ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಕ್ತಿ ಪ್ರದರ್ಶನ : ಲೋಕಸಭೆಯಲ್ಲಿ ‘ಕಾವೇರಿ’ದ ಗದ್ದಲ!

By Staff
|
Google Oneindia Kannada News

ನವದೆಹಲಿ : ಕಾವೇರಿ ನ್ಯಾಯಮಂಡಳಿ ಅಂತಿಮ ತೀರ್ಪನ್ನು ವಿರೋಧಿಸಿ, ಕರ್ನಾಟಕ ಮತ್ತು ತಮಿಳುನಾಡಿನ ಸಂಸದರು, ಸಂಸತ್ತಿನ ಬಾವಿಗೆ ಇಳಿದು ಬುಧವಾರ ಘೋಷಣೆಗಳನ್ನು ಕೂಗಿದರು.

Indian Parliament ಈ ಪರಿಣಾಮ ಉಂಟಾದ ಗೊಂದಲದಿಂದ, ಲೋಕಸಭೆಯನ್ನು 25ನಿಮಿಷಗಳ ಕಾಲ ಮುಂದೂಡಲಾಯಿತು. ಸದನ ಆರಂಭವಾಗುತ್ತಿದ್ದಂತೆಯೇ ಕಾವೇರಿ ವಿವಾದ ಚರ್ಚೆಗೆ ಬಂತು. ಬಿಜೆಪಿ ಸಂಸದ ಅನಂತಕುಮಾರ್‌ ಮಾತನಾಡುತ್ತ, ಕಾವೇರಿ ನ್ಯಾಯಮಂಡಳಿ ತೀರ್ಪಿನಿಂದ ಕರ್ನಾಟಕಕ್ಕೆ, ಅದರಲ್ಲೂ ರೈತರಿಗೆ ಅನ್ಯಾಯವಾಗಿದೆ. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ, ನ್ಯಾಯ ನೀಡಬೇಕು ಎಂದು ಹೇಳಿದರು.

ನ್ಯಾಯಮಂಡಳಿ ತೀರ್ಪನ್ನು ಕೇಂದ್ರ ಸರ್ಕಾರ ಗೆಜೆಟ್‌ನಲ್ಲಿ ಪ್ರಕಟಿಸಬಾರದು. ಸಂಸತ್ತಿನಲ್ಲಿ ಕಾವೇರಿ ಚರ್ಚೆಗೆ ತಮಿಳುನಾಡು ಸಂಸದರು ಅಡ್ಡಿ ಪಡಿಸುವುದು ಸಲ್ಲದು. ತಮಿಳುನಾಡು ಸಂಸದರ ವಿರೋಧದಲ್ಲಿ ಅರ್ಥವಿಲ್ಲ ಎಂದು ಅನಂತಕುಮಾರ್‌, ಕೇಂದ್ರ ಸರ್ಕಾರ ಜಲನೀತಿಯನ್ನು ಪರಮಾರ್ಶಿಸಬೇಕು ಎಂದು ಸಲಹೆ ನೀಡಿದರು.

ಅನಂತಕುಮಾರ್‌ ಮಾತುಗಳನ್ನು ಕೇಳುತ್ತಿದ್ದಂತೆಯೇ ಡಿಎಂಕೆ, ಡಿಪಿಎ ಸೇರಿದಂತೆ ತಮಿಳು ಸಂಸದರು, ಲೋಕಸಭೆಯ ಬಾವಿಗಿಳಿದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ತಮಿಳುನಾಡಿನ ಪರವಾಗಿ ಘೋಷಣೆ ಕೂಗಿದರು. ಆಗ ರಾಜ್ಯದ ಬಿಜೆಪಿ ಸಂಸದರು ಪ್ರತಿಘೋಷಣೆಗಳನ್ನು ಕೂಗಿದರು. ವಾಕ್‌ ಸಮರ ಆರಂಭವಾಯಿತು. ಲೋಕಸಭಾ ಉಪಾಧ್ಯಕ್ಷರಿಗೆ ಆಗ ಸದನ ಮುಂದೂಡುವುದು ಅನಿವಾರ್ಯವಾಯಿತು.

(ಯುಎನ್‌ಐ)

ಪೂರಕ ಸುದ್ದಿ -
ಕಾವೇರಿ ಸಭೆ ವಿಫಲ; ತಿರುಗಿ ನೋಡದ ಮಣ್ಣಿನ ಮಗ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X