ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿಯಲ್ಲಿ ಗುರುವಾರ ಬೃಹತ್‌ ಸಾಮೂಹಿಕ ವಿವಾಹ

By Staff
|
Google Oneindia Kannada News

ತಿರುಮಲ : ಭಾರತದಲ್ಲೇ ಅತ್ಯಂತ ಶ್ರೀಮಂತ ದೇವಸ್ಥಾನ ಎಂಬ ಖ್ಯಾತಿ ಪಡೆದಿರುವ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಫೆಬ್ರವರಿ 22ರಂದು ಬೃಹತ್‌ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ.

ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ 5,000 ನವಜೋಡಿಗಳ ಮದುವೆಯನ್ನು ಪ್ರಾಯೋಜಿಸುವ ಮೂಲಕ, ದೇವಸ್ಥಾನ ಕಾಳಜಿ ತೋರಿದೆ. ಮದುವೆ ಹೆಣ್ಣಿಗೆ ಒಂದು ಗ್ರಾಂ ಚಿನ್ನದ ಮಂಗಳಸೂತ್ರ, ಬೆಳ್ಳಿಕಾಲುಂಗುರ ಹಾಗೂ ನವದಂಪತಿಗೆ ಮದುವೆ ಬಟ್ಟೆ ನೀಡಲಾಗುವುದು. ಇದಲ್ಲದೆ ಹುಡುಗಿ ಕಡೆಯ 10 ಜನ ಹಾಗೂ ಹುಡುಗನ ಕಡೆಯ 10 ಜನಕ್ಕೆ ಆಂಧ್ರಶೈಲಿ ಊಟವನ್ನೂ ವ್ಯವಸ್ಥೆಗೊಳಿಸಲಾಗಿದೆ.

ಈ ಸಾಮೂಹಿಕ ವಿವಾಹದ ಅಂದಾಜು ವೆಚ್ಚ ಮೂರು ಕೋಟಿ ರೂಪಾಯಿ. ಎಲ್ಲ ಮದುವೆಗಳೂ ನೋಂದಾವಣೆಯಾಗುವಂತೆ ನೋಡಿಕೊಳ್ಳಲಾಗುತ್ತಿದೆ. ಅಂದಹಾಗೆ ದೇವಸ್ಥಾನ ಮಂಡಳಿ 2008ರಲ್ಲಿ ಒಂದು ಲಕ್ಷ ಮದುವೆ ನಡೆಸುವ ಯೋಜನೆ ಹಾಕಿಕೊಂಡಿರುವುದು ಇನ್ನೂ ಗಮನಾರ್ಹ ಸಂಗತಿ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X