ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತಾರಾಷ್ಟ್ರೀಯ ಮಹಿಳಾ ದಿನ : ಪ್ರಶಸ್ತಿಗಳ ಘೋಷಣೆ

By Staff
|
Google Oneindia Kannada News

ಬೆಂಗಳೂರು : ಗುರುವಾರ(ಮಾರ್ಚ್‌ 8) ಅಂತಾರಾಷ್ಟ್ರೀಯ ಮಹಿಳಾ ದಿನ, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಾಧನೆಗೈದ ಮಹಿಳೆಯರಿಗೆ ಹಾಗೂ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳಿಗೆ ಪ್ರಶಸ್ತಿ ಪ್ರದಾನ ಮಾಡಲಿದೆ.

ಶಿಶು ಮತ್ತು ಮಹಿಳಾ ಅಭಿವೃದ್ಧಿ ಸಚಿವ ಎಚ್‌.ಕೆ.ಕುಮಾರಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸರ್ಕಾರ ಒಟ್ಟು 23 ಪ್ರಶಸ್ತಿಗಳನ್ನು ಪ್ರಕಟಿಸಿದೆ. ಮಹಿಳಾ ಕಲ್ಯಾಣಕ್ಕೆ ದುಡಿದ ಆರು ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳು ಹಾಗೂ ಎಂಟು ಜನ ಮಹಿಳೆಯರನ್ನು ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಅಲ್ಲದೆ ಐದು ವಿಶೇಷ ಪ್ರಶಸ್ತಿಗಳನ್ನೂ ನೀಡಲಾಗುವುದು ಎಂದು ತಿಳಿಸಿದರು.

ರಾಜ್ಯದ ಮೊಟ್ಟಮೊದಲ ಮಹಿಳಾ ಮಂತ್ರಿ ಯಶೋದಮ್ಮ ದಾಸಪ್ಪ ಅವರ ಹೆಸರಿನಲ್ಲಿ ಪ್ರಸಕ್ತ ವರ್ಷ ನಾಲ್ಕು ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ. ಶಿಕಾರಿಪುರ ತಾಲ್ಲೂಕಿನ ವಿದ್ಯಾ ಸ್ತ್ರೀಶಕ್ತಿ ಗುಂಪು, ಮಂಡ್ಯ ತಾಲ್ಲೂಕಿನ ಮೂಕಾಂಬಿಕಾ ಸ್ತ್ರೀಶಕ್ತಿ ಗುಂಪು, ಧಾರವಾಡ ಗ್ರಾಮಾಂತರದ ಜೈ ಅಂಬೆ ಸ್ತ್ರೀಶಕ್ತಿ ಗುಂಪು, ಗಾಯತ್ರಿ ಸ್ತ್ರೀಶಕ್ತಿ ಗುಂಪುಗಳು ಈ ಪ್ರಶಸ್ತಿಗೆ ಆಯ್ಕೆಯಾಗಿವೆ ಎಂದು ಅವರು ವಿವರಿಸಿದರು.

ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಾರ್ಚ್‌ 8ರಂದು ನಡೆಯುವ ರಾಜ್ಯಮಟ್ಟದ ಸಮಾರಂಭದಲ್ಲಿ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X