ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೈಬರ್‌ ಕಾಮುಕತೆ ತಡೆಯುವ ಕಾನೂನು ಮತ್ತು ಸುವ್ಯವಸ್ಥೆ

By Staff
|
Google Oneindia Kannada News

ಎಂತಹ ಮನೋಭಾವದ ವ್ಯಕ್ತಿ ಈ ಅಪರಾಧಕ್ಕೆ ತೊಡಗುತ್ತಾನೆ?

ಮನೋ ವಿಜ್ಞಾನಿಗಳ ಪ್ರಕಾರ ಲೈಂಗಿಕ ಕಿರುಕುಳ ನೀಡಬೇಕೆನ್ನುವುದು ಈ ಅಪರಾಧದ ಹಿಂದಿನ ಮೂಲ ಉದ್ದೇಶ. ಅಪರಿಚಿತರಂತೆ ಪರಿಚಿತರೂ ಸಹ ಇದರಲ್ಲಿ ಭಾಗಿಗಳಾಗಬಹುದು. ಪ್ರೀತಿ-ಪ್ರೇಮದ ವಿಷಯದಲ್ಲಿ ತಮಗಾಗಿರಬಹುದಾದ ಸೋಲಿನ ಸೇಡನ್ನು ತೀರಿಸಿಕೊಳ್ಳುವುದಕ್ಕಾಗಿ ಅಥವಾ ಆಸ್ತಿ ವಿಷಯದಲ್ಲಾಗಿರಬಹುದಾದ ಅವಮಾನಕ್ಕೆ ಬದಲಾಗಿಯೂ ಇಂತಹ ಕುಕೃತ್ಯ ನಡೆಸಬಹುದು.

ಸ್ಕಿಜೋಫ್ರೀನಿಯಾದಂತಹ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ವ್ಯಕ್ತಿಯನ್ನೂ ಈ ವಿಷಯದಲ್ಲಿ ಅಪರಾಧಿಯೆಂದೇ ಪರಿಗಣಿಸಲಾಗುತ್ತದೆ. ಹಾಸ್ಯ, ಹುಡುಗಾಟದ ಮೇರೆ ಮೀರಿದಾಗಲೂ ಇಂತಹ ಅಪರಾಧ ಘಟಿಸಬಹುದು.

ಇವರಿಗೆ ಶಿಕ್ಷೆ ಇಲ್ಲವೇ?

ಮಾಹಿತಿ ತಂತ್ರಜ್ಞಾನ ಕಾಯಿದೆಯ ಕಲಂ 67ರ ಪ್ರಕಾರ ಸೈಬರ್‌ ಸ್ಟಾಕಿಂಗ್‌ನಲ್ಲಿ ಸಿಕ್ಕಿಬಿದ್ದ ಅಪರಾಧಿಗೆ ನ್ಯಾಯಾಲಯ ಐದು ವರ್ಷಗಳ ಕಠಿಣ ಸಜೆ ಮತ್ತು ಒಂದು ಲಕ್ಷ ರೂಪಾಯಿಗಳ ದಂಡ ವಿಧಿಸಬಹುದಾಗಿರುತ್ತದೆ. ಅಂತೆಯೇ ಎರಡನೆಯ ಬಾರಿಯೂ ಅಪರಾಧ ಸಾಬೀತಾದರೆ ಹತ್ತು ವರ್ಷಗಳ ಕಾಲ ಕಠಿಣ ಸಜೆ ಮತ್ತು ಎರಡು ಲಕ್ಷ ರೂಪಾಯಿಗಳ ದಂಡ ವಿಧಿಸಬಹುದಾಗಿರುತ್ತದೆ. ಭಾರತೀಯ ದಂಡ ಸಂಹಿತೆಯ ಕಲಂ 509ರ ಪ್ರಕಾರ ಹೆಂಗಸಿನ ಘನತೆಗೆ ಕುಂದು ತರುವ ಈ ಕಾರ್ಯ ಶಿಕ್ಷಾರ್ಹ ಅಪರಾಧವಾಗಿರುತ್ತದೆ.

ಕರ್ನಾಟಕ ರಾಜ್ಯ ವಾಣಿಜ್ಯ ಅಪರಾಧ ವಿಭಾಗವು ನೀಡಿರುವ ಮಾಹಿತಿಯ ಪ್ರಕಾರ; ರಾಜ್ಯದ ಯಾವುದೇ ಸೈಬರ್‌ ಕೇಂದ್ರಗಳಲ್ಲಿ ಸೇವೆ ಪಡೆಯುವ ಪ್ರತಿಯಾಬ್ಬರೂ ಭಾವಚಿತ್ರ ಸಹಿತದ ಗುರುತಿನ ಚೀಟಿಯನ್ನು ಹೊಂದಿರಬೇಕಾಗುತ್ತದೆ. ಇಂತಹ ಗುರುತಿನ ಪತ್ರವನ್ನು ಹೊಂದಿರುವ ವ್ಯಕ್ತಿಯ ಭಾವಚಿತ್ರವನ್ನು ಸ್ಥಳದಲ್ಲೇ ತೆಗೆದು, ಒಂದು ವರ್ಷದವರೆವಿಗೂ ವಿವರಗಳೊಂದಿಗೆ ದಾಖಲಿಸಿಕೊಂಡಿರುವ ಜವಾಬ್ದಾರಿ ಸಾರ್ವಜನಿಕ ಸೈಬರ್‌ ಕೇಂದ್ರಗಳ ಮೇಲಿರುತ್ತದೆ.

ಸೈಬರ್‌ ಸ್ಟಾಕಿಂಗ್‌ನಿಂದ ತಪ್ಪಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಲು ಈಗ ಹಲವಾರು ವೆಬ್‌ಸೈಟ್‌ಗಳು ರೂಪಿತವಾಗಿವೆ. ಅವುಗಳಲ್ಲಿ ಕೆಲವು ಇಂತಿವೆ :

www.cyberlawassociation.com, www.indiapublicsector.com, www.cyberspacers.com, www.cyber-rights.org, ಮತ್ತು www.cybertelecom.org

ಸೈಬರ್‌ ಅಪರಾಧಗಳು ಅಂಕಿಅಂಶದಲ್ಲಿ ಗಣನೀಯವಾಗಿ ದಾಖಲಾಗದೆ ಹೋಗಿದ್ದರೂ ಸಹ ಕಳೆದೆರಡು ವರ್ಷಗಳಲ್ಲೇ ಅಶ್ಲೀಲ ಇಲೆಕ್ಟ್ರಾನಿಕ್‌ ಅಂಚೆ ವಿಭಾಗದಲ್ಲಿ 176 ದೂರುಗಳು ದಾಖಲಾಗಿದೆ. ಸರಿಯಾದ ಇಂಟರ್‌ನೆಟ್‌ ಜ್ಞಾನವಿಲ್ಲದಿದ್ದರೆ ಮತ್ತು ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳದಿದ್ದರೆ ಈ ಅಪರಾಧದಲ್ಲಿ ಹೆಚ್ಚಳ ಕಂಡು ಬರುವುದು ಖಂಡಿತ ಎಂದು ಅಂದಾಜು ಮಾಡಲಾಗಿದೆ.

ದೇಶದಲ್ಲೇ ಪ್ರಪ್ರಥಮವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಬೆಂಗಳೂರಿನ ಸೈಬರ್‌ ಅಪರಾಧ ಪೊಲೀಸ್‌ ಠಾಣೆ. ರಾಜ್ಯದ ಯಾವುದೇ ಭಾಗದಲ್ಲಿ ಇಂಟರ್‌ನೆಟ್‌ ಬಳಸುತ್ತಿರುವಾಗ, ಅಪರಾಧಕ್ಕೆ ಸಂಬಂಧಿಸಿದ ಯಾವುದೇ ತೊಂದರೆ ಎದುರಾದಲ್ಲಿ ತಕ್ಷಣ ಸಂಪರ್ಕ ಮಾಡಬಹುದಾದ ವಿಳಾಸ :

ಸೈಬರ್‌ ಅಪರಾಧ ಪೊಲೀಸ್‌ ಠಾಣೆ,
ಸಿಓಡಿ ಕಟ್ಟಡದ ಪಕ್ಕ, ಕಾರ್ಲ್‌ಟನ್‌ ಹೌಸ್‌,
ನಂ. 1, ಪ್ಯಾಲೇಸ್‌ ರಸ್ತೆ,
ಬೆಂಗಳೂರು - 560001

ದೂರವಾಣಿ: +91080-22201026, 22943050
ಫ್ಯಾಕ್ಸ್‌ : 080-22387611
ಇ.ಮೇಲ್‌ : [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X