ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕ್‌ ಸಾಲ ಪಾವತಿಸದ ಗ್ರಾಹಕನಿಗೆ ಲಾಂಗ್‌ ಏಟು!

By Staff
|
Google Oneindia Kannada News

ಬೆಂಗಳೂರು : ಬೆಣ್ಣೆ ಮಾತಾಡಿ ಸಾಲಕೊಟ್ಟು , ನಂತರ ಖಾಸಗಿ ಬ್ಯಾಂಕ್‌ಗಳು ಪ್ರಾಣ ತಿನ್ನುತ್ತವೆ. ಸಾಲ ವಸೂಲಾತಿಗೆ ಯಾವ ತಂತ್ರ ಪ್ರಯೋಗಿಸಲೂ ಸಹಾ ಹಿಂದೆ ಮುಂದೆ ನೋಡುವುದಿಲ್ಲ.

ಐಸಿಐಸಿಐ ಬ್ಯಾಂಕ್‌ನಿಂದ ಸಾಲ ಪಡೆದಿದ್ದ ರಾಜೀವ್‌ಗಾಂಧಿ ನಗರದ ರೇಣುಕಪ್ಪ(40) ಈಗ ಬ್ಯಾಂಕ್‌ ಸಿಬ್ಬಂದಿಯಿಂದ ಹಲ್ಲೆಗೆ ಗುರಿಯಾಗಿದ್ದಾರೆ ಎನ್ನಲಾಗಿದೆ. ತ್ರಿಚಕ್ರದ ಸರಕು ಸಾಗಾಣೆ ವಾಹನ ಖರೀದಿಗಾಗಿ ಸಾಲ ಪಡೆದಿದ್ದ ರೇಣುಕಪ್ಪ , ಕಳೆದ 3ತಿಂಗಳಿಂದ ಕಂತುಗಳನ್ನು ಪಾವತಿಸಿರಲಿಲ್ಲ.

ಮಧ್ಯರಾತ್ರಿ 12.30ರ ಸಮಯದಲ್ಲಿ ಮನೆಗೆ ನುಗ್ಗಿದ ನಾಲ್ವರು, ಬ್ಯಾಂಕ್‌ ಸಿಬ್ಬಂದಿಯೆಂದು ಪರಿಚಯಿಸಿಕೊಂಡು ಮನೆಯಲ್ಲಿ ಕೂಗಾಡಿದರು. ಮನೆಯಲ್ಲಿದ್ದ ವಸ್ತುಗಳನ್ನು ಮನಬಂದಂತೆ ಚೆಲ್ಲಾಪಿಲ್ಲಿ ಮಾಡತೊಡಗಿದರು. ತಡೆಯಲು ಹೋದ ರೇಣುಕಪ್ಪ ಮತ್ತು ಅವರ ಪತ್ನಿಗೆ ಲಾಂಗ್‌ನಿಂದ ಹೊಡೆದು, ಪರಾರಿಯಾದರು ಎನ್ನಲಾಗಿದೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X