ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈಲು ಹಕ್ಕಿಗಳಿಗೆ ಟೆಲಿಫೋನ್‌ : ಮಾತಾಡಿ... ಹಗುರಾಗಿ...

By Staff
|
Google Oneindia Kannada News

ಬೆಂಗಳೂರು : ಜೈಲು ಹಕ್ಕಿಗಳು, ದೂರವಾಣಿ ಮೂಲಕ ಪ್ರಪಂಚದೊಂದಿಗೆ ಸದ್ಯದಲ್ಲಿಯೇ ಸಂಪರ್ಕ ಹೊಂದಬಹುದು. ಆತ್ಮೀಯರೊಂದಿಗೆ ಮಾತುಕತೆ ನಡೆಸಬಹುದು!

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಬಂಧಿಖಾನೆಯ ಹೆಚ್ಚುವರಿ ಪೊಲೀಸ್‌ ನಿರೀಕ್ಷಕ ಎಸ್‌.ಟಿ.ರಮೇಶ್‌, ಸುಮಾರು 2.39ಲಕ್ಷ ವೆಚ್ಚದಲ್ಲಿ ಬೆಂಗಳೂರು ಕೇಂದ್ರೀಯ ಕಾರಾಗೃಹದಲ್ಲಿ ಟೆಲಿಫೋನ್‌ ಬೂತ್‌ ಸ್ಥಾಪಿಸಿ, ಎಸ್‌ಟಿಡಿ ಸಂಪರ್ಕ ಸೇವೆ ನೀಡಲೂ ಸಹಾ ನಿರ್ಧರಿಸಲಾಗಿದೆ ಎಂದರು.

ಈ ಟೆಲಿಫೋನ್‌ ಬೂತ್‌ ಮೇಲೆ ನಿಗಾವಹಿಸಲಾಗಿದ್ದು, ಮಾತುಕತೆಯ ಎಲ್ಲಾ ವಿವರಗಳನ್ನು ಸುರಕ್ಷತೆಗಾಗಿ ರೆಕಾರ್ಡ್‌ ಮಾಡಲಾಗುತ್ತದೆ. ಟೆಲಿಫೋನ್‌ ಕಾರ್ಡನ್ನು ಕೈದಿಗಳಿಗೆ ನೀಡಿ, ದಿನದ ಒಂದು ಅವಧಿಯಲ್ಲಿ ಮಾತುಕತೆಗೆ ಸಮಯ ನಿಗದಿಪಡಿಸಲಾಗುವುದು. ಅಲ್ಲದೇ ಕೈದಿಗಳ ಮಾನಸಿಕ ಸಮಸ್ಯೆಗಳ ಅರ್ಥಮಾಡಿಕೊಳ್ಳಲು, ಸಮಿತಿಯನ್ನು ರಾಜ್ಯದ 98 ಜೈಲುಗಳಲ್ಲಿ ರಚಿಸಲಾಗಿದೆ ಎಂದು ಹೇಳಿದರು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X