ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಕ್ರಿಕೆಟ್‌ ಟೀಮ್‌ ಮೇಲೆ ಉಗ್ರರ ಕಣ್ಣು; ಬಿಗಿಭದ್ರತೆ

By Staff
|
Google Oneindia Kannada News

ನವದೆಹಲಿ : ಜಗತ್ತಿನ ಗಮನ ಸೆಳೆದಿರುವ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗಳ ಮೇಲೆ ಉಗ್ರರ ಕರಿನೆರಳು ಕಾಡುತ್ತಿದೆ. ಈ ಮಧ್ಯೆ ಭಾರತೀಯ ಆಟಗಾರರಿಗೆ ವಿಶೇಷ ಭದ್ರತೆ ಒದಗಿಸಲಾಗಿದೆ.

ಪಾಕ್‌ ಮೂಲದ ಲಷ್ಕರ್‌-ಇ-ತೊಯ್ಬಾ ಉಗ್ರಗಾಮಿ ಸಂಘಟನೆಗಳು, ಕೆಲವು ಭಾರತೀಯ ಆಟಗಾರರಿಗೆ ಬೆದರಿಕೆವೊಡ್ಡಿವೆ. ಹೀಗಾಗಿ ವಿಶ್ವಕಪ್‌ ಕ್ರಿಕೆಟ್‌ ಸಂದರ್ಭದಲ್ಲಿ ಭಾರತೀಯ ಆಟಗಾರರಿಗೆ, ರಾಷ್ಟ್ರೀಯ ಭದ್ರತಾ ಪಡೆ(ಎನ್‌ಎಸ್‌ಜಿ) ಕಮಾಂಡೋಗಳ ಬಿಗಿ ಭದ್ರತೆ ಒದಗಿಸಲಿದೆ.

ವಿಶ್ವಕಪ್‌ ಪಂದ್ಯಾವಳಿಗಳ ಹಿನ್ನೆಲೆಯಲ್ಲಿ ವೆಸ್ಟ್‌ ಇಂಡೀಸ್‌ನಲ್ಲಿರುವ ಭಾರತೀಯ ತಂಡ, ಕಮಾಂಡೋಗಳ ಭದ್ರತೆ ನಡುವೆ ಅಭ್ಯಾಸ ಮುಂದುವರೆಸಿದೆ. ಈ ಭದ್ರತಾ ಪಡೆ(ಬ್ಲ್ಯಾಕ್‌ ಕ್ಯಾಟ್ಸ್‌), ಬಾಂಬ್‌ ತಪಾಸಣೆ ಮತ್ತು ನಿಷ್ಕಿೃಯಗೊಳಿಸುವ ತಜ್ಞರನ್ನು ಒಳಗೊಂಡಿದೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X