ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿ ಹುಂಡಿಯಲ್ಲಿ ದಿನವೂ ರಾಶಿರಾಶಿ ನಕಲಿ ನೋಟು!

By Staff
|
Google Oneindia Kannada News

ತಿರುಪತಿ ಹುಂಡಿಯಲ್ಲಿ ದಿನವೂ ರಾಶಿರಾಶಿ ನಕಲಿ ನೋಟು!

ಹೈದರಾಬಾದ್‌ : ದೇಶದ ಶ್ರೀಮಂತ ದೇವಸ್ಥಾನವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ತಿರುಪತಿಯಲ್ಲಿ ನಕಲಿ ನೋಟುಗಳು ಪ್ರತ್ಯಕ್ಷ! ಅದೂ ಎಲ್ಲರಿಗೂ ನಾಮ ಹಾಕುವ ವೆಂಕಟರಮಣನ ಹುಂಡಿಯಲ್ಲಿ!

ಇದು ಒಂದು ದಿನದ ಗೋಳಲ್ಲ, ಪ್ರತಿ ದಿನವೂ ಸಾಕಷ್ಟು ನಕಲಿ ನೋಟುಗಳು ಹುಂಡಿಯಲ್ಲಿ ಕಾಣಿಸುತ್ತಲೇ ಇವೆ. ಕಳೆದ ಆರು ತಿಂಗಳ ಹಿಂದೆ ಪ್ರತಿ ದಿನ 3ಸಾವಿರಕ್ಕೂ ಅಧಿಕ ಮೌಲ್ಯದ ನಕಲಿ ನೋಟುಗಳು ಪತ್ತೆಯಾಗುತ್ತಿದ್ದವು. ಈಗ ಆ ಸಂಖ್ಯೆ ಹೆಚ್ಚಿದೆ. ಪ್ರತಿದಿನ 50ಸಾವಿರ ಮೌಲ್ಯದ ನಕಲಿ ನೋಟುಗಳು ಹುಂಡಿಯಲ್ಲಿ ಸಿಗುತ್ತಿವೆ.

ಹುಂಡಿ ಹಣವನ್ನು ಬ್ಯಾಂಕ್‌ಗೆ ಪಾವತಿಸುವುದು ಇಲ್ಲಿನ ಪದ್ಧತಿ. ಬ್ಯಾಂಕ್‌ನ ಅಧಿಕಾರಿಗಳಿಗಂತೂ ಈಗ ನಕಲಿ ನೋಟುಗಳ ಹುಡುಕುವುದೇ ಒಂದು ಕೆಲಸವಾಗಿಬಿಟ್ಟಿದೆ. ಈ ನಕಲಿ ನೋಟುಗಳನ್ನು ಒಂದೆಡೆ ಸಂಗ್ರಹಿಸಿಡಲಾಗಿದ್ದು, ಪೊಲೀಸ್‌ ಇಲಾಖೆ ಮತ್ತು ಆರ್‌ಬಿಐ ನಿರ್ದೇಶನಕ್ಕಾಗಿ ಎದುರು ನೋಡಲಾಗುತ್ತಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ.

ಕೂದಲು, ಆಭರಣ, ಹಣ ಹೀಗೆ ನಾನಾ ಹರಕೆ ಹೊತ್ತು, ವೆಂಕಟರಮಣನ ಆಶೀರ್ವಾದ ಬಯಸುವ ಭಕ್ತರು ದೇಶದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಇದ್ದಾರೆ. ಈಗ ನಕಲಿ ನೋಟು ಹಾಕಿ, ಹರಕೆ ತೀರಿಸುವ ಭಕ್ತರು ಹುಟ್ಟಿಕೊಂಡಿದ್ದಾರೆ! ಅವರನ್ನೂ ಸಹಾ ತಿರುಮಲ ಕಾಯುವನೇನೋ?

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X