ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಕಪ್‌ ಕ್ರಿಕೆಟ್‌: ಭಾರತ ತಂಡಕ್ಕೆ ಹೀನಾಯ ಸೋಲು

By Staff
|
Google Oneindia Kannada News

Bangla players celebrates has Sachin walks away to pavillonಪೋರ್ಟ್‌ ಆಫ್‌ ಸ್ಪೇನ್‌ : ಭಾರತ ಕ್ರಿಕೆಟ್‌ ತಂಡಕ್ಕೆ ಅವಧಿಗೆ ಮುನ್ನವೇ ಗ್ರಹಣ ಬಡಿದು ಬಿಟ್ಟಿತು. ತನ್ನ ಆರಂಭಿಕ ಪಂದ್ಯಾವಳಿಯಲ್ಲಿ ಸಾಧಾರಣ ಎದುರಾಳಿ ಬಾಂಗ್ಲಾ ತಂಡದ ವಿರುದ್ಧ ಸೋತು ಸುಣ್ಣವಾಯಿತು.

ಬಾಂಗ್ಲಾ ತಂಡ ಗೆಲ್ಲಲು ಬೇಕಿದ್ದ ಗುರಿಯಾದ 193 ರನ್‌ಗಳನ್ನು 48.3 ಓವರ್‌ಗಳಲ್ಲಿ ಕೇವಲ 5 ವಿಕೆಟ್‌ ಕಳೆದುಕೊಂಡು ಸುಲಭವಾಗಿ ಸಾಧಿಸಿ ಜಯಗಳಿಸಿತು.

ಬ್ಯಾಟಿಂಗ್‌ನಲ್ಲಿ ವಿಫಲರಾದ ವಿರೇಂದರ್‌ ಸೆಹ್ವಾಗ್‌ಬೌಲಿಂಗ್‌ನಲ್ಲಿ 17 ರನ್ನಿತ್ತು 2 ವಿಕೆಟ್‌ ಪಡೆದರು. ಆದರೆ ಬಾಂಗ್ಲಾ ದ ಬ್ಯಾಟ್ಸ್‌ ಮನ್‌ಗಳಾದ ತಮೀಮ್‌ ಇಕ್ಬಾಲ್‌ (51), ಸಬೀಬುಲ್‌ ಹಸನ್‌(53), ಮುಫ್ತಿಕರ್‌ ರಹೀಂ (ಅಜೇಯ 56) ನೆರವಿನಿಂದ ಜಯವನ್ನು ಸಾಧಿಸಿತು.

ಇದಕ್ಕೂ ಮುನ್ನ, ಗೆಲ್ಲುವ ಫೇವರೇಟ್‌ ಎಂದು ಬಿಂಬಿಸಲಾಗಿದ್ದ ಭಾರತ ತಂಡ ಮೊದಲು ಬ್ಯಾಟಿಂಗ್‌ಗೆ ಇಳಿದರೂ, ಉತ್ತಮ ಆರಂಭ ಹುಟ್ಟು ಹಾಕುವಲ್ಲಿ ವಿಫಲವಾಯಿತು. ಬಾಂಗ್ಲಾದ ಅನನುಭವಿ ಬೌಲರ್‌ಗಳು, ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವು ಆದರು. ಸೆಹ್ವಾಗ್‌(2) ಮತ್ತೆ ನಿರಾಶೆ ಮೂಡಿಸಿದರು. ಉತ್ತಪ್ಪ(9), ದ್ರಾವಿಡ್‌(14), ಸಚಿನ್‌(7) , ಧೋನಿ (0) ಬಹು ಬೇಗ ಪೆವಿಲಿಯನ್‌ ಹಾದಿ ಹಿಡಿದರು. ಸೌರವ್‌ ಗಂಗೂಲಿ ನಿಧಾನಗತಿಯಲ್ಲಿ 66 ರನ್‌ ಹಾಗೂ ಯುವರಾಜ್‌ ಸಿಂಗ್‌ 47 ರನ್‌ ಹೊಡೆದು ತೀರಾ ಅಲ್ಪ ಮೊತ್ತಕ್ಕೆ ಔಟ್‌ ಆಗುವುದನ್ನು ತಪ್ಪಿಸಿದರು. ಭಾರತದ ಮೊತ್ತಕ್ಕೆ ಬಾಲಂಗೋಚಿ ಮುನಾಫ್‌ ಪಟೇಲ್‌(16) ಹಾಗೂ ಜಹೀರ್‌ ಖಾನ್‌(15) ತಮ್ಮ ಕಾಣಿಕೆ ನೀಡಿದರು.

ಬಾಂಗ್ಲಾ ಪರ ಎಂ. ಮೊರ್ತುಜಾ 38 ರನ್ನಿತ್ತು 4 ವಿಕೆಟ್‌ ಪಡೆದು ಯಶಸ್ವಿ ಬೌಲರ್‌ ಎನಿಸಿದರು. ಉಳಿದಂತೆ ಅಬ್ದುಲ್‌ ರಜಾಕ್‌ ಹಾಗೂ ಮಹಮ್ಮದ್‌ ರಫೀಕ್‌ ತಲಾ 3 ವಿಕೆಟ್‌ ಪಡೆದರು.

ಮಾರ್ಚ್‌ 18, ಭಾನುವಾರದ ಪಂದ್ಯಗಳು:

  • ಆಸ್ಟ್ರೇಲಿಯಾ-ಹಾಲೆಂಡ್‌
ಸ್ಥಳ: ವಾರ್ನರ್‌ ಪಾರ್ಕ್‌, ಸೆಂಟ್‌ ಕೀಟ್ಸ್‌
ಸಮಯ : ಸಂಜೆ 7, ಸೆಟ್‌ ಮಾಕ್ಸ್‌ ನೇರ ಪ್ರಸಾರ

  • ಇಂಗ್ಲೆಂಡ್‌ -ಕೆನಡಾ
ಸ್ಥಳ : ಬೀಸ್‌ ಜೌರ್‌, ಸೆಂಟ್‌ ಲೂಸಿಯಾ
ಸಮಯ : ಸಂಜೆ 7, ಸಬ್‌ ಟಿವಿ ನೇರ ಪ್ರಸಾರ

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X