ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ ಸಭೆ ವಿಫಲ; ತಿರುಗಿ ನೋಡದ ಮಣ್ಣಿನ ಮಗ!

By Staff
|
Google Oneindia Kannada News

ನವದೆಹಲಿ : ಕರ್ನಾಟಕ ಮತ್ತು ತಮಿಳುನಾಡು ಸಂಸದರ ನಡುವಿನ ಮಾತಿನ ಚಕಮಕಿ, ಕಾವೇರಿ ಚರ್ಚೆಯ ದಾರಿ ತಪ್ಪಿಸಿ, ಸಭೆ ವಿಫಲವಾಗುವಂತೆ ಮಾಡಿದೆ.

ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಉಭಯ ರಾಜ್ಯಗಳ ನಡುವೆ ಸಹಮತ ಮೂಡಿಸಲು, ಲೋಕಸಭಾ ಸದಸ್ಯ ಸೋಮನಾಥ ಚಟರ್ಜಿ ಮಂಗಳವಾರ ಕರೆದಿದ್ದ ಸಭೆ, ಆರಂಭವಾದ 20ನಿಮಿಷಗಳಲ್ಲಿಯೇ ಮುಕ್ತಾಯಗೊಂಡಿತು.

ಕಾವೇರಿ ನ್ಯಾಯಮಂಡಳಿ ತೀರ್ಪನ್ನು ಸಂಸತ್ತಿನಲ್ಲಿ ಚರ್ಚಿಸಲು ಅವಕಾಶ ನೀಡಬೇಕೆಂಬ ಕರ್ನಾಟಕ ಸಂಸದರ ಬೇಡಿಕೆ, ತಮಿಳು ಸಂಸದರನ್ನು ಕೆರಳಿಸಿತು. ಈ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ಅನಗತ್ಯ ಎಂಬ ವಾದ ಅವರಿಂದ ಕೇಳಿಬಂತು. ಆಗ ವಾಕ್‌ ಸಮರ ಮುಂದುವರೆದು, ಸಭೆ ರದ್ದಾಯಿತು.

ನಮ್ಮವರ ಬೇಜವಾಬ್ದಾರಿ : ಕರ್ನಾಟಕ 28ಸದಸ್ಯರಲ್ಲಿ ಸಂಸದರ ಸಭೆಗೆ ಹಾಜರಾದವರು ಕೇವಲ 17ಸಂಸದರು ಮಾತ್ರ. ಮಹತ್ವದ ವಿಚಾರ ಚರ್ಚಿಸುವ ಬಗ್ಗೆ ಮಾಹಿತಿಯಿದ್ದರೂ, ಕೆಲ ಸಂಸದರು ದೂರವೇ ಉಳಿದರು. ಮಾಜಿ ಪ್ರಧಾನಿ ದೇವೇಗೌಡ ದೆಹಲಿಯಲ್ಲಿದ್ದರೂ, ಸಭೆಯತ್ತ ತಿರುಗಿ ನೋಡಲಿಲ್ಲ.

ಈ ಮಧ್ಯೆ ಸಂಸತ್ತಿನ ಎದುರು ಕಾವೇರಿ ನ್ಯಾಯಮಂಡಳಿ ತೀರ್ಪನ್ನು ವಿರೋಧಿಸಿ, ಗುರುವಾರ ಪ್ರತಿಭಟನೆ ನಡೆಸಲು ಕರ್ನಾಟಕ ಸಂಸದರು ನಿರ್ಧರಿಸಿದ್ದಾರೆ.

(ಏಜನ್ಸೀಸ್‌)

ನಿಮ್ಮ ಗಮನಕ್ಕೆ -
ಕರ್ನಾಟಕದ ಲೋಕಸಭಾ ಸದಸ್ಯರ ಮೊಬೈಲ್‌ ಸಂಖ್ಯೆಗಳು!
ನಮ್ಮ ರಾಜ್ಯಸಭಾ ಸದಸ್ಯರು ಮತ್ತವರ ದೂರವಾಣಿ ಸಂಖ್ಯೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X