ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೂರ್ಣ ಚಂದ್ರಗ್ರಹಣ : ಏನು? ಹೇಗೆ?

By Staff
|
Google Oneindia Kannada News

ಭಾನುವಾರ(ಫೆ.4) ಮುಂಜಾನೆ ಪೂರ್ಣ ಚಂದ್ರಗ್ರಹಣ ಸಂಭವಿಸಲಿದೆ. 2.59ಕ್ಕೆ ಪ್ರಾರಂಭವಾಗಲಿದ್ದು, 7.55ಕ್ಕೆ ಮೋಕ್ಷ.

  • ದೈವಜ್ಞ ಕೆ.ಎನ್‌.ಸೋಮಯಾಜಿ
ಬೆಂಗಳೂರಿನಲ್ಲಿ 6.40ಕ್ಕೆ ಚಂದ್ರಗ್ರಹಣ ಗೋಚರಿಸಲಿದೆ. ಆರ್ಕ್‌ಟಿಕ್‌ ಭಾಗಗಳಲ್ಲಿ, ಏಷ್ಯಾದ ಪೂರ್ವಭಾಗವನ್ನು ಹೊರತುಪಡಿಸಿ, ಯೂರೋಪ್‌, ಬ್ರಿಟಿಷ್‌ ದ್ವೀಪ ಸಮೂಹ, ಆಫ್ರಿಕಾ, ದಕ್ಷಿಣ ಅಮೆರಿಕ, ಉತ್ತರ ಅಮೆರಿಕ ಹಾಗೂ ಮಧ್ಯ ಅಮೆರಿಕದ ಪೂರ್ವ ಭಾಗಗಳಲ್ಲೂ ಗೋಚರಿಸುತ್ತದೆ.

ಗ್ರಹಣದ ಪ್ರಾರಂಭ ಛಾಯೆಯು ಪಶ್ಚಿಮ ಆಸ್ಟ್ರೇಲಿಯಾ, ಜಪಾನಿನ ವಾಯವ್ಯ ತುದಿ, ಚೀನಾದ ಪೂರ್ವ ಭಾಗಗಳು, ಪೂರ್ವ ರಷ್ಯಾ, ಫಿಲಿಪ್ಪೀನ್ಸ್‌ ಹಾಗೂ ಇಂಡೋನೇಷ್ಯಾಗಳಲ್ಲಿ ಹಾಗೂ ಗ್ರಹಣದ ಮೋಕ್ಷಕಾಲವು ದಕ್ಷಿಣ ಅಟ್ಲಾಂಟಿಕ್‌ ಸಾಗರ ಮೆಕ್ಸಿಕೊ ಅಮೆರಿಕದ ಮಧ್ಯ ಭಾಗಗಳಲ್ಲಿ ಹಾಗೂ ಕೆನಡಾದ ಮಧ್ಯಭಾಗಗಳಲ್ಲಿ ಕಾಣುತ್ತದೆ.

ಸೂಚನೆ : ಚಂದ್ರ ಗ್ರಹಣದ ಭಾಗಶಃ ಛಾಯೆ, ಗ್ರಹಣದ ಪೂರ್ಣ ಛಾಯೆಯ ಪ್ರಾರಂಭ ಹಾಗೂ ಮೋಕ್ಷ ಕಾಲ ಭಾರತದ ಎಲ್ಲ ಭಾಗಗಳಲ್ಲಿ ಕಾಣಿಸುತ್ತದೆ. ಗ್ರಹಣದ ಭಾಗಶಃ ಛಾಯೆಯ ಮೋಕ್ಷ ಕಾಲವು ಭಾರತದ ಉತ್ತರ, ವಾಯವ್ಯ ಮತ್ತು ಪಶ್ಚಿಮ ಭಾಗಗಳಲ್ಲಿ ಮಾತ್ರ ಗೋಚರಿಸುತ್ತದೆ. ದೇಶದ ಬೇರೆ ಭಾಗಗಳಲ್ಲಿ ಚಂದ್ರನು ಗ್ರಹಣದ ಮುಕ್ತಾಯದ ಮೊದಲೇ ಅಸ್ತನಾಗುತ್ತಾನೆ.

ಫಲಾಫಲ : ಗ್ರಹಣವು ಪೂರ್ವಾಫಾಲ್ಗುಣಿ ನಕ್ಷತ್ರ, ಸಿಂಹರಾಶಿಯಲ್ಲಿ ಸಂಭವಿಸಲಿದೆ. ಮಘಾ, ಪುಬ್ಬ, ಉತ್ತರಾ, ಭರಣಿ, ಪೂರ್ವಾಷಾಢ ನಕ್ಷತ್ರದವರಿಗೆ ಹಾಗೂ ಕುಂಭ, ಕರ್ಕಾಟಕ, ಕನ್ಯಾ, ಮಕರ, ಮೀನ, ಸಿಂಹ, ಧನುರಾಶಿಯವರಿಗೆ ದೋಷ ಇದೆ.

ಶನಿವಾರ ಸೂರ್ಯಾಸ್ತದ ನಂತರ ಭಾನುವಾರ ಚಂದ್ರೋದಯದವರೆಗೆ ಭೋಜನಾದಿಗಳು ನಿಷಿದ್ಧ. ಆದರೆ ಗರ್ಭಿಣಿಯರು, ಬಾಣಂತಿಯರು, ಮಕ್ಕಳು, ವೃದ್ಧರು ಮತ್ತು ಅನಾರೋಗ್ಯದವರಿಗೆ ವಿನಾಯಿತಿ ಇದೆ.

ಗ್ರಹಣ ಕಾಲ(ಭಾರತೀಯ ಕಾಲಮಾನದ ಪ್ರಕಾರ--ಗಂ, ನಿ, ಸೆ)

  • ಪ್ರಾರಂಭ -3.00.0
  • ಪೂರ್ಣ ಛಾಯೆಯ ಪ್ರಾರಂಭ -4.13.8
  • ಮಧ್ಯಭಾಗ -4.50.9
  • ಪೂರ್ಣ ಛಾಯೆಯ ಮುಕ್ತಾಯ- 5.28.0
  • ಮೋಕ್ಷ ಕಾಲ - 6.41.7
  • ಚಂದ್ರನು ಅಪೂರ್ಣ ಛಾಯೆಗೆ ಪ್ರವೇಶ -1.46.4
  • ಚಂದ್ರನು ಅಪೂರ್ಣ ಛಾಯೆ ಬಿಡುವ ಸಮಯ - 7.55.4
  • ಗ್ರಹಣದ ಪರಿಮಾಣ - 1.237
  • ಕಾಲಾವಧಿ -3 ಗಂಟೆ 41 ನಿಮಿಷ 7 ಸೆಕೆಂಡ್‌
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X