ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿ ರಕ್ಷಣಾ ಸಮಿತಿಯ ಸಲಹೆ ಮತ್ತು ಒತ್ತಾಯಗಳು

By Staff
|
Google Oneindia Kannada News

ಮೈಸೂರು : ತಿರುಪತಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆಯುತ್ತಿರುವ ಹಿಂದೂಗಳ ಮತಾಂತರ ಪ್ರಕ್ರಿಯೆಗಳು ನಿಲ್ಲಬೇಕು. ಕ್ರಿಶ್ಚಿಯನ್‌ ಮತಾಂತರ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಮಾಜಿ ಶಾಸಕ, ತಿರುಮಲ ತಿರುಪತಿ ರಕ್ಷಣಾ ಸಮಿತಿ ಸಂಚಾಲಕ ರಾಮದಾಸ್‌ ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ತಿರುಪತಿಯಲ್ಲಿ ಕ್ರಿಶ್ಚಿಯನ್‌ ಮಿಷನರಿಗಳು ಬೈಬಲ್‌ ವಿತರಣೆ, ಹಣ ಮತ್ತಿತರ ಆಮಿಷಗಳ ಮೂಲಕ ಮತಾಂತರ ಮಾಡುತ್ತಿದ್ದಾರೆ. ಇದು ಖಂಡನೀಯ ಎಂದರು.

ತಿರುಪತಿಯ ಪದ್ಮಾವತಿ ಮಹಿಳಾ ವಿಶ್ವವಿದ್ಯಾಲಯಕ್ಕೆ ಹಿಂದೂಯೇತರರನ್ನು ಕುಲಪತಿಯಾಗಿ ನೇಮಕ ಮಾಡಲಾಗಿದೆ. ಇದರಿಂದಾಗಿ ಕಾಲೇಜಿನ ಆವರಣದಲ್ಲಿದ್ದ ವೆಂಕಟೇಶ್ವರ ಸ್ವಾಮಿಯ ಫೋಟೋವನ್ನು ತೆಗೆದು, ಯೇಸು ಫೋಟೋವನ್ನು ಹಾಕಲಾಗಿದೆ ಎಂದು ದೂರಿದರು.

ಭಕ್ತರಿಂದ ತಿರುಮಲನ ಸನ್ನಿಧಿಯಲ್ಲಿ 700ಕೋಟಿ ರೂ. ಹಣ ಸಂಗ್ರಹವಾಗುತ್ತಿದೆ. ಅದರಲ್ಲಿ ಕೇವಲ 42ಕೋಟಿ ರೂ.ಗಳನ್ನು ದೇವಸ್ಥಾನದ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಪೂರ್ಣ ಹಣವನ್ನು ಹಿಂದೂಗಳ ಕಲ್ಯಾಣಕ್ಕಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X