• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಸರ್ಕಾರದಿಂದ ಚಾಲನೆ

By Staff
|

ಬೆಂಗಳೂರು : ನೂತನವಾಗಿ ಸರ್ಕಾರ ರಚಿಸಿರುವ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರಕ್ಕೆ, ಐವರು ಗಣ್ಯರನ್ನು ನಾಮಕರಣ ಮಾಡಲಾಗಿದೆ.

ಕನಕ ಗುರುಪೀಠದ ಶ್ರೀ ನಿರಂಜನ ಸ್ವಾಮೀಜಿ, ಜಲಸಂಪನ್ಮೂಲ ಸಚಿವ ಕೆ.ಎಸ್‌.ಈಶ್ವರಪ್ಪ, ಕೃಷಿ ಸಚಿವ ಬಂಡೆಪ್ಪ ಕಾಂಶಂಪುರ, ಮೈಸೂರಿನ ನಿವೃತ್ತ ಮುಖ್ಯ ಅಭಿಯಂತರ ಎಂ.ರಾಮದಾಸ್‌ ಮತ್ತು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಎನ್‌.ಶ್ಯಾಗೋಟಿ ಪ್ರಾಧಿಕಾರದಲ್ಲಿದ್ದಾರೆ ಎಂದು ಮೂಲಗಳು ಹೇಳಿವೆ.

ಕುರುಬ ಜನಾಂಗದ ಶ್ರದ್ಧಾಭಕ್ತಿಯ ಕೇಂದ್ರವಾದ ಕನಕ ಗುರುಪೀಠವನ್ನು ಹೊಂದಿರುವ ಕಾಗಿನೆಲೆ ಅಭಿವೃದ್ಧಿಗೆ, ಸರ್ಕಾರ ಒತ್ತು ನೀಡಬೇಕೆಂಬ ಬೇಡಿಕೆ ಇತ್ತೀಚೆಗೆ ಕೇಳಿ ಬಂದಿತ್ತು. ಈ ನಿಟ್ಟಿನಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿದೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X