• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಐರ್ಲೆಂಡ್‌ ವಿರುದ್ಧ ಸೋಲು , ಪಾಕ್‌ ತಂಡ ಮನೆಗೆ

By Staff
|

Irish womens celebrates victory over Pakಜಮೈಕಾ : ಏಷ್ಯಾ ಖಂಡದ ಬಲಿಷ್ಠ ಕ್ರಿಕೆಟ್‌ತಂಡಗಳಲ್ಲಿ ಒಂದಾದ ಪಾಕಿಸ್ತಾನ, ದುರ್ಬಲ ಐರ್ಲೆಂಡ್‌ ವಿರುದ್ಧ ಸೋತು, ವಿಶ್ವಕಪ್‌ನಿಂದ ಹೊರಬಿದ್ದಿದೆ.

ಗ್ರೂಪ್‌ ಡಿ ನ ಪಂದ್ಯಾವಳಿಯಲ್ಲಿ ಗೆಲುವಿನ ಗುರಿಯಾದ 128 ರನ್‌(ಪರಿಷ್ಕೃತ)ಗಳನ್ನು ಐರ್ಲೆಂಡ್‌ ತಂಡ 47 ನೇ ಓವರ್‌ನಲ್ಲಿ ತಲುಪಿ, ಪಾಕ್‌ ತಂಡಕ್ಕೆ ಆಘಾತ ನೀಡಿತು.

ಪಾಕ್‌ ಪರ ಮಹಮ್ಮದ್‌ ಸಮಿ 29 ರನ್ನಿತ್ತು 3 ವಿಕೆಟ್‌ ಗಳಿಸಿದರು. ಐರ್ಲೆಂಡ್‌ ಪರ ಓ ಬ್ರೇನ್‌ 72 ರನ್‌ ಗಳಿಸಿ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು.

ಇದಕ್ಕೂ ಮುನ್ನ ಸತತವಾಗಿ ಎರಡನೇ ಪಂದ್ಯದಲ್ಲಿ ಪಾಕ್‌ ಬ್ಯಾಟ್ಸ್‌ ಮನ್‌ಗಳು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ನಿಯಮಿತವಾಗಿ ವಿಕೆಟ್‌ ಕಳೆದುಕೊಂಡು ಕೇವಲ 132 ರ ಅಲ್ಪ ಮೊತ್ತಕ್ಕೆ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಐರ್ಲೆಂಡ್‌ನ ಪರ ರಂಕೀನ್‌ 32 ರನ್ನಿತ್ತು 3 ವಿಕೆಟ್‌ ಹಾಗೂ ಬೊಥಾ 5 ರನ್ನಿಗೆ 2 ವಿಕೆಟ್‌ ಪಡೆದು ಉತ್ತಮ ಬೌಲಿಂಗ್‌ ಪ್ರದರ್ಶಿಸಿದರು.

ಆರಂಭಿಕ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಸೋಲು ಅನುಭವಿಸಿದ ಪಾಕ್‌ ತಂಡ ವಿಶ್ವಕಪ್‌ ಟೂರ್ನಿಯಿಂದ ಹೊರಹಾಕಲ್ಪಟ್ಟಿದೆ.

ಮಾರ್ಚ್‌ 18, ಭಾನುವಾರದ ಪಂದ್ಯಗಳು:

  • ಆಸ್ಟ್ರೇಲಿಯಾ-ಹಾಲೆಂಡ್‌

ಸ್ಥಳ: ವಾರ್ನರ್‌ ಪಾರ್ಕ್‌, ಸೆಂಟ್‌ ಕೀಟ್ಸ್‌

ಸಮಯ : ಸಂಜೆ 7, ಸೆಟ್‌ ಮಾಕ್ಸ್‌ ನೇರ ಪ್ರಸಾರ

  • ಇಂಗ್ಲೆಂಡ್‌ -ಕೆನಡಾ

ಸ್ಥಳ : ಬೀಸ್‌ ಜೌರ್‌, ಸೆಂಟ್‌ ಲೂಸಿಯಾ

ಸಮಯ : ಸಂಜೆ 7, ಸಬ್‌ ಟಿವಿ ನೇರ ಪ್ರಸಾರ

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X