ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು-ಸಿಂಗಪುರ ನಡುವೆ ನಿತ್ಯ ವಿಮಾನ ಹಾರಾಟ

By Staff
|
Google Oneindia Kannada News

ೆಂಗಳೂರು : ಬೆಂಗಳೂರಿನಿಂದ ಸಿಂಗಪುರಕ್ಕೆ ಪ್ರತಿದಿನ ವಿಮಾನ ಯಾನ ಮಾರ್ಚ್‌28ರಿಂದ ಲಭ್ಯ ಎಂದು ಸಿಂಗಪುರ ಏರ್‌ ಲೈನ್ಸ್‌ ಸಂಸ್ಥೆ ಹೇಳಿದೆ.

ಪ್ರಸ್ತುತ ವಾರಕ್ಕೆ 6 ಬಾರಿ ವಿಮಾನ ಹಾರಾಟವಿದ್ದು, ಈ ಸೇವೆಯನ್ನು ವಿಸ್ತರಿಸಿ ಪ್ರತಿದಿನ ಪ್ರಯಾಣಿಕರಿಗೆ ಅನುಕೂಲಕರ ರೀತಿಯಲ್ಲಿ ವಿಮಾನ ಯಾನವನ್ನು ಕಲ್ಪಿಸಲಾಗುತ್ತದೆ. ಸಿಂಗಪುರದಿಂದ ರಾತ್ರಿ8:15ಕ್ಕೆ(ಸ್ಥಳೀಯ ಕಾಲಮಾನ ಪ್ರಕಾರ) ಹೊರಟು ಬೆಂಗಳೂರನ್ನು ರಾತ್ರಿ 11ಕ್ಕೆ ತಲುಪಲಿದೆ. ರಾತ್ರಿ 11:15ಕ್ಕೆ ಬೆಂಗಳೂರಿನಂದ ಹೊರಡುವ ವಿಮಾನ ಸಿಂಗಪುರವನ್ನು 06:20ಕ್ಕೆ ತಲುಪಲಿದೆ.

ಇದರ ಜೊತೆಗೆ ಸಿಂಗಾಪುರ ಏರ್‌ಲೈನ್ಸ್‌ ಸಂಸ್ಥೆಯ ಹೊಸ ಯೋಜನೆಯ ಪ್ರಕಾರ, ಎಕಾನಾಮಿಕ್‌ ಶ್ರೇಣಿಯ ದರದಲ್ಲಿ ಶೇ. 23 ರಿಂದ 41ರಷ್ಟು ಕಡಿತ ಸಾಧ್ಯವಿದೆ. ಇಂಡೋನೇಶಿಯಾ, ಫಿಲಿಫೈನ್ಸ್‌, ಚೀನಾ ಹಾಗೂ ನ್ಯೂಜಿಲ್ಯಾಂಡ್‌ ದೇಶಗಳ ಪ್ರವಾಸದ ಜೊತೆಗೆ ಉಚಿತ ವಸತಿ ಹಾಗೂ ಉಪಹಾರದ ವ್ಯವಸ್ಥೆ ಕೂಡ ಇರುತ್ತದೆ.

ಈ ಯೋಜನೆಯ ಬುಕ್ಕಿಂಗ್‌ ಸೌಲಭ್ಯ ಏಪ್ರಿಲ್‌ 15 ರಿಂದ ಮೇ 31ರವರೆಗೂ ಜಾರಿಯಲ್ಲಿರುತ್ತದೆ ಎಂದು ಸಿಂಗಾಪುರ್‌ ಏರ್‌ಲೈನ್ಸ್‌ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X