• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಿಕಿ ಪಾಂಟಿಂಗ್‌ ಶತಕ : ಕೆನಡಾ ವಿರುದ್ಧ ಆಸಿಸ್‌ಗೆ ಜಯ

By Staff
|

ಸೈಂಟ್‌ ಕಿಟ್ಸ್‌: ನಾಯಕ ರಿಕಿ ಪಾಂಟಿಂಗ್‌ ಅವರ 23ನೇ ಭರ್ಜರಿ ಶತಕದ ನೆರವಿನಿಂದ, ಆಸ್ಟ್ರೇಲಿಯಾ ತಂಡ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಸ್ಕಾಟ್ಲೆಂಡ್‌ ವಿರುದ್ಧ 202 ರನ್‌ಗಳ ಜಯವನ್ನು ಸಾಧಿಸಿದೆ.

ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ 6ವಿಕೆಟ್‌ಗಳ ನಷ್ಟಕ್ಕೆ 334ರನ್‌ಗಳ ಬೃಹತ್‌ ಮೊತ್ತ ದಾಖಲಿಸಿತು. ಮ್ಯಾಥ್ಯೂ ಹೇಡನ್‌ ಅರ್ಧಶತಕ ಬಾರಿಸಿದರು. ಆ್ಯಡಂ ಗಿಲ್‌ಕ್ರಿಸ್ಟ್‌, ಬ್ರಾಡ್‌ ಹಾಗ್‌ ಉಪಯುಕ್ತ ಬ್ಯಾಟಿಂಗ್‌ ಪ್ರದರ್ಶಿಸಿದರು.

ಆಸ್ಟ್ರೇಲಿಯಾದ 334ರನ್‌ಗಳ ಬೃಹತ್‌ ಮೊತ್ತವನ್ನು ಬೆನ್ನಟ್ಟಿದ್ದ ಸ್ಕಾಟ್ಲೆಂಡ್‌ ತಂಡ 40.1 ಓವರುಗಳಲ್ಲಿ ಕೇವಲ 131 ರನ್‌ ಗಳಿಸಿ ತನ್ನೆಲ್ಲ ವಿಕೆಟ್‌ ಕಳೆದುಕೊಂಡು, ಆಸೀಸ್‌ಗೆ ಸುಲಭ ತುತ್ತಾಯಿತು.

ಆಸೀಸ್‌ ಪರ ಮೆಕ್‌ಗ್ರಾಥ್‌ 14ರನ್ನಿತ್ತು 3 ವಿಕೆಟ್‌ ಹಾಗೂ ಟೈಟ್‌ 45 ಕ್ಕೆ 2 ವಿಕೆಟ್‌ ಪಡೆದು ಯಶಸ್ವಿ ಬೌಲರ್‌ ಎನಿಸಿದರು.

ಸ್ಕಾಟ್ಲೆಂಡ್‌ ಪರ ಸ್ಮಿತ್‌ 51ರನ್‌ ಗಳಿಸಿದರು.

ಪಂದ್ಯದ ವಿಶೇಷ : ರಿಕಿ ಪಾಂಟಿಂಗ್‌ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಸಾವಿರ ರನ್‌(1111) ಗಳಿಸಿದ ಆರನೇ ಆಟಗಾರರೆನಿಸಿದರು ಹಾಗೂ ವಿಶ್ವಕಪ್‌ಗಳಲ್ಲಿ ಇದುವರೆವಿಗೂ 23 ಸಿಕ್ಸರ್‌ ಸಿಡಿಸಿ, ಭಾರತದ ಗಂಗೂಲಿಯನ್ನು ಹಿಂದಕ್ಕೆ ತಳ್ಳಿ ದಾಖಲೆ ಮೆರೆದರು.

ಕೀನ್ಯಾಕ್ಕೆ ಸುಲಭ ಜಯ

ಬುಧವಾರ ನಡೆದ ‘ಸಿ’ಗುಂಪಿನ ಇನ್ನೊಂದು ಪಂದ್ಯದಲ್ಲಿ ಕೀನ್ಯಾ ತಂಡ ಕೆನಡಾ ತಂಡವನ್ನು ಸುಲಭವಾಗಿ ಸೋಲಿಸಿ, ಶುಭಾರಂಭ ಮಾಡಿತು. ಕೀನ್ಯಾ ತಂಡ ಗೆಲ್ಲಲು ಬೇಕಾಗಿದ್ದ 200 ರನ್‌ಗಳ ಗುರಿಯನ್ನು 43.2 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಕೆನಡಾ ಪರ ಬಾರ್ಮೆಟ್‌(41) ಹಾಗೂ ಮುಲ್ಲಾ (34) ರನ್‌ ಗಳಿಸಿದರು. ಆದರೆ ಕೀನ್ಯಾ ತಂಡದ ಕರಾರುವಾಕ್‌ ಬೌಲಿಂಗ್‌ ಎದುರು ಕೆನಡಾ ತಂಡ ಹೆಚ್ಚು ರನ್‌ ಗಳಿಸಲು ಸಾಧ್ಯವಾಗಲಿಲ್ಲ. ಕೀನ್ಯಾ ಪರ ಸ್ಟೀವ್‌ ಟಿಕೊಲೊ ಅಜೇಯ 72 ರನ್‌ ಹಾಗೂ ಮಿಶ್ರಾ ಅಜೇಯ 35 ರನ್‌ ಗಳಿಸಿದರು. ಇದಕ್ಕೂ ಮುನ್ನ ಆರಂಭಿಕ ಆಟಗಾರ ಔಮಾ 58 ರನ್‌ ಹೊಡೆದು ಉತ್ತಮ ಆರಂಭ ಒದಗಿಸಿಕೊಟ್ಟಿದ್ದರು.

ಪಂದ್ಯದ ವಿಶೇಷ : 1992ರ ವಿಶ್ವಕಪ್‌ನಲ್ಲಿ ವೆಸ್ಟ್‌ ಇಂಡೀಸ್‌ ತಂಡವನ್ನು ಪ್ರತಿನಿಧಿಸಿದ್ದ ಕಮಿನ್ಸ್‌ ಈ ಪಂದ್ಯದಲ್ಲಿ ಕೆನಡಾ ತಂಡದ ಪರ ಆಡಿದರು.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X