• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವಕಪ್‌: ಸೆಹ್ವಾಗ್‌ ವೀರಾವೇಶ, ಬರ್ಮುಡಾ ತತ್ತರ

By Staff
|

ಪೋರ್ಟ್‌ ಆಫ್‌ ಸ್ಪೇನ್‌: ವಿರೇಂದರ್‌ ಸೆಹ್ವಾಗ್‌ ಮತ್ತೆ ತಮ್ಮ ಲಯವನ್ನು ಕಂಡುಕೊಂಡು, ಬರ್ಮುಡಾ ಬೌಲರ್‌ಗಳ ಎಸೆತಗಳನ್ನು ಚಚ್ಚಿದ ಪರಿಣಾಮ, ಭಾರತಕ್ಕೆ 257 ರನ್‌ಗಳ ದಾಖಲೆಯ ಗೆಲುವು ಲಭಿಸಿತು.

ಸೋಮವಾರ (ಮಾ.19)ದಂದು ನಡೆದ ಗ್ರೂಪ್‌ ಬಿ ನ ತನ್ನ ಎರಡನೇ ಪಂದ್ಯದಲ್ಲಿ ಭಾರತ ತಂಡ ತನ್ನ ಎದುರಾಳಿ ಬರ್ಮುಡಾದ ಮೇಲೆ ಸುಲಭ ಜಯ ದಾಖಲಿಸಿತು. ಭಾರತದ ಬೃಹತ್‌ ಮೊತ್ತದ ಬೆನ್ನು ಹತ್ತಿದ ಬರ್ಮುಡಾ 43.1 ಓವರ್‌ಗಳಲ್ಲಿ ಕೇವಲ 156 ರನ್‌ ಗಳಿಸಿ ಭಾರತಕ್ಕೆ ಶರಣಾಯಿತು. ಭಾರತದ ಪರ ಅಜಿತ್‌ ಅಗರ್ಕರ್‌ ಹಾಗೂ ಅನಿಲ್ಘ ಕುಂಬ್ಳೆ ತಲಾ 3 ವಿಕೆಟ್‌ ಪಡೆದರು.

Great partnership b/w Sourav and Shewag helped India to register a mammoth scoreಇದಕ್ಕೂ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 413 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು. ಇದು ವಿಶ್ವಕಪ್‌ ಇತಿಹಾಸದಲ್ಲಿ ಅತಿಹೆಚ್ಚಿನ ಮೊತ್ತವಾಗಿದೆ. ಸೌರವ್‌ ಗಂಗೂಲಿ(89), ಯುವರಾಜ್‌ ಸಿಂಗ್‌(83), ಸಚಿನ್‌ ತೆಂಡೂಲ್ಕರ್‌(57) ರನ್‌ ಪೇರಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಆದರೆ ದಿನದ ಆಕರ್ಷಣೆ 87 ಎಸೆತದಲ್ಲಿ 114(17 ಬೌಂಡರಿ, 3 ಸಿಕ್ಸರ್‌) ರನ್‌ ಚೆಚ್ಚಿದ ಸೆಹ್ವಾಗ್‌ ಪಾಲಿಗೆ ಸೇರುತ್ತದೆ.

ಪಂದ್ಯದ ವಿಶೇಷ: ವಿಶ್ವಕಪ್‌ ಇತಿಹಾಸದಲ್ಲಿ ಬೃಹತ್‌ ಮೊತ್ತ ದಾಖಲು(413). 257 ರನ್‌ಗಳ ಭಾರಿ ಅಂತರದಿಂದ ಜಯ ಸಾಧನೆ. ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್‌(18) ಸಿಡಿಸಿದ ಗೌರವವನ್ನು ಆಸ್ಟ್ರೇಲಿಯಾದೊಡನೆ ಹಂಚಿಕೆ.

ಈ ಗೆಲುವಿನೊಂದಿಗೆ ಭಾರತ ಎರಡನೇ ಸುತ್ತಿಗೆ ಅರ್ಹತೆ ಗಳಿಸುವ ಆಸೆಯನ್ನು ಜೀವಂತವಾಗಿಸಿಕೊಂಡಿದೆ. ಬಿ ಗುಂಪಿನಲ್ಲಿ ಎರಡನೇ ಸ್ಥಾನಕ್ಕೆ ಏರಿದೆ. ಭಾರತ ತನ್ನ ಮುಂದಿನ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಸೆಣಸಲಿದೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X