ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಕ್ಕಿದ್ದನ್ನು ದೋಚುವ ಕಳ್ಳರ ಗುಂಪಿನಲ್ಲಿ ಬಾಲಿವುಡ್‌ ನಟಿ!

By Staff
|
Google Oneindia Kannada News

ಬೆಂಗಳೂರು : ನಗರದಲ್ಲಿ ಬಂಧಿತರಾಗಿರುವ ಒಂದೇ ಕುಟುಂಬದ ಕಳ್ಳರ ಗುಂಪಿನಲ್ಲಿ, ಬಾಲಿವುಡ್‌ ಸಹನಟಿಯಾಬ್ಬಳಿರುವುದು ತಿಳಿದುಬಂದಿದೆ!

ಚೆಂದವಾಗಿ ಡ್ರೆಸ್‌ ಮಾಡಿಕೊಂಡು, ನಗರದ ಆಭರಣದ ಅಂಗಡಿಗಳು ಮತ್ತು ಶಾಪಿಂಗ್‌ ಕಾಂಪ್ಲೆಕ್ಸ್‌ಗಳಿಗೆ ನುಗ್ಗಿ, ಕೈಗೆ ಸಿಕ್ಕಿದ್ದನ್ನು ನಯವಾಗಿ ದೋಚುತ್ತಿದ್ದ ಈ ನಾಲ್ಕು ಮಂದಿಯ ತಂಡ ಈಗ ಪೊಲೀಸರ ಅತಿಥಿ. ಈ ವಿಚಾರವನ್ನು ಪೊಲೀಸ್‌ ಕಮೀಷನರ್‌ ನೀಲಂ ಸಂಜೀವ ರೆಡ್ಡಿ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಲ್ಯಾಪ್‌ಟಾಪ್‌, ವಿಸಿಡಿ, ಡಿವಿಡಿ, ಬೆಲೆ ಬಾಳುವ ಎಲೆಕ್ಟ್ರಾನಿಕ್ಸ್‌ ವಸ್ತುಗಳು ಸೇರಿದಂತೆ ಸುಮಾರು 13ಲಕ್ಷಕ್ಕೂ ಅಧಿಕ ಮೊತ್ತದ ಒಡವೆ-ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಈಜಿಪುರದ ಕಮಲೇಶ್‌(28), ಪ್ರಿಯಾಂಕ(24), ಸೂರಜ್‌(34), ಕೋರಮಂಗಲದ ಕವಿತಾ(40) ಎಂದು ಗುರ್ತಿಸಲಾಗಿದೆ. ಕವಿತಾ ಹಿಂದೆ ಬಾಲಿವುಡ್‌ನಲ್ಲಿ ನಟಿಸುತ್ತಿದ್ದಳು. ಸೂರಜ್‌ ಈ ಹಿಂದೆ ಐಷಾರಾಮಿ ಹೋಟೆಲ್‌ನಲ್ಲಿ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ.

ಆರೋಪಿಗಳ ಮಾರುತಿ 800 ಕಾರನ್ನು ವಶಪಡಿಸಿಕೊಳ್ಳಲಾಗಿದೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X