ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್‌ ಕೋಚ್‌ ಬಾಬ್‌ ವೂಲ್ಮರ್‌ ದುರಂತ ಸಾವು

By Staff
|
Google Oneindia Kannada News

Pak cricket team coach Bob Woolmer diesಕಿಂಗ್‌ಸ್ಟನ್‌: ಪಾಕಿಸ್ತಾನದ ತರಬೇತುದಾರ ಬಾಬ್‌ ವೂಲ್ಮರ್‌ ಭಾನುವಾರ (ಮಾ .18) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಜಮೈಕದ ಪೆಗಾಸಸ್‌ ಹೋಟೆಲ್‌ನಲ್ಲಿ ತಂಗಿದ್ದ ಬಾಬ್‌ ವೂಲ್ಮರ್‌ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಜಮೈಕಾ ಯುನಿವರ್ಸಿಟಿ ಆಸ್ಪತ್ರೆಗೆ ಸೇರಿಸದರೂ ಫಲಕಾರಿಯಾಗದೆ ಕೊನೆಯುಸಿರೆಳಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಹೃದಯಾಘಾತವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆ.

ಪಾಕಿಸ್ತಾನದ ತಂಡ ಐರ್ಲೆಂಡ್‌ ತಂಡದ ವಿರುದ್ಧ 3 ವಿಕೆಟ್‌ನಿಂದ ಹೀನಾಯ ಸೋಲು ಅನುಭವಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಬಾಬ್‌ ವೂಲ್ಮರ್‌ ಕಾಣಿಸಿಕೊಂಡಿದ್ದರು. ತಮ್ಮ ವೃತ್ತಿ ಜೀವನದ ಅತ್ಯಂತ ಕಳಪೆ ಪ್ರದರ್ಶನ ಇದಾಗಿದೆ ಎಂದು ಮನ ನೊಂದು ನುಡಿದಿದ್ದರು. ನಂತರ ಯಾರ ಕಣ್ಣಿಗೂ ಕಾಣಿಸಿಕೊಂಡಿರಲಿಲ್ಲ ಎಂದು ಪಾಕ್‌ ತಂಡದ ವ್ಯವಸ್ಥಾಪಕ ತಲತ್‌ ಅಲಿ ತಿಳಿಸಿದ್ದಾರೆ.

ಜೀವನದ ಗತ ದಿನಗಳ ಮೆಲುಕು ಇಲ್ಲಿದೆ:

  • 1948 ಮೇ 14 ರಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ಬಾಬ್‌ ವೂಲ್ಮರ್‌ ಜನಿಸಿದ್ದರು.
  • 1975 ರಲ್ಲಿ ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್‌ ಪರ , ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯವಾಡಿದರು.
  • ಒಟ್ಟು 19 ಟೆಸ್ಟ್‌ ಹಾಗೂ 9 ಏಕದಿನ ಪಂದ್ಯ ಆಡಿದ್ದರು. ಟೆಸ್ಟ್‌ನಲ್ಲಿ3 ಶತಕ ಗಳಿಕೆ.
  • ಬಲಗೈ ಅಟಗಾರ ಹಾಗೂ ಮಧ್ಯಮ ವೇಗದ ಬೌಲರ್‌ ಆಗಿದ್ದ ಬಾಬ್‌, 350 ದೇಶೀಯ ಪಂದ್ಯಗಳಲ್ಲಿ 10,868 ರನ್‌ ಗಳಿಸಿದ್ದರು.
  • ಬೌಲಿಂಗ್‌ನಲ್ಲಿ 47 ಕ್ಕೆ 7 ವಿಕೆಟ್‌ ಶೇಷ್ಠ ಸಾಧನೆ.
  • 1981 ರಲ್ಲಿ ದಕ್ಷಿಣ ಆಫ್ರಿಕಾ ಕೋಚ್‌ ಆಗಿ ವೃತ್ತಿ ಆರಂಭ.
  • ಕ್ರಿಕೆಟ್‌ ತರಬೇತಿಗೆ ಆಧುನಿಕತೆ ತಂದ ಕೀರ್ತಿ ಸಲ್ಲುತ್ತದೆ. ಕಂಪ್ಯೂಟರ್‌(ಲ್ಯಾಪ್‌ಟಾಪ್‌ ಕೋಚ್‌) ಮೂಲಕ ಚಾಣಕ್ಷತನ ಮೆರೆಯುತ್ತಿದ್ದರು.
  • ದಕ್ಷಿಣ ಆಫ್ರಿಕ ತಂಡವನ್ನು 1999ರ ಸೆಮಿಫೈನಲ್‌ಗೆ ತಲುಪುವಂತೆ ಮಾಡಿದರು. ನಂತರ ಪಾಕ್‌ ತಂಡದ ಕೋಚ್‌ ಆಗಿ ಸಾಕಷ್ಟು ಬದಲಾವಣೆ ತಂದಿದ್ದರು.
  • 1976 ರಲ್ಲಿ ವಿಸ್ಡನ್‌ ಕ್ರಿಕೆಟರ್‌ ಪ್ರಶಸ್ತಿ ಪಡೆದಿದ್ದರು.
(ಏಜನ್ಸೀಸ್‌)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X