ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

19 ರೈಲು ನಿಲ್ದಾಣಗಳು ವಿಶ್ವದರ್ಜೆಗೆ: ಸಚಿವ ಆರ್‌. ವೇಲು

By Staff
|
Google Oneindia Kannada News

ನವದೆಹಲಿ: ಬೆಂಗಳೂರು ಸೇರಿದಂತೆ ದೇಶದ 19 ಪ್ರಮುಖ ರೈಲು ನಿಲ್ದಾಣಗಳನ್ನು ವಿಶ್ವದರ್ಜೆಗೆ ಏರಿಸಲಾಗುವುದು ಎಂದು ರೈಲು ಖಾತೆ ರಾಜ್ಯಸಚಿವ ಆರ್‌. ವೇಲು ಹೇಳಿದ್ದಾರೆ.

ರೈಲ್ವೆ ವಲಯಗಳಿಗೆ ಈ ಬಗ್ಗೆ ನಿರ್ದೇಶನವನ್ನು ನೀಡಲಾಗಿದೆ. ಬೆಂಗಳೂರು ಸೇರಿದಂತೆ ಪುನಾ, ಮುಂಬಯಿ, ಲಕ್ನೋ, ಆನಂದ್‌ ವಿಹಾರ್‌(ದೆಹಲಿ), ಅಮೃತ್‌ಸರ್‌, ವಾರಣಸಿ, ಚೆನ್ನೈ, ತಿರುವನಂತಪುರ, ಸಿಕಂದರಾಬಅದ್‌, ಅಹಮದಾಬಅದ್‌, ಪಟ್ನಾ, ಭುವನೇಶ್ವರ್‌, ಮಥುರಾ ಹಾಗೂ ಭೂಪಾಲ್‌ನ ರೈಲು ನಿಲ್ದಾಣಗಳು ಈ ಕೆಳಗಿನ ಸೌಲಭ್ಯಗಳನ್ನು ಹೊಂದಲಿದೆ.

  • ಸಕಲ ಸೌಲಭ್ಯಗಳುಳ್ಳ ನವೀಕೃತ ಕಟ್ಟಡ
  • ನೂತನ ಆಹಾರ ಮಳಿಗೆ, ಹಣ ವಿನಿಮಯ ಕೇಂದ್ರ, ಏಟಿಎಂ ಕೇಂದ್ರ, ಉಪಹಾರ ಗೃಹ, ಅಂಗಡಿ ಮಳಿಗೆ.
  • ಪ್ರತ್ಯೇಕ ಆಗಮನ ಹಾಗೂ ನಿರ್ಗಮನ ವ್ಯವಸ್ಥೆ. ಇತರ ಸಂಪರ್ಕ ಪಯಣಕ್ಕೆ ವ್ಯವಸ್ಥೆ.
  • ದೀಪಗಳಿಂದ ಅಲಂಕೃತ ಒಳಾಂಗಣ, ಫ್ಲಾಟ್‌ಫಾರಂ ನಿಂದ ಫ್ಲಾಟ್‌ಫಾರ್‌ಗೆ ಹೋಗಲು ಎಲಿವೇಟರ್‌ ಹಾಗೂ ಅಂಗವಿಕಲರಿಗೆ ಸಹಾಯಕ ಸೌಲಭ್ಯಗಳು.
ಸಾರ್ವಜನಿಕ ವಲಯದ ಸಂಸ್ಥೆಗೆ ಈ ಯೋಜನೆಯನ್ನು ಒಪ್ಪಿಸಲಾಗುವುದು ಎಂದು ಸಚಿವರು ಹೇಳಿದರು.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X