ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುರಸ್ಕಾರ: ಸಾಧನೆಗೈದ ಕನ್ನಡ ಜಾಣ-ಜಾಣೆಯರ ವಿವರ

By Staff
|
Google Oneindia Kannada News

ಬೆಂಗಳೂರು : ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಎಂ.ಎ. ಪರೀಕ್ಷೆಯಲ್ಲಿ ಗರಿಷ್ಠ ಅಂಕಪಡೆದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕರ್ನಾಟಕದಾಚೆಗಿನ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಎಂ.ಎ., ನಲ್ಲಿ ಗರಿಷ್ಠ ಅಂಕ ಪಡೆದ 13 ವಿದ್ಯಾರ್ಥಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ರಾಜ್ಯಮಟ್ಟದಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳು ತಲಾ 7,000ರೂಪಾಯಿ ನಗದು, ಸ್ಮರಣಿಕೆ ಹಾಗೂ ಪ್ರಮಾಣಪತ್ರ ಪಡೆಯಲಿದ್ದಾರೆ. ವಿಭಾಗವಾರು ಗರಿಷ್ಠ ಅಂಕ ಪಡೆದವರು 5,000ರೂಪಾಯಿ ನಗದು ಹಾಗೂ ಇತರರು 2,000ರೂಪಾಯಿ ನಗದು, ಸ್ಮರಣಿಕೆ ಹಾಗೂ ಪ್ರಮಾಣಪತ್ರ ಪಡೆಯಲಿದ್ದಾರೆ.

ಮಾರ್ಚ್‌ 6ರಂದು ಯವನಿಕಾದಲ್ಲಿ ನಡೆಯುವ ಸಮಾರಂಭದಲ್ಲಿ ಬಹಮಾನ ನೀಡಿ ಗೌರವಿಸಲಾಗುವುದು.

ಗೌರವಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು :

ಎಸ್‌ಎಸ್‌ಎಲ್‌ಸಿ - ನರೇಶ್‌ಕುಮಾರ್‌ ಹೆಗಡೆ(ರಾಜ್ಯಮಟ್ಟದಲ್ಲಿ ಗರಿಷ್ಠ), ಕೇಶವಮೂರ್ತಿ ಜಿ(ಬೆಂಗಳೂರು ವಿಭಾಗದಲ್ಲಿ ಗರಿಷ್ಠ), ಶಮಂತ್‌ ಎಸ್‌(ಮೈಸೂರು ವಿಭಾಗ), ದೀಪಕ್‌ ಪುಂಡಲೀಕ್‌ ಪಟಗಾರ್‌(ಬೆಳಗಾವಿ ವಿಭಾಗ) ಮತ್ತು ಸೌಮ್ಯಾ(ಗುಲ್ಬರ್ಗಾ ವಿಭಾಗ).

ಪಿಯುಸಿ - ಜಗದೀಶ್‌ ಎಚ್‌(ರಾಜ್ಯಮಟ್ಟದಲ್ಲಿ ಗರಿಷ್ಠ), ಬಸಮ್ಮ ಕೆ ಮತ್ತು ಫಕೀರಪ್ಪ(ಬೆಂಗಳೂರು ವಿಭಾಗ), ಜ್ಯೋತಿ ಎಚ್‌ ಎಂ ಮತ್ತು ಆಶಾಬಾಯಿ ವಿ(ಮೈಸೂರು ವಿಭಾಗ) ಬಸವರಾಜ ಅಡೆಣ್ಣವರ್‌ ಮತ್ತು ಬೀರಣ್ಣವರ್‌ ಸುನೀತಾ(ಬೆಳಗಾವಿ ವಿಭಾಗ), ಅಟಕೂರಿ ಮುರಳಿ ಕೃಷ್ಣ ಮತ್ತು ಆರತಿ(ಗುಲ್ಬರ್ಗಾ ವಿಭಾಗ).

ಎಂ.ಎ., ಕನ್ನಡ - ದಿನೇಶ್‌ ಶೆಟ್ಟಿ ಮತ್ತು ಮಾಣಿಕ್‌ರಾವ್‌(ಮುಂಬಯಿ ವಿಶ್ವವಿದ್ಯಾಲಯ, ಮುಂಬಯಿ), ಫಕೀರಪ್ಪ ಮತ್ತು ಉದಯ ಗುಡ್ಡಪ್ಪ ಬನ್ನಿಕೋಡ್‌(ಮದುರೈ ಕಾಮರಾಜ್‌ ವಿಶ್ವವಿದ್ಯಾಲಯ, ಮದುರೈ), ದಿವ್ಯಜ್ಯೋತಿ ಎಂ ಕೆ ಮತ್ತು ಅಜೇಯಕುಮಾರ್‌ ವಿ ಎಚ್‌(ಮದ್ರಾಸ್‌ ವಿಶ್ವವಿದ್ಯಾಲಯ), ಮೋರೆ ಶ್ರೀಕೃಷ್ಣ ಶಂಕರ ಮತ್ತು ಕಾಳಶೆಟ್ಟಿ ಲಕ್ಷ್ಮೀ ಈರಣ್ಣ(ರಾಜಾ ಜಯಸಿಂಹ ಕಲಾ ಕಾಲೇಜು ಸೊಲ್ಲಾಪುರ), ಮೀನಾಕ್ಷಿ ಬಿ ಮತ್ತು ಉಷಾ ಎಂ(ಕನ್ನಡದಲ್ಲಿ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನೆ, ಸರ್ಕಾರಿ ಕಾಲೇಜು, ಕಾಸರಗೋಡು), ಅರ್ಚನಾ ಪೂಜಾರಿ(ರಾಮ್‌ ನಿರಂಜನ್‌ ಜುಂಜುನ್‌ವಾಲಾ ಕಾಲೇಜು, ಮುಂಬಯಿ), ಕೆ ಖಾದರ್‌ ಬಾಷಾ ಮತ್ತು ಸತ್ಯವತಿ ಎ ಜೆ(ಉಸ್ಮಾನಿಯಾ ವಿಶ್ವವಿದ್ಯಾಲಯ, ಹೈದರಾಬಾದ್‌)

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X