• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಾಮರಾಜನಗರ : ವಿದ್ಯುತ್‌ ಸ್ಪರ್ಶಕ್ಕೆ 2 ಗಂಡಾನೆ ಬಲಿ

By Staff
|

ಮೈಸೂರು : ಎರಡು ಗಂಡಾನೆಗಳು ವಿದ್ಯುತ್‌ ಸ್ಪರ್ಶದಿಂದ, ಚಾಮರಾಜನಗರ ಜಿಲ್ಲೆಯ ಯೆಲಕ್ಕೂರುನಲ್ಲಿ ಸೋಮವಾರ ಸಾವನ್ನಪ್ಪಿವೆ.

ಭಾನುವಾರ ರಾತ್ರಿ ಸಂತೇಮರಳ್ಳಿಯ ಮರಿಸ್ವಾಮಿ ಎನ್ನುವವರ ಜಮೀನಿಗೆ ಬಂದಿದ್ದ ನಾಲ್ಕು ಆನೆಗಳು, ಕಬ್ಬು ಸೇರಿದಂತೆ ಇನ್ನಿತರ ಬೆಳೆಯನ್ನು ಹಾಳು ಮಾಡಿದ್ದವು. ಆನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಸಾಕಷ್ಟು ತಿಣುಕಾಡಿದ್ದರು.

ಈ ಮಧ್ಯೆ ಜಮೀನಿನ ರಕ್ಷಣಾ ಬೇಲಿ(ವಿದ್ಯುತ್‌ ಪ್ರವಹಿಸುತ್ತಿದ್ದ ತಂತಿಗಳು)ಯನ್ನು ಸ್ಪರ್ಶಿಸಿ, ಎರಡು ಆನೆಗಳು ಸೋಮವಾರ ಬೆಳಗ್ಗೆ ಮೃತಪಟ್ಟಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X