ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಪಾಕ್‌ ವಿದೇಶಾಂಗ ಸಚಿವರ ಮಹತ್ವದ ಮಾತುಕತೆ

By Staff
|
Google Oneindia Kannada News

ನವದೆಹಲಿ : ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಸಹಕಾರ ನೀಡಲು ಬದ್ಧ ಎಂದು ಭಾರತ ಮತ್ತು ಪಾಕಿಸ್ತಾನಗಳು ಬುಧವಾರ ಹೇಳಿವೆ. ಸಂಜೋತಾ ಎಕ್ಸ್‌ಪ್ರೆಸ್‌ ದುರಂತದ ಹಿನ್ನೆಲೆಯಲ್ಲಿ ಈ ಹೇಳಿಕೆ ಹೊರಬಿದ್ದಿದೆ.

ಭಾರತದ ವಿದೇಶಾಂಗ ಸಚಿವ ಪ್ರಣಬ್‌ ಮುಖರ್ಜಿ ಹಾಗೂ ಪಾಕಿಸ್ತಾನದ ವಿದೇಶಾಂಗ ಸಚಿವ ಖುರ್ಷೀದ್‌ ಮಹಮದ್‌ ಕಸೂರಿ ಬುಧವಾರ ನಗರದಲ್ಲಿ ಭೇಟಿಯಾಗಿ ಈ ಕುರಿತು ಮಾತುಕತೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಉಭಯ ನಾಯಕರು, ಮಾರ್ಚ್‌ 6ರಂದು ನಡೆಯುವ ಭಯೋತ್ಪಾದನಾ ವಿರೋಧಿ ಜಂಟಿ ಸಭೆ ಅರ್ಥಪೂರ್ಣವಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು.

ಭಾರತೀಯ ವಿದೇಶಾಂಗ ಸಚಿವ ಪ್ರಣಬ್‌ ಮುಖರ್ಜಿ ಮಾತನಾಡಿ, ತನಿಖೆ ನಡೆಸುವುದು ಭಾರತದ ಜವಾಬ್ದಾರಿ. ಈ ಕುರಿತ ಮಾಹಿತಿಯನ್ನು ಭಯೋತ್ಪಾದನಾ ವಿರೋಧಿ ಜಂಟಿ ಸಭೆಯಲ್ಲಿ, ಪಾಕಿಸ್ತಾನದೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ಹೇಳಿದರು.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X