ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಬಜೆಟ್‌ನಲ್ಲಿ ಏನಿದೆ? ಯಾವುದು ಅಗ್ಗ/ತುಟ್ಟಿ?

By Staff
|
Google Oneindia Kannada News

ನವದೆಹಲಿ : 2007-08ನೇ ಸಾಲಿನ ಕೇಂದ್ರ ಆಯವ್ಯಯ ಪತ್ರವನ್ನು ಸಂಸತ್ತಿನಲ್ಲಿ, ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಬುಧವಾರ ಮಂಡಿಸಿದ್ದಾರೆ.

ತಮ್ಮ ರಾಜಕೀಯ ಬದುಕಿನಲ್ಲಿ ಒಟ್ಟು ಆರು ಸಲ ಬಜೆಟ್‌ ಮಂಡಿಸಿದ ಹೆಗ್ಗಳಿಕೆ ಹೊಂದಿರುವ ಪಿ.ಚಿದಂಬರಂ, ಯುಪಿಎ ಸರ್ಕಾರದಲ್ಲಿ ಸತತ ನಾಲ್ಕನೇ ಬಾರಿಗೆ ಬಜೆಟ್‌ ಮಂಡಿಸಿದರು. ಕ್ವಟ್ರೋಚಿ ವಿವಾದವನ್ನು ಮುಂದಿಟ್ಟುಕೊಂಡು ರೈಲ್ವೆ ಬಜೆಟ್‌ಗೆ ಅಡ್ಡಿಪಡಿಸಿದ್ದ ಎನ್‌ಡಿಎ, ಸಮಾಧಾನದಿಂದ ಕೇಂದ್ರ ಬಜೆಟ್‌ ಮಂಡನೆಗೆ ಅವಕಾಶ ಕಲ್ಪಿಸಿದೆ.

ಬಜೆಟ್‌ ಮುಖ್ಯಾಂಶಗಳು -

12.40

  • 2006-07ನೇ ಸಾಲಿನ ಮೊದಲ 9ತಿಂಗಳಲ್ಲಿ ವ್ಯಾಟ್‌ನಿಂದ ಆದಾಯ ಶೇ.24.3ರಷ್ಟು ಹೆಚ್ಚಳ.
  • ವಾರ್ಷಿಕ 1ಲಕ್ಷ ರೂ. ಸಂಪಾದಿಸುವವರಿಗೆ ನೀಡಲಾಗಿದ್ದ ಆದಾಯ ತೆರಿಗೆ ವಿನಾಯತಿ, ಈಗ 1.10ಲಕ್ಷದವರೆಗೆ ಹೆಚ್ಚಳ. ಮಹಿಳೆಯರಿಗೆ 1.45ಲಕ್ಷದವರೆಗೆ ತೆರಿಗೆ ವಿನಾಯಿತಿ.
  • ಕಾರ್ಫೋರೇಟ್‌ ವಲಯದಲ್ಲಿ ಆದಾಯ ತೆರಿಗೆ ಯಥಾಪ್ರಕಾರ ಮುಂದುವರಿಕೆ.
  • ಹಿರಿಯ ನಾಗರಿಕರಿಗೆ 1.95ಲಕ್ಷದವರೆಗೆ ತೆರಿಗೆ ವಿನಾಯಿತಿ.
  • ಏಡ್ಸ್‌ ನಿರ್ಮೂಲನಾ ಕಾರ್ಯಕ್ರಮಕ್ಕಾಗಿ 969ಕೋಟಿ.
  • ಮಹಿಳಾ ಕಲ್ಯಾಣ ಯೋಜನೆಗಳಿಗೆ 8795ಕೋಟಿ.
  • 8ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ವಿದ್ಯಾರ್ಥಿವೇತನ.
  • ಪ್ರಾಥಮಿಕ ಶಿಕ್ಷಣಕ್ಕೆ 3794ಕೋಟಿ.
  • ಕಾಫಿ, ರಬ್ಬರ್‌, ಮಸಾಲೆಗೆ ಪ್ಯಾಕೇಜ್‌.
  • ಬಿಹಾರದಲ್ಲಿ ರಸ್ತೆ ಮತ್ತು ರೈಲ್ವೆ ಯೋಜನೆಗಳು.
  • ಹವಾಮಾನಾಧಾರಿತ ಬೆಳೆ ವಿಮೆ ಯೋಜನೆ.
  • ಮುಂಬೈ ನಗರವನ್ನು ಪ್ರಪಂಚದ ವಾಣಿಜ್ಯ ನಗರಿಯಾಗಿ ಬದಲಿಸಲು ಆದ್ಯತೆ.
  • ಸಣ್ಣ ರೈತರಿಗೆ ಶೇ.100 ಸಬ್ಸಿಡಿ, ಇನ್ನಿತರ ರೈತರಿಗೆ ಶೇ.50ರಷ್ಟು ಸಬ್ಸಿಡಿ.
12.30
  • 2,25,000 ಕೋಟಿ ಕೃಷಿ ಸಾಲ ನೀಡುವ ಪ್ರಸ್ತಾವನೆ, 50,00,000 ಹೆಚ್ಚುವರಿ ರೈತರನ್ನು ಯೋಜನೆ ವ್ಯಾಪ್ತಿಗೆ ತರುವ ಗುರಿ.
  • ಭೂರಹಿತ ಗ್ರಾಮೀಣ ಕುಟುಂಬಗಳಲ್ಲಿ ಮರಣ ಅಥವಾ ಅಂಗವಿಕಲತೆ ಉಂಟಾದರೆ ವಿಮೆ ನೀಡಿಕೆ. ಈ ನಿಟ್ಟಿನಲ್ಲಿ ಆಮ್‌ ಆದ್ಮಿ ಬಿಮಾ ಯೋಜನಾ ಸ್ಥಾಪನೆ.
  • ಮಹಿಳಾ ಅಭಿವೃದ್ಧಿಗೆ 22,282ಕೋಟಿ ರೂಪಾಯಿ.
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಯೋಜನೆಗಳಿಗೆ 3,271ಕೋಟಿ.
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ವಿದ್ಯಾರ್ಥಿ ವೇತನ 440ಕೋಟಿ ರೂಪಾಯಿಯಿಂದ 611ಕೋಟಿ ರೂಪಾಯಿವರೆಗೆ ಏರಿಕೆ.
  • 330ಜಿಲ್ಲೆಗಳಲ್ಲಿ ಉದ್ಯೋಗ ಖಚಿತ ಯೋಜನೆ
  • 520ಕೋಟಿ ಪ್ರವಾಸೋದ್ಯಮ ಅಭಿವೃದ್ಧಿಗೆ
  • ಚಪ್ಪಲಿ ಅಗ್ಗ, ಸೀಮೆಂಟ್‌ ತುಟ್ಟಿ
11.45
  • ವ್ಯವಸಾಯ ಸರ್ಕಾರದ ಟಾಪ್‌ ಅಜೆಂಡಾ.
  • ಶಿಕ್ಷಣಕ್ಕಾಗಿ ಶೇ.44.2ರಷ್ಟು ಹಣ ಖರ್ಚು (32,352ಕೋಟಿ ರೂ.ಗಳು)
  • 2006ರಲ್ಲಿ ಗ್ರಾಮೀಣ ಪ್ರದೇಶದಲ್ಲಿ 7.83ಲಕ್ಷ ಮನೆಗಳ ನಿರ್ಮಾಣ.
  • ಆಹಾರ ಪದಾರ್ಥಗಳ ಬೆಲೆ ಹೆಚ್ಚಳದತ್ತ ನಿಗಾವಹಿಸಲು ಸಮಿತಿ ರಚನೆ
  • 10ನೇ ಹಣಕಾಸು ಯೋಜನೆಯಲ್ಲಿ ಕೃಷಿ ಬೆಳವಣಿಗೆ ದರ ಶೇ.2.3
  • ಯುಪಿಎ ಆಡಳಿತಾವಧಿಯಲ್ಲಿ ಅಭಿವೃದ್ಧಿಯ ಬೆಳವಣಿಗೆ ದರ ಶೇ.8.6ರಷ್ಟಿದೆ.
  • ಜಿಡಿಪಿ ಬೆಳವಣಿಗೆ ದರ ಶೇ.9.2ರಷ್ಟಿದ್ದು, ಈ ಸಲ ಹೆಚ್ಚಳ ಕಂಡು ಬಂದಿದೆ.
  • ಉಳಿತಾಯ ದರ ಶೇ.32.4.
  • ಸರ್ವಶಿಕ್ಷಣ ಅಭಿಯಾನ ಮತ್ತು ಮಧ್ಯಾಹ್ನದ ಬಿಸಿಯೂಟಕ್ಕೆ ಅನುದಾನ.
  • ಪ್ರೌಢ ಶಿಕ್ಷಣಕ್ಕೆ 3794ಕೋಟಿ ರೂಪಾಯಿ ಮೀಸಲು.
  • ಶಾಲೆಯನ್ನು ಅರ್ಧಕ್ಕೆ ನಿಲ್ಲಿಸುವುದನ್ನು ತಪ್ಪಿಸಲು ರಾಷ್ಟ್ರಮಟ್ಟದ ವಿದ್ಯಾರ್ಥಿ ವೇತನ ಸ್ಥಾಪನೆ. 9, 10, 11, 12ನೇ ತರಗತಿಯಲ್ಲಿ ಓದುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ವರ್ಷಕ್ಕೆ ತಲಾ 6,000 ರೂಪಾಯಿ ವಿದ್ಯಾರ್ಥಿ ವೇತನ.
  • ಆರೋಗ್ಯ ಕ್ಷೇತ್ರಕ್ಕೆ ಮೀಸಲಿಡಲಾಗುವ ಹಣದಲ್ಲಿ ಶೇಕಡಾ 21.9ರಷ್ಟು ಹೆಚ್ಚಳ.
  • ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಲಾಗುವ ಹಣದಲ್ಲಿ 34.2ರಷ್ಟು ಹೆಚ್ಚಳ.
  • 2,00,000 ಶಿಕ್ಷಕರ ನೇಮಕಕ್ಕೆ ಕಾರ್ಯಕ್ರಮ.
  • 5,00,000 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಕ್ರಮ.
(ಏಜನ್ಸೀಸ್‌)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X