• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೈಬರ್‌ ಕಾಮುಕತೆ ತಡೆಯುವ ಕಾನೂನು ಮತ್ತು ಸುವ್ಯವಸ್ಥೆ

By Super
|

ಮಾಹಿತಿ, ಮನರಂಜನೆ ಮತ್ತು ಮನೋವಿಕಾಸದ ಕಣಜ ಇಂಟರ್‌ನೆಟ್‌. ಇಲ್ಲಿನ ನೆಮ್ಮದಿ ಹಾಳು ಮಾಡಲು ಕಾಮುಕರು, ದುಷ್ಟರು ಸದಾ ಕಾಯುತ್ತಲೇ ಇರುತ್ತಾರೆ. ಎಲ್ಲರೂ ಹುಷಾರಾಗಿರಬೇಕು, ಅದರಲ್ಲೂ ಮಹಿಳೆಯರು ಮತ್ತು ಮಕ್ಕಳು ಹೆಚ್ಚು ನಿಗಾವಹಿಸಬೇಕು... ಯಾಕೆಂದರೆ ನೀವು ಈಗಾಗಲೇ ಸೈಬರ್‌ ಸ್ಟಾಕಿಂಗ್‌ ಬಗ್ಗೆ ಕೇಳಿರಬಹುದು!

ಅಂಜಲಿ ರಾಮಣ್ಣ, ಬೆಂಗಳೂರು."Make no mistake: this kind of harassment can be as frightening and as real as being followed and watched in your neighborhood or in your home." - All Gore

1984ರಲ್ಲಿ ಅಮೆರಿಕದ ರಾಷ್ಟ್ರೀಯ ವಿಜ್ಞಾನ ಫೌಂಡೇಶನ್‌ ತನ್ನ ವಿಶ್ವವಿದ್ಯಾನಿಲಯಗಳಲ್ಲಿನ ಕಂಪ್ಯೂಟರ್‌ಗಳ ನಡುವೆ ಮಾಹಿತಿ ಮೂಲಗಳ ಹೊಂದಾಣಿಕೆಗಾಗಿ ಆರಂಭಿಸಿದ ಒಂದು ವ್ಯವಸ್ಥೆಯೇ ಇಂಟರ್‌ನೆಟ್‌. ರೇಡಿಯೋ, ಟೆಲಿವಿಷನ್‌ಗಳಂತೆ ಮನೆ ಮನೆಯಲ್ಲೂ ಇಂದು ಕಂಪ್ಯೂಟರ್‌, ಇಂಟರ್‌ನೆಟ್‌ಗಳು ತಮ್ಮ ಜಾಗ ಕಲ್ಪಿಸಿಕೊಂಡಿವೆ. ಇಲೆಕ್ಟ್ರಾನಿಕ್‌ ಅಂಚೆ ವ್ಯವಸ್ಥೆ ಮತ್ತು ಇಲೆಕ್ಟ್ರಾನಿಕ್‌ ವ್ಯಾಪಾರ ಪದ್ಧತಿಯಿಂದಾಗಿ ವಿಶ್ವದ ಅನೇಕಾನೇಕ ವಿಷಯಗಳು ಇಂದು ಎಲ್ಲೆಡೆ ಎಲ್ಲರಿಗೂ ಲಭ್ಯ.

ಭಾರತದಲ್ಲಿ 2008ನೆಯ ಇಸವಿಯ ವೇಳೆಗೆ ಸುಮಾರು 20 ಮಿಲಿಯನ್‌ ಇಂಟರ್‌ನೆಟ್‌ ಬಳಕೆದಾರರು ಇರಬಹುದು ಎಂದು ಅಂದಾಜು ಮಾಡಲಾಗಿದೆ. ಇತ್ತೀಚೆಗೆ ಕರ್ನಾಟಕದಲ್ಲಿ ಇಂಟರ್‌ನೆಟ್‌ ಬಳಸುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿರುವುದು ಗಮನಾರ್ಹ. ಯಾವುದೇ ವ್ಯವಸ್ಥೆಯಲ್ಲೂ ಅಪರಾಧ ಇಣುಕುತ್ತದೆ. ಇಲ್ಲೂ ಸಹ.

ಮಾಹಿತಿ ತಂತ್ರಜ್ಞಾನ ಮತ್ತು ಇಂಟರ್‌ನೆಟ್‌ ವ್ಯವಸ್ಥೆಯ ವಿಧಿಬದ್ಧತೆಗಾಗಿ ಇರುವ ಕಾನೂನುಗಳನ್ನು ‘ಸೈಬರ್‌ ಕಾನೂನುಗಳು' ಎನ್ನಲಾಗುತ್ತದೆ. ‘ಹೆಚ್ಚುತ್ತಿರುವ ಇಂಟರ್‌ನೆಟ್‌ ಬಳಕೆ ಅಪರಾಧಗಳಿಗೆ ಪ್ರಚೋದನೆ ನೀಡುತ್ತಿದೆ' ಎನ್ನುವುದು ಕಾನೂನು ತಜ್ಞರ ಅಭಿಪ್ರಾಯ. ಈ ದಿನ ಸೈಬರ್‌ ಅಪರಾಧಕ್ಕೆ ಹಲವಾರು ಮುಖಗಳು. ಮುಖ್ಯವಾಗಿ ಹೆಂಗಸರು ಮತ್ತು ಮಕ್ಕಳನ್ನು ಗುರಿಯಾಗಿಸಿಕೊಂಡು ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುವ ಅಪರಾಧವನ್ನು ‘ಸೈಬರ್‌ ಸ್ಟಾಕಿಂಗ್‌' ಎಂದು ಗುರುತಿಸಲಾಗಿದೆ.

ಸೈಬರ್‌ ಸ್ಟಾಕಿಂಗ್‌ ಎಂದರೇನು?

ಕಂಪ್ಯೂಟರ್‌ ಬಳಕೆಗೆ ಸಂಬಂಧಿಸಿದಂತೆ ನಮ್ಮಲ್ಲಿ ಚಾಲ್ತಿಯಲ್ಲಿರುವ ಏಕೈಕ ಕಾನೂನೆಂದರೆ ಮಾಹಿತಿ ತಂತ್ರಜ್ಞಾನ ಕಾಯಿದೆ 2000. ಈ ಕಾಯಿದೆಯಲ್ಲಿ ಸೈಬರ್‌ ಸ್ಟಾಕಿಂಗ್‌ ಎನ್ನುವ ಅಪರಾಧಕ್ಕೆ ವ್ಯಾಖ್ಯಾನವೇ ನೀಡಿಲ್ಲ.

ವಯೋಮಾನದ ಮಿತಿ ಇರದ, ಲಿಂಗ ಭೇದವಿಲ್ಲದ ಯಾವುದೇ ವ್ಯಕ್ತಿ ತನ್ನ ಸುಳಿವು ಕೊಡದೆ ದುರುದ್ದೇಶದಿಂದ ಮಹಿಳೆಯರನ್ನು ಮತ್ತು ಮಕ್ಕಳನ್ನು ತನ್ನ ಕಾಮ ತೃಷೆಗಾಗಿ ಬಲಿಪಶುವನ್ನಾಗಿ ಮಾಡುವುದನ್ನು ಸೈಬರ್‌ ಸ್ಟಾಕಿಂಗ್‌ ಎನ್ನಬಹುದು.

ಇತ್ತೀಚಿನ ಸಮೀಕ್ಷೆಯಾಂದರ ಪ್ರಕಾರ ಇಂಟರ್‌ನೆಟ್‌ನಲ್ಲಿ ದೊರೆಯುವ ಶೇ. 72ರಷ್ಟು ಮಾಹಿತಿ ಅಶ್ಲೀಲತೆಗೆ ಸಂಬಂಧಪಟ್ಟದ್ದಾಗಿದೆ. ಯಾವುದೇ ಮಹಿಳೆಯ ಅಥವಾ ಹದಿಹರೆಯದ ಮಕ್ಕಳ ಭಾವಚಿತ್ರವನ್ನು ಮತ್ತು ಖಾಸಗಿ ವಿವರಗಳನ್ನು ಇಂತಹ ಅಸಹ್ಯಕರವಾದ ಸೈಟೊಂದರಲ್ಲಿ ದೊರೆಯುವಂತೆ ಮಾಡಿ, ನಂತರ ಆ ಮಹಿಳೆಯನ್ನು ಅಥವಾ ಮಕ್ಕಳನ್ನು ಬೆದರಿಸುವುದು (ಬ್ಲ್ಯಾಕ್‌ಮೇಲ್‌) ಸೈಬರ್‌ ಸ್ಟಾಕಿಂಗ್‌ನ ಒಂದು ನಮೂನೆಯಷ್ಟೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Make no mistake: this kind of harassment can be as frightening and as real as being followed and watched in your neighborhood or in your home. : Cyber stalking : Crime and punishment. Cyber crimes in Karnataka and cyber police station info. A write up by Anjali Ramanna, Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more