ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಫ್‌ಎಂ ರೇಡಿಯೋ ಕ್ರೇಜ್‌; ಸಾವಿನ ಮನೆಗೆ ಎಂಟ್ರಿ!

By Staff
|
Google Oneindia Kannada News

ಬೆಂಗಳೂರು : ಎಫ್‌ಎಂ ರೇಡಿಯೋ ಕೇಳುವುದು ಈಗಿನ ಜನರಿಗೆ ಒಂದು ಫ್ಯಾಷನ್‌. ಜೊತೆಗೆ ಅದೊಂದು ಗೀಳು. ಕಿವಿಯಲ್ಲಿ ಇಯರ್‌ ಪೋನ್‌ ಹಾಕಿಕೊಂಡರೆ, ಪ್ರಪಂಚವೇ ಸಿಡಿದರೂ ಗೊತ್ತಾಗದಷ್ಟು ತಲ್ಲೀನತೆ! ಈ ಅತಿಯಾದ ಎಫ್‌ಎಂ ರೇಡಿಯೋ ಹುಚ್ಚು, ವ್ಯಕ್ತಿಯಾಬ್ಬರ ಪ್ರಾಣವನ್ನೇ ತಿಂದುಬಿಟ್ಟಿದೆ!

ನಗರದ ಗಾರ್ಮೆಂಟ್ಸ್‌ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಚನ್ನಪಟ್ಟಣದ ನಾರಾಯಣಪ್ಪ ಅವರ ಪಾಲಿಗೆ, ಎಫ್‌ಎಂ ರೇಡಿಯೋ ಸಾವಿನ ಸಾಧನವಾಯಿತು! ನಾಯಂಡನಹಳ್ಳಿ ರೈಲ್ವೆ ಹಳಿಗಳ ಮೇಲೆ ಎಫ್‌ಎಂ ರೇಡಿಯೋ ಕೇಳುತ್ತಾ, ನಡೆದುಹೋಗುತ್ತಿದ್ದ ನಾರಾಯಣ್‌ಗೆ ಹಿಂದಿನಿಂದ ರೈಲು ಬರುವ ಸದ್ದು ಕೇಳಿಸಲೇ ಇಲ್ಲ. ಹೀಗಾಗಿ ಸಾವಿನ ಮನೆಗೆ ಹೋಗುವುದು ಸಹಾ ತಡವಾಗಲಿಲ್ಲ!

ಎಫ್‌ಎಂ ರೇಡಿಯೋವನ್ನು ನೀವು ಇಟ್ಟುಕೊಳ್ಳಬೇಕು... ನಿಮ್ಮನ್ನು ಎಫ್‌ಎಂ ರೇಡಿಯೋ ಇಟ್ಟುಕೊಳ್ಳಬಾರದು... ಏನಂತೀರಾ?

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X