ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಲದ ಮೇಲಿನ ಬಡ್ಡಿ ದರ ಹೆಚ್ಚಿಸಲು ಎಸ್‌ಬಿಐ ಚಿಂತನೆ

By Staff
|
Google Oneindia Kannada News

ನವದೆಹಲಿ : ‘ಸಾಲ ಮಾಡಿ ತುಪ್ಪ ತಿನ್ನು’ ಎನ್ನುವ ಅರ್ಥ ಧ್ವನಿಸುವ ಕೇನ್ಸ್‌ ಸಿದ್ಧಾಂತ ಪಾಲಿಸುವ ಸಾಲಪ್ರಿಯರಿಗೆ, ಇಲ್ಲೊಂದು ಕಹಿಸುದ್ದಿ!

ದೇಶದ ಪ್ರತಿಷ್ಠಿತ ಬ್ಯಾಂಕ್‌ ಎಂದೇ ಕರೆಯಲ್ಪಡುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ(ಎಸ್‌ಬಿಐ) ಕಾರಿನ ಸಾಲ ಮತ್ತು ವೈಯಕ್ತಿಕ ಸಾಲದ ಬಡ್ಡಿ ದರವನ್ನು ಪರಿಷ್ಕರಿಸಲು ಚಿಂತನೆ ನಡೆಸಿದೆ. ಬಡ್ಡಿ ದರ ಸರಾಸರಿ ಶೇ.0.75ರಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ.

ಈ ಬಗ್ಗೆ ಬುಧವಾರ ಮಾಹಿತಿ ನೀಡಿರುವ ಬ್ಯಾಂಕ್‌ ಕಾರ್ಯನಿರ್ವಾಹಕ ನಿರ್ದೇಶಕ ಅಶೋಕ್‌ ಅಗರವಾಲ್‌, ಗೃಹ ಮತ್ತು ಶಿಕ್ಷಣ ಸಾಲವನ್ನು ಹೊರತುಪಡಿಸಿ, ಉಳಿದ ಎಲ್ಲಾ ರೀತಿಯ ಸಾಲದ ಮೇಲಿನ ಬಡ್ಡಿ ದರವನ್ನು ಪರಿಷ್ಕರಿಸುತ್ತೇವೆ. ಶೇ.0.50ರಿಂದ ಶೇ.1ರ ತನಕ, ವಿವಿಧ ಸಾಲಗಳ ಬಡ್ಡಿ ದರ ಹೆಚ್ಚಲಿದೆ. ಸರಾಸರಿ ಪ್ರಮಾಣ ಶೇ.0.75ರಷ್ಟಿರುತ್ತದೆ ಎಂದು ವಿವರಿಸಿದ್ದಾರೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X