದಿನಾಂಕ 18ನೇ ಮಾರ್ಚ್‌ 2007 ರಂದು ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಮತ್ತು ಅಭಿಜ್ಞಾನ ಪ್ರಕಾಶನದ ಪ್ರಾಯೋಜಕತ್ವದಲ್ಲಿ ಖ್ಯಾತ ಕನ್ನಡ ಕಾದಂಬರಿಗಾರ ಎಸ್‌. ಎಲ್‌. ಭೈರಪ್ಪ ರವರ ಹೊಸ ಕಾದಂಬರಿ ‘ಆವರಣ ’ ಕುರಿತಾಗಿ ಗೋಖಲೆ ವಿಚಾರ ಸಂಸ್ಥೆ ಸಭಾಂಗಣದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಕನ್ನಡಿಗನೊಬ್ಬನಿಗೆ ಹಿಂದಿ ಹಾಡುಗಳ ಹೆಸರಲ್ಲಿ ಅವಹೇಳನ ಸಂದಾಯವಾಯಿತು.

ಗಾಯಕರೊಬ್ಬರು ಹಿಂದಿ ಹಾಡೊಂದನ್ನು ಕಾರ್ಯಕ್ರಮದ ಪ್ರಾರ್ಥನ ಗೀತೆಯಾಗಿ ಹಾಡಲು ಅನುವಾಗುತ್ತಿದ್ದಂತೆಯೆ, ಎಪ್ಪತ್ತೈದು ವರ್ಷದ ಹಿರಿಯ ಪ್ರೇಕ್ಷಕರೊಬ್ಬರು ‘ ಕನ್ನಡ, ಕನ್ನಡ, ಕನ್ನಡದಲ್ಲಿ ಪ್ರಾರ್ಥನ ಗೀತೆ ಹಾಡಿ’ ಎಂದು ಪ್ರತಿಭಟಿಸಲು ಮುಂದಾದರು. ಅಚ್ಚ ಕನ್ನಡಿಗರೇ ತುಂಬಿ-ತುಳುಕುತ್ತಿದ್ದ ಸಭಾಂಗಣ ಹಾಗು ಕನ್ನಡ ಕಾದಂಬರಿಯಾಂದರ ಸಂವಾದ ಕಾರ್ಯಕ್ರಮದಲ್ಲಿ ಹಿಂದಿ ಪ್ರಾರ್ಥನ ಗೀತೆ ಏಕೆ ಎಂದು ಆ ಹಿರಿಯರ ವಾದವಾಗಿತ್ತು. ಕೂಡಲೇ ಅವರತ್ತ ಧಾವಿಸಿದ ಕೆಲ ಕಾರ್ಯಕರ್ತರು! ಅವರ ಪ್ರತಿಭಟನೆಯನ್ನು ತಡೆ ಹಿಡಿಯಲು ಪ್ರಯತ್ನಿಸಿದರು.

ಅ ಹಿರಿಯರನ್ನು ಸುತ್ತುವರೆದ ಕೆಲವರು, ಏನ್‌ ಮಹಾ ಕನ್ನಡಿಗನಯ್ಯ ನೀನು? ‘ಕನ್ನಡಿಗನಾದವನು ಈ ರೀತಿ ವರ್ತಿಸಬಾರದು ಎಂಬ ನಿಯಮವಿದೆಯಂತೆ’, ಯಾಕೆ ಪ್ಯಾಂಟು ಷರ್ಟು ಹಾಕಿ ಬಂದಿದ್ದೀಯ? ‘ಕನ್ನಡಿಗ ಪಂಚೆ ಉಟ್ಟು ಬರಬೇಕಿತ್ತಂತೆ!’, ಕನ್ನಡಕ್ಕೆ ನೀವೇನು ಮಾಡಿದ್ದೀರಿ? ಎಂದು ಆ ಹಿರಿಯರ ಪ್ರತಿಭಟನೆಯ ಹಿಂದಿರುವ ಕನ್ನಡತನವನ್ನು ಪ್ರಶ್ನಿಸಲು ಮುಂದಡಿಯಿಡುತ್ತ, ‘ ಸಂಗೀತಕ್ಕೆ ಭಾಷೆ ಇಲ್ಲ’ ಇತ್ಯಾದಿಯಾಗಿ ಹೇಳುತ್ತಾ ಹಿಂದಿ ಗೀತೆ ಹಾಡುತ್ತಿರುವುದಕ್ಕೆ ಸಮಜಾಯಿಷಿ ನೀಡಲು ಹವಣಿಸುತ್ತಿದ್ದರು.

ಆ ಹಿರಿಯರು ‘ ಸಂಗೀತಕ್ಕೆ ಭಾಷೆ ಇಲ್ಲ ನಿಜ ಆದರೆ ಗಾಯಕರು ಹಾಡುತ್ತಿರುವ ಹಾಡಿನ ಭಾಷೆ ಇಲ್ಲಿ ಯಾರಿಗೂ ಅರ್ಥವಾಗುತ್ತಿಲ್ಲ. ಬೆಂಗಳೂರಿನ ಕನ್ನಡದ ಕಾರ್ಯಕ್ರಮಗಳಲ್ಲಿ ಕನ್ನಡ ಹಾಡನ್ನು ಹಾಡಿಸದೆ, ಕೇರಳದ ಮಲಯಾಳಂ ಕಾರ್ಯಕ್ರಮದಲ್ಲಿ ಹಾಡಿಸಲು ಸಾಧ್ಯವೇ’ ಎಂದು ನೈಜ ಕನ್ನಡ ಪ್ರೇಮದ ಕಳಕಳಿಯನ್ನು ವ್ಯಕ್ತಪಡಿಸುತ್ತಿದ್ದರು.

ಕಾರ್ಯಕರ್ತರಲ್ಲೊಬ್ಬರು ಆ ಹಿರಿಯರ ಗಲ್ಲವನ್ನು ಮತ್ತು ಕುತ್ತಿಗೆಯನ್ನು ಒರಟೊರಟಾಗಿ ಹಿಡಿದು ಜಗ್ಗುತ್ತ ಅವರ ಧನಿ ಅಡಗಿಸಿಲು ಪ್ರಯತ್ನಿಸಿದರೂ ಹಠ ಬಿಡದ ಅ ಹಿರಿಯ ವ್ಯಕ್ತಿ ಆ ಗಾಯನ ಮುಗಿಯುವವರೆಗೆ ಕನ್ನಡ ಕನ್ನಡ ಕನ್ನಡ ಎಂದು ಏರಿದ ಸ್ವರದಲ್ಲಿ ಪ್ರತಿಧ್ವನಿಸುತ್ತಿದ್ದರು. ನೆರೆದಿದ್ದ ಸಾರ್ವಜನಿಕರಲ್ಲಿ ಹಲವು ಜನ ಕನ್ನಡಿಗರು ಆ ಹಿರಿಯರ ನೆರವಿಗೆ ಬಂದು ಆ ಕಾರ್ಯಕರ್ತನ ಪಟ್ಟಿನಿಂದ ಅವರನ್ನು ಬಿಡಿಸಿದರು.

ಅಚ್ಚ ಕನ್ನಡದ ಕಾರ್ಯಕ್ರಮದಲ್ಲಿ ಆಯೋಜಕರು ಹಿಂದಿಯಲ್ಲಿ ಪ್ರಾರ್ಥನ ಗೀತೆ ಹಾಡಿಸಿದ್ದು ಹಲವರಲ್ಲಿ ಆಶ್ಚರ್ಯವನ್ನುಂಟು ಮಾಡಿತ್ತು. ಆಯೋಜಕರ ಈ ನಿಲವು ಖಂಡನೀಯವಾದದ್ದು. ಪರಭಾಷಿಕರ ಹಾವಳಿಯಿಂದ ಬೆಂಗಳೂರಿನಲ್ಲಿ ಕನ್ನಡ ನಶಿಸುತ್ತಿದೆ ಎಂಬುದು ಬಹುಮಟ್ಟಿನ ಕನ್ನಡಿಗರ ಅಭಿಪ್ರಾಯ. ಇದು ಶುದ್ಧ ಸುಳ್ಳು. ಕನ್ನಡಿಗನೇ ಕನ್ನಡದ ಶತ್ರು! ಎಂದು ಈ ರೀತಿಯ ಹಲವು ಕನ್ನಡ-ಸಾಂಸ್ಕೃತಿಕ-ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವವರು ಆಗಿಂದಾಗ್ಗೆ ಸಾಬೀತು ಪಡಿಸುತ್ತಿದ್ದಾರೆ. ಕನ್ನಡ ಕಾರ್ಯಕ್ರಮಗಳಲ್ಲಿ ಕನ್ನಡ ಮಾಯವಾಗುವ ಅವು ಸಂಪೂರ್ಣ ಪರಭಾಷಾಮಯವಾಗುವ ಅಪಾಯದಿಂದ ಹೊರಬರಲು ಕನ್ನಡಿಗರು ಅರಿತು-ಎಚ್ಚೆತ್ತು-ಈ ರೀತಿ ಜಾಗೃತನಾಗಬೇಕಾದದ್ದು ಇಂದು ಬಹಳ ಅವಶ್ಯಕವಾಗಿದೆ.

-2 -

ಅಂದಹಾಗೆ ಕನ್ನಡದ ಹಾಡು ಹಾಡಿ ಎಂದು ಪಟ್ಟು ಹಿಡಿದ ಆ ಹಿರಿಯ ವ್ಯಕ್ತಿ ಕನ್ನಡ ಸಂಸ್ಕೃತಿಯ ಚೇತನ, ಚಳುವಳಿ ಪಿತಾಮಹ ಅ. ನ. ಕೃಷ್ಣರಾಯರ ಅನುಯಾಯಿ. 1940 ರ ದಶಕದಿಂದಲೂ ಕನ್ನಡ ಪುಸ್ತಕಗಳನ್ನು ಕೊಂಡು-ಓದಿ-ಶೇಖರಿಸಿರುವ ಅಪ್ಪಟ ಕನ್ನಡ ಪುಸ್ತಕ ಪ್ರೇಮಿ. ಕನ್ನಡ ಸಾಂಸ್ಕೃತಿಕ ಲೋಕದ ಹಿರಿಯರ ಒಡನಾಟವಿರುವ, ಹಲವಾರು ಕನ್ನಡ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಇಂದಿಗೂ ಅವಿರತವಾಗಿ ಕನ್ನಡದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಒಬ್ಬ ವಯೋವೃದ್ಧ. ಕನ್ನಡತನದ ಪ್ರಸಾರಕ್ಕೆ ಇವರ ಕುಟುಂಬ ನೀಡಿರುವ ಕೊಡುಗೆ ಅಪಾರ! ನಮ್ಮ ‘ಕನ್ನಡ’ ಇಂದು ಗಣಕಗಳಲ್ಲಿ, ಅಂತರ್ಜಾಲದಲ್ಲಿ, ತಾಂತ್ರಿಕತೆಯಲ್ಲಿ ತಲೆಯೆತ್ತಲು ಹೆಸರು ಗಳಿಸಲು ಸಾಧ್ಯವಾಗುವಂತಹ ತಂತ್ರಾಂಶವನ್ನು ರೂಪಿಸಿ ಉಚಿತವಾಗಿ ಸಮಸ್ತ ಕನ್ನಡಿಗರು ಬಳಸಲು ಅನುವು ಮಾಡಿಕೊಟ್ಟಿರುವ ‘ಬರಹ ವಾಸು’ ಅವರ ತಂದೆಯೇ ಆ ಹಿರಿಯ ವ್ಯಕ್ತಿ ಕೆ. ಟಿ. ಚಂದ್ರಶೇಖರ್‌.

ಇಂತಹ ಒಬ್ಬ ಅಪ್ಪಟ ಕನ್ನಡ ಪ್ರೇಮಿಗೆ ಅಲ್ಲಿ ನಡೆದದ್ದು ಅಪ್ಪಟ ಅವಹೇಳನ. ಅಷ್ಟೇ ಅಲ್ಲ, ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದ ಕೆಲ ಯಶಸ್ವಿ ಕನ್ನಡಿಗರು ಹಾಗು ಇತರ ಗಣ್ಯರು ಕನ್ನಡ ಗೀತೆಯ ಪರವಾಗಿ ಪ್ರತಿಕ್ರಿಯಿಸದೆ ಸುಮ್ಮನೆ ಕುಕ್ಕರ ಬಡಿದದ್ದು ಇಡೀ ಕನ್ನಡ ಕುಲಕೋಟಿಗೇ ಅವಮಾನ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X