ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಐಎಂ ವಿದ್ಯಾರ್ಥಿಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!

By Staff
|
Google Oneindia Kannada News

ಬೆಂಗಳೂರು : ನಗರದ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌(ಐಐಎಂ--ಬಿ)ನಲ್ಲಿ ವ್ಯಾಸಂಗ ಮಾಡಿದ ಎಂಬಿಎ ಪದವೀಧರರಿಗೆ, ಡಿಮ್ಯಾಂಡಪ್ಪೋ ಡಿಮ್ಯಾಂಡು.

ಇತ್ತೀಚೆಗೆ ಸುಮಾರು 90 ಕಂಪನಿಗಳು ನಡೆಸಿದ ಕ್ಯಾಂಪಸ್‌ ಸಂದರ್ಶನದಲ್ಲಿ, ಇಲ್ಲಿನ ದ್ವಿತೀಯ ವರ್ಷದ 233 ವಿದ್ಯಾರ್ಥಿಗಳಲ್ಲಿ ಶೇ.64ರಷ್ಟು ಮಂದಿಗೆ ಉದ್ಯೋಗ ಲಭಿಸಿದೆ. ವಿವಿಧ ದೇಶಗಳಲ್ಲಿ ವಿದ್ಯಾರ್ಥಿಗಳು ಕಾರ್ಯ ನಿರ್ವಹಿಸಲಿದ್ದಾರೆ. ವಿದೇಶಗಳಿಗಿಂತಲೂ ಭಾರತದಲ್ಲಿಯೇ, ಉದ್ಯೋಗ ಮಾಡಲು ಬಹುತೇಕ ವಿದ್ಯಾರ್ಥಿಗಳು ನಿರ್ಧರಿಸಿರುವುದು ಮತ್ತೊಂದು ವಿಶೇಷ.

ಇವರಲ್ಲಿ ಶೇ. 32ರಷ್ಟು ವಿದ್ಯಾರ್ಥಿಗಳು ಫೈನಾನ್ಸ್‌ ಮತ್ತು ಕನ್ಸಲ್ಟಿಂಗ್‌ ಆಯ್ದುಗೊಂಡಿದ್ದಾರೆ. ಕಳೆದ ವರ್ಷ ಇನ್‌ವೆಸ್ಟ್‌ಮೆಂಟ್‌ ಬ್ಯಾಂಕಿಂಗ್‌ ಕ್ಷೇತ್ರವನ್ನು ಹೆಚ್ಚು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡಿದ್ದರು. ಆ ಪ್ರಮಾಣ ಈಗ ಶೇ.9ಕ್ಕೆ ಕುಗ್ಗಿದೆ.

ಐಐಎಂಬಿಯ ದೀಪಕ್‌ ಗೋಯಲ್‌ ಎಂಬ ವಿದ್ಯಾರ್ಥಿಗೆ, ಪ್ರಮುಖ ಷೇರು ವಹಿವಾಟು ಸಂಸ್ಥೆ ಸನ್‌ ಗ್ರೂಪ್‌ ಉಪಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X