• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪತ್ರಪ್ರವೀಣ ದೇವೇಗೌಡರಿಗೊಂದು ಬಹಿರಂಗ ಪತ್ರ...

By Staff
|

Premashekhara, Podicherryಇನ್ನೂ ಒಂದು ಮಾತು- ತಾವು ಪ್ರಧಾನಮಂತ್ರಿಯಾಗಿದ್ದ ಸಮಯದಲ್ಲಿ ಆಲಮಟ್ಟಿಯ ಬಗ್ಗೆ ಆಂಧ್ರಪ್ರದೇಶದ ಆಗಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತರಲೆ ಎತ್ತಿದಾಗ ತಾವು ‘ರಾಜಕೀಯ ಮಾಡಬೇಡ ಹುಡುಗಾ’ ಎಂದು ಮುಖದ ಮೇಲೆ ಬಾರಿಸಿದಂತೆ ಹೇಳಿಬಿಟ್ಟಿರಿ. ಪಾಪ ಆತ ಮತ್ತೆ ಬಾಯಿ ತೆರೆಯಲೇ ಇಲ್ಲ. ನನಗೆ ಅದೂ ನೆನಪಿದೆ.

ಇದೆಲ್ಲವನ್ನೂ ಗಮನಿಸಿದಾಗ ಕರ್ನಾಟಕದ ಹಿತ ಕಾಯುವ ಬಗ್ಗೆ ವಿವೇಕಯುತವಾಗಿ ವರ್ತಿಸಿ ಸದ್ದಿಲ್ಲದೇ ಕೆಲಸ ಸಾಧಿಸಿಕೊಳ್ಳುವ ಚಾಕಚಕ್ಯತೆ ಉಳಿದ ನೇತಾರರಿಗಿಂತ ತಮ್ಮಲ್ಲಿ ಅಧಿಕವಾಗಿದೆ ಎಂದು ಮನವರಿಕೆಯಾಗುತ್ತದೆ. ಹೀಗಾಗಿಯೇ ಈಗ ನೀವೇನಾದರೂ ಮಾಡಬೇಕು ಎಂದು ನಾನು ತಮ್ಮನ್ನು ಕೇಳಿಕೊಳ್ಳುತ್ತಿರುವುದು. ತಾವು ಈಗಾಗಲೇ ಒಳಗೊಳಗೇ ಏನಾದರೂ ಮಾಡುತ್ತಿರಬಹುದೇನೋ ಎಂಬ ಅನುಮಾನವೂ ನನಗೆ ಬರುತ್ತಿದೆ!

‘ಕಾವೇರಿ ವಿವಾದವನ್ನು ಸಮರ್ಪಕವಾಗಿ ತೀರ್ಮಾನಿಸುವುದರಲ್ಲಿ ಶ್ರೀ ದೇವೇಗೌಡರು ಮಾಡುತ್ತಿರುವ ಕೆಲಸಕ್ಕೆ ನಾವು ಸಹಕರಿಸಬೇಕು’ ಎಂಬ ಕರುಣಾನಿಧಿಯವರ ಹೇಳಿಕೆಯನ್ನು ಒಂದು ಪತ್ರಿಕೆಯಲ್ಲೂ, ‘...ಈ ವಿಷಯದಲ್ಲಿ ದೇವೇಗೌಡರ ಕುತಂತ್ರಕ್ಕೆ ನಾವು ಬಲಿಯಾಗಬಾರದು’ ಎಂದು ಅದೇ ಕರುಣಾನಿಧಿಯರು ಹೇಳಿದರೆಂದು ಮತ್ತೊಂದು ಪತ್ರಿಕೆ ಬರೆದದ್ದನ್ನೂ ನೋಡಿದಾಗ ತಾವು ‘ಏನೋ’ ಮಾಡುತ್ತಿದ್ದೀರಿ ಎಂದು ನನಗನಿಸುತ್ತಿದೆ. ಇದು ನಿಜವೇ ಇದ್ದರೆ ತಮ್ಮ ಕಾರ್ಯದಲ್ಲಿ ತಮಗೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. ಯಾಕೆಂದರೆ ತಮ್ಮ ಯಶಸ್ಸು ಕರ್ನಾಟಕದ ಯಶಸ್ಸೂ ಸಹಾ.

ಸೋನಿಯಾ ಮೇಡಂ ತಮ್ಮನ್ನು ರಾಷ್ಟ್ರಪತಿ ಮಾಡುವ ಹವಣಿಕೆಯಲ್ಲಿದ್ದಾರೆ ಎಂದು ಅವರಿವರು ಹೇಳುತ್ತಿದ್ದಾರೆ. ತನ್ನ ಪಾರ್ಟಿಯ ಹಿಂದಿನ ನಾಯಕ ಸೀತಾರಂ ಕೇಸರಿ ತಮ್ಮನ್ನು ಒಂದುವರ್ಷದವರೆಗಾದರೂ ಪ್ರಧಾನಮಂತ್ರಿಯಾಗಿರಲು ಬಿಡದಿದ್ದದ್ದು ಅವರ ಮನಸ್ಸಿನಲ್ಲಿ ಕಲ್ಲುಹರಳಿನಂತೆ ಒತ್ತುತ್ತಿರಬೇಕು. ತಪ್ಪನ್ನು ಸರಿಪಡಿಸಿಕೊಂಡು ಮನಸ್ಸನ್ನು ಹಗುರ ಮಾಡಿಕೊಳ್ಳಲು ಪಾಪ ಆ ಹೆಂಗರುಳು ಆಶಿಸುತ್ತಿರಬಹುದು. ಪ್ರೆಸಿಡೆಂಟ್‌ ಆಗಿಬಿಡಿ ಗೌಡರೇ. ಆಗಲಾದರೂ ಕೇಂದ್ರಸರಕಾರ ತಮಿಳುನಾಡಿನ ಕೈಗೊಂಬೆಯಾಗಿರುವುದನ್ನು ಸ್ವಲ್ಪಮಟ್ಟಿಗಾದರೂ ತಪ್ಪಿಸಬಹುದೇನೋ.

ನನ್ನ ಸ್ವಾರ್ಥ ಹಿತ ಸಾಧನೆಗಾಗಿ ನಾನು ತಮ್ಮನ್ನು ಗೋಗರೆಯುತ್ತಿದ್ದೇನೆ ಎಂದು ಯಾರಾದರೂ ಅಂದುಕೊಳ್ಳಬಹುದು. ನಿಜ ಹೇಳುತ್ತಿದ್ದೇನೆ. ಕರ್ನಾಟಕದ ಕಾವೇರಿಕಣಿವೆಯಲ್ಲಿ ನನಗೆ ಹತ್ತಿಪ್ಪತ್ತೇಕರೆ ತರೀ ಜಮೀನಿದೆ, ಹಾಗೂ ಅಲ್ಲಿ ಕಬ್ಬು ಭತ್ತ ಬೆಳೆಯಲು ನನಗೆ ನೀರು ಬೇಕು ಎಂದೇನೂ ಇಲ್ಲ. ವಾಸ್ತವ ಸಂಗತಿ ಏನೆಂದರೆ ನನ್ನದೆನ್ನುವ ಒಂದು ಅಂಗೈಯಗಲದಷ್ಟೂ ನೆಲವೂ ಕರ್ನಾಟಕದಲ್ಲಿ ನನಗಿಲ್ಲ. ಅದನ್ನು ಗಳಿಸಬೇಕು ಎಂಬ ಯಾವ ಆಸೆಯೂ ನನಗಿಲ್ಲ. ಈಗ ಪಾಂಡಿಚೆರಿಯಲ್ಲಿದ್ದೇನೆ, ಕೆಲಕಾಲಾನಂತರ ನನ್ನ ಪ್ರೀತಿಯ ಊರಾದ ದೆಹಲಿಗೆ ಹೊರಟುಹೋಗುತ್ತೇನೆ. ಕರ್ನಾಟಕಕ್ಕೆ ಈಗಲೂ ಇನ್ನು ಮುಂದೆಯೂ ನಾನು ಬಂದುಹೋಗುವುದು ಒಬ್ಬ ಒಂದೆರಡು ದಿನಗಳ ಅತಿಥಿಯ ಹಾಗೆ ಮಾತ್ರ.

ಮತ್ತೆ ತಮಿಳುನಾಡಿನ ಬಗ್ಗೆ ನನಗೆ ಏನೋ ದ್ವೇಷವಿದೆ, ತಮಿಳರ ವಿರುದ್ಧ ತಮ್ಮನ್ನು ನಾನು ‘ಛೂ’’ಬಿಡುತ್ತಿದ್ದೇನೆ ಅಂತಲೇ? ಅಥವಾ ಕಂಡವರ ಮಕ್ಕಳನ್ನು (ತಂದೆಯನ್ನು) ಬಾವಿಗೆ (ಕಾವೇರಿಗೆ) ನೂಕಿ ಆಳ ನೋಡಹೊರಟಿದ್ದೇನೆ ಅಂತಲೇ? ಇಲ್ಲ ಗೌಡರೇ ಇಲ್ಲಾ. ನಿಜ ಹೇಳಬೇಕೆಂದರೆ ಕರ್ನಾಟಕಕ್ಕಿಂತಲೂ ತಮಿಳುನಾಡು ಮತ್ತು ದೆಹಲಿಯಲ್ಲಿ ನನಗೆ ಹೆಚ್ಚು ಸ್ನೇಹಿತರಿದ್ದಾರೆ. ಕಷ್ಟಸಹಿಷ್ಣುಗಳಾದ ಸಾಮಾನ್ಯ ತಮಿಳರ ಬಗ್ಗೆ ನನಗೆ ಅಭಿಮಾನವಿದೆ. ಸರಳ ಹಾಗೂ ಸ್ನೇಹಪರ ತಮಿಳರ ಬಗ್ಗೆ ಪ್ರೀತಿ ಇದೆ. ಅಷ್ಟೇ ಅಲ್ಲ, ಇವರ ಬದುಕಿನಲ್ಲಿ ಕಾವೇರಿಯ ಮಹತ್ವದ ಅರಿವೂ ನನಗಿದೆ. ತಮಿಳು ಸಂಸ್ಕೃತಿ ಬೆಳೆದದ್ದೇ ಕಾವೇರಿಯ ಮಡಿಲಲ್ಲಿ. ತಮಿಳು ನಾಗರೀಕತೆ, ಇತಿಹಾಸ, ಪರಂಪರೆಯ ಜತೆ ಕಾವೇರಿ ಬೆಸೆದುಹೋಗಿದ್ದಾಳೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X