ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮಿತಾಬ್‌ ಲೈವ್‌ ಕ್ರಿಕೆಟ್‌ ನೋಡೋದಿಲ್ಲ! ಯಾಕಂದ್ರೆ?

By Staff
|
Google Oneindia Kannada News

ಮುಂಬಯಿ : ಬಾಲಿವುಡ್‌ನ ಖ್ಯಾತ ನಟ ಅಮಿತಾಬ್‌ ಬಚ್ಚನ್‌ ಲೈವ್‌(ನೇರ ಪ್ರಸಾರ) ಕ್ರಿಕೆಟ್‌ ನೋಡೋದನ್ನು ಬಿಟ್ಟಿದ್ದಾರಂತೆ. ಕಾರಣ ಇಷ್ಟೆ. ಭಾರತದ ಪಂದ್ಯಗಳ ನೇರ ಪ್ರಸಾರವನ್ನು ನೋಡಿದಾಗಲೆಲ್ಲಾ ಭಾರತ ಆ ಪಂದ್ಯವನ್ನು ಸೋತಿದೆಯಂತೆ!

64 ವರ್ಷದ ಚಿರ ಯೌವನಿಗ ಅಮಿತಾಬ್‌ಗೆ ಕ್ರಿಕೆಟ್‌ ಹುಚ್ಚು, ಎಲ್ಲರಿಗಿಂತ ಹೆಚ್ಚಾಗೇ ಇದೆ. ಆದರೆ ಲೈವ್‌ ಮ್ಯಾಚ್‌ ನೋಡಿದರೆ ಭಾರತ ಸೋತು ಬಿಡುತ್ತದೆ ಅನ್ನೋ ಮೂಢನಂಬಿಕೆಗೆ ಶರಣಾಗಿ ಮ್ಯಾಚ್‌ ನೋಡುವುದೇ ಬೇಡ. ಆಮೇಲೆ ನೋಡಿದರಾಯ್ತು ಅಂತ ನಿರ್ಧರಿಸಿದ್ದಾರೆ.

ಭಾರತ ತಂಡ ಸಮತೋಲನದಿಂದ ಕೂಡಿದೆ. ಈ ಬಾರಿಯ ವಿಶ್ವಕಪ್‌ ನಮ್ಮ ತಂಡಕ್ಕೆ ಸಿಗುತ್ತದೆ ಎಂದು ಬಿಗ್‌ ಬಿ ಅಭಿಪ್ರಾಯಪಟ್ಟಿದ್ದಾರೆ. ಭಾರತ ತಂಡಕ್ಕೆ ಶುಭವನ್ನು ಕೋರಿ ರಚಿಸಲಾಗಿದ್ದ ವಿಶೇಷ ಗೀತೆಗೆ, ತಮ್ಮ ಧ್ವನಿ ನೀಡಿ ಅಮಿತಾಭ್‌ ಅಭಿಮಾನ ಮೆರೆದಿದ್ದಾರೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X