• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾ.17ರಂದು ‘ಎಲ್ಲರೊಳಗೊಂದಾಗು ಮಂಕುತಿಮ್ಮ’

By Staff
|

DV Gundappaಬೆಂಗಳೂರು : ‘ಎಲ್ಲರೊಳಗೊಂದಾಗು ಮಂಕುತಿಮ್ಮ’ ಎಂಬ ಕಾರ್ಯಕ್ರಮವನ್ನು, ಕವಿ ಡಾ. ಡಿ.ವಿ.ಗುಂಡಪ್ಪ ಅವರ 120ನೇ ಜನ್ಮದಿನದ ಅಂಗವಾಗಿ ಮಾ.17ರಂದು ಏರ್ಪಡಿಸಲಾಗಿದೆ.

ನಗರದ ಜೆ.ಸಿ.ರಸ್ತೆಯಲ್ಲಿರುವ ಎ.ಡಿ.ಎ ರಂಗಮಂದಿರದಲ್ಲಿ ಸಮಾಜ ಸೇವಕ ಸಮಿತಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅಂದು ಸಂಜೆ 4.30ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ.

ಈ ಕಾರ್ಯಕ್ರಮದ ಹೆಸರೇ ಸೂಚಿಸುವಂತೆ ಉದ್ದೇಶವೂ ಸಹ ಎಲ್ಲರೊಂದಿಗೂ ಕೂಡಿ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುವುದೇ ಆಗಿದೆ. ಇದಕ್ಕೆ ಪೂರಕವೆಂಬಂತೆ ಈ ಕಾರ್ಯಕ್ರಮದ ಸಹಭಾಗಿತ್ವವನ್ನು ಹಲವಾರು ಸಂಘಸಂಸ್ಥೆಗಳು ವಹಿಸಿಕೊಂಡಿವೆ. ಅವುಗಳೆಂದರೆ ‘ಅನುಭವಶಾಲೆ’, ‘ಮಿಂಚು’ - ಐಡಿಯಾಸ್‌, ‘ಭಾರತೀಯ ಸಮಾಜ ಸೇವಾ ಟ್ರಸ್ಟ್‌’, ‘ಪೆನ್‌ ಅಂಡ್‌ ಪವರ್‌’ ಪತ್ರಿಕೆ, ‘ಚೈತ್ರರಶ್ಮಿ’ ಪತ್ರಿಕೆ, ‘ಕಲಾಸ್ಫೂರ್ತಿ’ ಮತ್ತು ‘ಸಮಾಜ ಸೇವಕರ ಸಮಿತಿ(ರಿ)’.

ಮೇಲ್ಕಂಡ ಎಲ್ಲ ಸಂಸ್ಥೆಗಳೂ ಮೊಟ್ಟ ಮೊದಲ ಬಾರಿಗೆ ಕೂಡಿ ಮಾಡುತ್ತಿರುವ ಕಾರ್ಯಕ್ರಮಕ್ಕೆ ಉತ್ತಮ ಪ್ರೋತ್ಸಾಹ ಮತ್ತು ಪ್ರತಿಕ್ರಿಯೆ ಸಿಗುವ ನಿರೀಕ್ಷೆಯಿದೆ.

ಸಮಿತಿಯು ಕಾರ್ಯಕ್ರಮದ ಅಂಗವಾಗಿ ‘ಎಲ್ಲರೊಳಗೊಂದಾಗು ಮಂಕುತಿಮ್ಮ’ ಎಂಬ ಸಾಲಿನ ಮೇಲೆ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿತ್ತು. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕಾರ್ಯಕ್ರಮದ ದಿನದಂದು ಬಹುಮಾನ ವಿತರಣೆ ಮಾಡಲಾಗುತ್ತದೆ. ಅದೇ ದಿನದಂದು ಡಿ.ವಿ.ಜಿ ಸಾಹಿತ್ಯ ಪ್ರಚಾರದಲ್ಲಿ ತೊಡಗಿರುವವರಿಗೆ ಗೌರವಾರ್ಪಣೆ ಮಾಡಲಾಗುತ್ತದೆ.

ಕಾರ್ಯಕ್ರಮದ ಆಕರ್ಷಣೆಗಳು :

  • ಡಿ.ವಿ.ಜಿಯವರ ‘ಅನ್ತಃಪುರಗೀತೆ’ಗಳ ನೃತ್ಯರೂಪಕವನ್ನು ಸನಾತನ ಕಲಾಕ್ಷೇತ್ರದ ಹಿರಿಯ ಕಲಾವಿದೆ ಶ್ರೀಮತಿ ವೇದಪುಷ್ಪ ಅವರ ನಿರ್ದೇಶನದಲ್ಲಿ ಆಯೋಜಿಸಲಾಗಿದೆ.
  • ಶಂಕರ್‌ ಶಾನ್‌ಭಾಗ್‌ ಮತ್ತು ಡಾ.ರೋಹಿಣಿ ಮೋಹನ್‌ ಅವರಿಂದ ಕಗ್ಗಗಳ ಗಾಯನ ಮತ್ತು ಡಿವಿಜಿ ಅವರ ಕವನಗಳ ಗಾಯನ.
  • ಸಮಾಜ ಸೇವಕರ ಸಮಿತಿಯು ಆರಂಭಿಸಿರುವ ಉಚಿತ ಶಾಲೆ ‘ಸಾಕ್ಷರತುಂಗ’ದ ಬಗ್ಗೆ ಸಾಕ್ಷ್ಯಚಿತ್ರ ಪ್ರದರ್ಶನ.
  • ಕಾವ್ಯಾಲಯ ಪುಸ್ತಕಾಲಯದ ಖ್ಯಾತ ಪುಸ್ತಕಗಳ ಮಾರಾಟ, ಕನ್ನಡ ಶುಭಾಶಯ ಪತ್ರಗಳ ಮಾರಾಟ.
  • ಡಿ.ವಿ.ಜಿ ಅವರ ಅಪರೂಪದ ಚಿತ್ರಗಳ ಪ್ರದರ್ಶನ ಮತ್ತು ಕೈಬರಹದ ಪ್ರದರ್ಶನ.
  • ಕಾರ್ಯಕ್ರಮದ ಅಧ್ಯಕ್ಷತೆ - - ಪ್ರೊ.ಎಲ್‌.ಎಸ್‌.ಶೇಷಗಿರಿರಾವ್‌,
  • ಮುಖ್ಯ ಅತಿಥಿಗಳು -ಹಿರಿಯ ಪತ್ರಕರ್ತ ಜಿ.ಎನ್‌. ರಂಗನಾಥ್‌ರಾವ್‌, ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಐ.ಎಂ. ವಿಠ್ಠಲಮೂರ್ತಿ, ಹಿರಿಯ ಐ.ಏ.ಎಸ್‌ ಅಧಿಕಾರಿ ಗೋಪಾಲಕೃಷ್ಣ ಗೌಡ.
  • ಹಿರಿಯ ವಿದ್ವಾನ್‌ ಎನ್‌. ರಂಗನಾಥಶರ್ಮರವರಿಗೆ ಗೌರವಾರ್ಪಣೆ .
  • ಶಂಕರ ಶಾನ್‌ಬಾಗ್‌ ಮತ್ತು ಡಾ. ರೋಹಿಣಿ ಮೋಹನ್‌ಅವರಿಂದ ಕಗ್ಗಗಳ ಗಾಯನ.

ಸಮಾಜ ಸೇವಕರ ಸಮಿತಿ ಬಗ್ಗೆ ಎರಡು ಮಾತು :

ಸಮಾಜ ಸೇವಕರ ಸಮಿತಿಯ ಸದಸ್ಯರೆಲ್ಲರೂ ಯುವಕರೇ ಆಗಿದ್ದು ಬಹುಪಾಲು ಸಾಫ್ಟ್‌ವೇರ್‌ ಇಂಜಿನೀಯರ್‌ಗಳು, ವಿದ್ಯಾರ್ಥಿಗಳು, ಗೃಹಿಣಿಯರು ಮತ್ತು ವಯೋವೃದ್ಧರೂ ಕೂಡ ಇದ್ದಾರೆ. ಸುಮಾರು 5 ವರ್ಷಗಳಿಂದ ಹಲವಾರು ಸಾಂಸ್ಕೃತಿಕ, ಸಾಹಿತ್ಯಕ್ಕೆ ಸಂಬಂಧಪಟ್ಟ, ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಸಮಿತಿಯು ಆಚರಿಸಿಕೊಂಡು ಬರುತ್ತಿದೆ.

ಸಮಾಜದಲ್ಲಿ ವಿದ್ಯಾವಂತರ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಅರಿವು ಮೂಡಿಸುತ್ತಾ , ಜೊತೆ ಜೊತೆಗೆ ತಾವೂ ಸಹ ಈ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಸಾಹಿತ್ಯ ಮತ್ತು ಸಂಸ್ಕೃತಿಗಳು ಹೇಗೆ ಜನಜೀವನಕ್ಕೆ ಪೂರಕವಾಗಿ ಸಹಾಯ ನೀಡಬಲ್ಲವು ಎಂಬುದನ್ನು ಪ್ರಾಯೋಗಿಕವಾಗಿ ಆಚರಣೆಗೆ ತರುವುದೇ ಸಮಾಜ ಸೇವಕರ ಸಮಿತಿಯು ಈ ಕಾರ್ಯಕ್ರಮ ಹಮ್ಮಿಕೊಂಡಿರುವುದರ ಉದ್ದೇಶವಾಗಿದೆ.

ಯುವಕರೆಲ್ಲರೂ ಈಗಲೇ ಸಾಹಿತ್ಯ-ಸಂಸ್ಕೃತಿಗಳನ್ನು ತಮ್ಮ ಬಿಡುವಿಲ್ಲದ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ನೆಮ್ಮದಿಯಾಗಿರಬಹುದು ಎಂಬುದರ ಅರಿವು ಮೂಡಿಸುವುದು ಸಮಿತಿಯ ಉದ್ದೇಶ.

ಪುಸ್ತಕಗಳು, ಸಂಗೀತ, ಕಲೆ ಇವೆಲ್ಲವೂ ವಯಸ್ಸಾದವರಿಗೆ ಕಾಲ ಕಳೆಯಲು ಇರುವ ಸಾಧನಗಳೆಂಬ ತಪ್ಪು ಕಲ್ಪನೆಯನ್ನು ಯುವಜನಾಂಗದ ಮನಸ್ಸಿನಲ್ಲಿ ಮೂಡದಿರುವಂತೆ ಮಾಡುವುದೇ ಸಮಿತಿಯ ಧ್ಯೇಯ. ಈ ಎಲ್ಲ ಉದ್ದೇಶಗಳನ್ನು ಸಾಧಿಸುವುದರ ಮೂಲಕ ಹೆಚ್ಚಾಗುತ್ತಿರುವ ಆರ್ಥಿಕ, ಸಾಮಾಜಿಕ ಅಸಮತೋಲನವನ್ನು ಕಡಿಮೆಯಾಗಿಸುವುದೇ ಸಮಿತಿಯ ಪರಮ ಗುರಿ.

ಡಿ.ವಿ.ಜಿ ಯುವರ ‘ಮಂಕುತಿಮ್ಮನ ಕಗ್ಗ’ ಮತ್ತು ‘ಮರುಳು ಮುನಿಯನ ಕಗ್ಗ’ ಗಳ ಸಾರವನ್ನು ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ನಡೆಸಿದರೆ ಈ ಕಾರ್ಯಕ್ರಮ ಸಾರ್ಥಕವಾದಂತೆ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ :

ರಾಜಕುಮಾರ್‌ : 94481 71069

ರಾಘವೇಂದ್ರ : 9886 683008

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X