ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛತ್ತೀಸ್‌ಗಢದಲ್ಲಿ ನಕ್ಸಲ್‌ ದಾಳಿ : 50 ಜನ ಪೊಲೀಸರ ಬಲಿ

By Staff
|
Google Oneindia Kannada News

ಜಗದಾಳ್‌ಪುರ(ಛತ್ತೀಸ್‌ಗಢ) : ಡಾಂಟೆವಾಡಾ ಜಿಲ್ಲೆಯ ಪೊಲೀಸ್‌ ಶಿಬಿರವೊಂದರ ಮೇಲೆ ನಕ್ಸಲೀಯರು ಭೀಕರ ದಾಳಿ ನಡೆಸಿದ ಪರಿಣಾಮ, 50 ಜನ ಪೊಲೀಸರು ಬಲಿಯಾಗಿದ್ದಾರೆ.

ಗುರುವಾರ ನಸುಕಿನಲ್ಲಿ ಈ ದುರಂತ ನಡೆದಿದೆ. ದಾಳಿಯಲ್ಲಿ ಹಲವು ಪೊಲೀಸ್‌ ಅಧಿಕಾರಿಗಳು ಗಾಯಗೊಂಡಿದ್ದಾರೆ. ಬಿಜಾಪುರದ ಸಮೀಪವಿರುವ, ಕುತ್ರು ಪೊಲೀಸ್‌ ಠಾಣೆಯ ಆಶ್ರಯದಲ್ಲಿ ರಾಣಿಬೋದ್ಲಿ ಆಶ್ರಮ ಶಾಲೆಯಲ್ಲಿ ಶಿಬಿರ ನಡೆದಿತ್ತು. ಛತ್ತೀಸ್‌ಗಢ ವಿಶೇಷ ಸಶಸ್ತ್ರ ಪಡೆ ಸದಸ್ಯರು ಹಾಗೂ ವಿಶೇಷ ಪೊಲೀಸ್‌ ಅಧಿಕಾರಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.

ಸುಮಾರು 400 ಬಂಡುಕೋರರು ಗುಂಡಿನ ಸುರಿಮಳೆ ಜೊತೆಗೆ ಪೆಟ್ರೋಲ್‌ ಬಾಂಬ್‌ ಹಾಗೂ ಇತರ ಸ್ಫೋಟಕ ವಸ್ತುಗಳಿಂದ ದಾಳಿ ನಡೆಸಿದರು. ಬಲಿಯಾದ ಅನೇಕರು, ದಾಳಿ ಸಂದರ್ಭದಲ್ಲಿ ನಿದ್ರಾವಸ್ಥೆಯಲ್ಲಿದ್ದರು. ಹೆಲಿಕಾಪ್ಟರ್‌ ಮೂಲಕ ತಕ್ಷಣವೇ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸ್‌ ವರಿಷ್ಠರು, ಪರಿಸ್ಥಿತಿ ಪರಿಶೀಲಿಸಿದರು ಎಂದು ಮೂಲಗಳು ಹೇಳಿವೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X