ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ ಅನ್ಯಾಯ : ಕರವೇಯಿಂದ ದಿಲ್ಲಿ ತನಕ ದೂರು

By Staff
|
Google Oneindia Kannada News

ಬೆಂಗ-ಳೂರು : ಕಾವೇರಿ ತೀರ್ಪಿನ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ನವದೆಹಲಿಯಲ್ಲಿ ಮಾರ್ಚ್‌ 2ರಂದುಪ್ರತಿಭಟನೆ ನಡೆ-ಸಲು ಸಜ್ಜಾ-ಗಿ-ದೆ.ಕರ್ನಾಟಕ ರಕ್ಷಣಾ ವೇದಿಕೆ ಈ ಕುರಿತು ಮಾಧ್ಯಮ ಪ್ರಕಟಣೆಯಾಂದನ್ನು ಹೊರಡಿಸಿದೆ.

ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲಾ ರಾಜ್ಯದ ಪ್ರಜೆಗಳೂ ಸಮಾನರು, ಆದರೆ ಕೇಂದ್ರ ಸರಕಾರವುಕನ್ನಡಿಗರ ಬಗ್ಗೆ ಸದಾ ತಾರತಮ್ಯ ಧೋರಣೆ ತೋರುತ್ತಾ ಬಂದಿದೆ.ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ನ್ಯಾಯಾಧಿಕರಣ ತೀರ್ಪು ಹೊರಬಂದ ಕೆಲವೇಕ್ಷಣದಿಂದಲೇ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರಾಜ್ಯಾದ್ಯಕ್ಷರಾದ ಟಿ. ಎ ನಾರಾಯಣಗೌಡರ ನೇತೃತ್ವದಲ್ಲಿ ರಾಜ್ಯದ ಎಲ್ಲ ಕಡೆಗಳಲ್ಲೂ ಪ್ರತಿಭಟನೆ ನಡೆಸುತ್ತಬಂದಿದ್ದಾರೆ.

ಇದರ ಮುಂದಿನ ಹೆಜ್ಜೆಯಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಸಾವಿರಾರು ಕಾರ್ಯಕರ್ತರುಮಾರ್ಚ್‌ 2ರಂದು ದೆಹೆಲಿಯ ಜಂತರ್‌-ಮಂತರ್‌ ಬಳಿ ಪ್ರತಿಭಟನೆ ನಡೆಸಲಿದ್ದಾರೆ. ಇನ್ನುಮುಂದಾದರೂ ಕೇಂದ್ರ ಸರ್ಕಾರ ತಾರತಮ್ಯ ನೀತಿಯನ್ನು ಕೊನೆಗಾಣಿಸಿ, ನ್ಯಾಯವನ್ನುಎತ್ತಿಹಿಡಿಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯ ಪಡಿಸಲಿದೆ.

ಕರ್ನಾಟಕವೂ ಭಾರತದಲ್ಲಿದೆ ಮತ್ತು ಕನ್ನಡಿಗರೂ ಭಾರತೀಯರೇಎಂಬುದನ್ನು ಮರೆತಿರುವ ಕೇಂದ್ರ ಸರ್ಕಾರಕ್ಕೆ, ಎಚ್ಚೆತ್ತ ಕನ್ನಡಿಗರ ಸಹನೆ ಮುಗಿದಿದೆಯೆಂಬಸಂದೇಶ ಸಾರಲು, ದೇಶದ ರಾಜಧಾನಿಯಲ್ಲಿ ಈ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X