• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎರಡು ದಿನಗಳ ‘ದಾವಣಗೆರೆ ಹಬ್ಬ’ಕ್ಕೆ ಸಡಗರದ ಸಿದ್ಧತೆ

By Staff
|

ದಾವಣಗೆರೆ : ರಾಜ್ಯದ ವಾಣಿಜ್ಯನಗರಿ ದಾವಣಗೆರೆಯಲ್ಲಿ ಎರಡು ದಿನಗಳ ‘ದಾವಣಗೆರೆ ಹಬ್ಬ’ ಫೆ. 24 ಹಾಗೂ ಫೆ.25ರಂದು ನಡೆಯಲಿದೆ.

ಇಲ್ಲಿನ ಹೈಸ್ಕೂಲ್‌ ಆವರಣದಲ್ಲಿ ಉಪಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪನವರು ಫೆ.24ರಂದು ಸಂಜೆ 6ಕ್ಕೆ ಹಬ್ಬಕ್ಕೆ ಚಾಲನೆ ನೀಡುವರು. ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ವಿ. ರವೀಂದ್ರನಾಥ್‌, ಶಾಸಕ ಶಾಮನೂರು ಶಿವಶಂಕರಪ್ಪ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಐ.ಎಂ. ವಿಠ್ಠ ಲ ಮೂರ್ತಿ ಮತ್ತಿತರರು ಹಬ್ಬದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ದಾವಣಗೆರೆ ಹಬ್ಬವನ್ನು ಐತಿಹಾಸಿಕ ಸ್ಥಳಗಳಾದ ಸಂತೇಬೆನ್ನೂರು ಪುಷ್ಕರಣಿ ಹಾಗೂ ಹರಿಹರದ ಹರಿಹರೇಶ್ವರ ದೇವಸ್ಥಾನಗಳಲ್ಲಿ ಕೂಡ ಅಚರಿಸುತ್ತಿರುವುದು ಈ ಬಾರಿಯ ವಿಶೇಷ.

ಫೆ.24 : ಹಬ್ಬದ ಮೊದಲ ದಿನದ ಕಾರ್ಯಕ್ರಮಗಳು

  • ಅಹಮದಾಬಾದಿನ ರಂಗಶ್ರೀ ಕಲಾ ಶಾಲೆಯವರಿಂದ ಗುಜರಾತಿನ ಗರ್ಬಾ ನೃತ್ಯ.
  • ಜಿ. ದುರ್ಗೇಶ್‌ ಅವರಿಂದ ಹಿಂದೂಸ್ತಾನಿ ಗಾಯನ .
  • ಗಾಯಕ ರಾಜೇಶ್‌ ಕೃಷ್ಣ ನ್‌ ಅವರಿಂದ ಚಿತ್ರಗೀತೆಗಳ ಗಾಯನ.
  • ಫೆ. 25 : ಹಬ್ಬದ ಎರಡನೇ ದಿನದ ಕಾರ್ಯಕ್ರಮಗಳು

    • ಗೃಹ ಸಚಿವ ಎಂ.ಪಿ. ಪ್ರಕಾಶ್‌ ಅವರಿಂದ ಭಾಷಣ.
    • ನೂಪುರ ನೃತ್ಯ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ರೂಪಕ.
    • ವಾಣಿ ಮಹಿಳಾ ಮಂಡಳಿಯಿಂದ ಸುಗಮ ಸಂಗೀತ.
    • ಖ್ಯಾತ ಗಾಯಕಿ ಅನುರಾಧ ಪೊಡ್ವಾಲ್‌ ಅವರಿಂದ ಚಿತ್ರಗೀತೆಗಳ ಗಾಯನ
    • ‘ದಾವಣಗೆರೆ ನಿರ್ಮಾಣಕ್ಕೆ ಹತ್ತು ವರ್ಷ‘ ಎಂಬ ವಿಷಯದ ಮೇಲೆ ನಡೆಯಲಿರುವ ವಿಚಾರ ಸಂಕಿರಣಕ್ಕೆ, ಹಿರಿಯ ಪತ್ರಕರ್ತ ಜಿ. ಪಿ. ಬಸವರಾಜು ಅವರಿಂದ ಚಾಲನೆ.
    • (ದಟ್ಸ್‌ ಕನ್ನಡ ವಾರ್ತೆ)

      ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more