• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೇಂದ್ರ ರೈಲ್ವೆ ಬಜೆಟ್‌-2007 : ಮುಖ್ಯಾಂಶಗಳು

By Staff
|

ನವದೆಹಲಿ : ಪ್ರಸಕ್ತ ಸಾಲಿನ ಕೇಂದ್ರ ರೈಲ್ವೆ ಆಯವ್ಯಯ ಪಟ್ಟಿಯನ್ನು ಸಚಿವ ಲಾಲು ಪ್ರಸಾದ್‌, ಪ್ರತಿಪಕ್ಷಗಳ ಅಸಹಕಾರದ ಮಧ್ಯೆಯೇ ಮಂಡಿಸಿದರು.

ಬಜೆಟ್‌ನ ಮುಖ್ಯಾಂಶಗಳು :

  • 2006-07ರಲ್ಲಿ ರೈಲ್ವೆ ಇಲಾಖೆಗೆ ಲಾಭ ವೃದ್ಧಿ. ಒಟ್ಟು ಲಾಭ 20ಸಾವಿರ ಕೋಟಿ. ಕಳೆದ ಸಾಲಿನಲ್ಲಿ ಇಲಾಖೆ 14.7ಕೋಟಿ ಲಾಭ ಗಳಿಸಿತ್ತು.
  • 500 ಕಿ.ಮೀ ಹೊಸ ರೈಲ್ವೆ ಮಾರ್ಗ
  • ಹವಾನಿಯಂತ್ರಿತ 2ನೇ ದರ್ಜೆ ರೈಲಲ್ಲಿ ಪೀಕ್‌ ಸೀಸನ್‌ನಲ್ಲಿ ಶೇ.2ರಷ್ಟು ದರ ಕಡಿತ. ಮೊದಲನೇ ದರ್ಜೆಯಲ್ಲಾದರೆ ಶೇ.3.5ರಷ್ಟು ದರ ಕಡಿತ.
  • ಹವಾನಿಯಂತ್ರಿತ ರೈಲುಗಳಲ್ಲಿ ಪ್ರಥಮ ದರ್ಜೆ ಪ್ರಯಾಣ ದರ ಹೆಚ್ಚಳ.
  • 23ರೈಲ್ವೆ ಮಾರ್ಗಗಳ ವಿಸ್ತರಣೆಗೆ ಅಸ್ತು.
  • ಪ್ರಯಾಣ ದರದಲ್ಲಿ ಹೆಚ್ಚಳ ಇಲ್ಲ.
  • 2008ರೊಳಗೆ 225ರೈಲ್ವೆ ಸ್ಟೇಷನ್‌ ಸ್ಥಾಪನೆ
  • ರೈಲ್ವೆ ಖಾಸಗೀಕರಣಕ್ಕೆ ವಿರೋಧ
  • ವಿದ್ಯಾರ್ಥಿಗಳಿಗೆ ರಿಯಾಯಿತಿ. 2ನೇ ದರ್ಜೆ ಪ್ರಯಾಣದರ ಈಗ ಸುಲಭ.
  • ಯುಪಿಎಸ್‌ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಶೇ.50ರಷ್ಟು ರಿಯಾಯಿತಿ.
  • 2007-08 ಸ್ವಚ್ಛತೆಯ ವರ್ಷವಾಗಿ ಆಚರಣೆ.
  • 8000 ಸ್ವಯಂ ಟಿಕೆಟ್‌ ನೀಡಿಕೆ ಯಂತ್ರಗಳ ಅಳವಡಿಕೆ
  • 32 ಹೊಸ ರೈಲುಗಳ ಆರಂಭ.
  • 2006ರ ಏಪ್ರಿಲ್‌-ಡಿಸೆಂಬರ್‌ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆ ಶೇ.14ರಷ್ಟು ಹೆಚ್ಚಳ.
  • ಪೆಟ್ರೋಲ್‌ ಪಂಪ್‌ ಮತ್ತು ಅಂಚೆ ಕಚೇರಿಯಲ್ಲಿ ಇ-ಟಿಕೆಟ್‌.
  • 8 ಹೊಸ ಗರೀಬ್‌ ರಥಗಳಿಗೆ ಚಾಲನೆ
  • ಕಾಲ್‌ ಸೆಂಟರ್‌ ಸ್ಥಾಪನೆ
  • ಎಸ್‌ಎಂಎಸ್‌ ಮೂಲಕ ಪ್ರಯಾಣಿಕರಿಗೆ ಸೂಚನೆ-ಮಾಹಿತಿ
  • 139ಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದು.
  • ಅಂಗವಿಕಲರಿಗೆ ವಿಶೇಷವಾಗಿ ವಿನ್ಯಾಸ ಮಾಡಿದ ಬೋಗಿ.
  • 45ದಾಟಿದ ಮಹಿಳೆಯರಿಗೆ ರೈಲ್ವೆ ಪ್ರಯಾಣದಲ್ಲಿ ರಿಯಾಯಿತಿ ಕೋಟಾ
  • ರಿಸರ್ವ್‌ ರಹಿತ ಕಾಂಪಾರ್ಟ್‌ಮೆಂಟ್‌ಗಳಲ್ಲೂ ಕುಶನ್‌ ಸೀಟ್‌
  • ರೈಲಿನಲ್ಲಿ ಮರದ ಆಸನಗಳಿಗೆ ಬೈಬೈ.
  • ಜನಪ್ರಿಯ ಬಹುಪಯೋಗಿ ರೈಲುಗಳಿಗೆ 800 ಬೋಗಿಗಳ ಸೇರ್ಪಡೆ

(ಏಜನ್ಸೀಸ್‌)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more