ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಡುಗಿ ಚುಡಾಯಿಸಿದ್ದಕ್ಕೆ ಕೊಲೆ; ಹಂತಕರಿಗೆ ಜೈಲುಶಿಕ್ಷೆ!

By Staff
|
Google Oneindia Kannada News

ಮಡಿಕೇರಿ : ಹುಡುಗಿಯನ್ನು ಚುಡಾಯಿಸಿದ್ದ ಯುವಕನನ್ನು ಕೊಲೆ ಮಾಡಿದ ಕಾರಣ, ಓರ್ವ ಮಹಿಳೆ ಸೇರಿದಂತೆ ಮೂವರಿಗೆ ಇಲ್ಲಿನ ಕೆಳ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ನೀಡಿದೆ.

ಚೇಲಾವರ ಗ್ರಾಮದ ಗಣಪತಿ, ಆತನ ಪುತ್ರಿ ಫ್ಯಾನ್ಸಿ ಹಾಗೂ ಅಯ್ಯಪ್ಪ ಶಿಕ್ಷೆಗೊಳಗಾದವರು. ನ್ಯಾಯಾಲಯ ಆರೋಪಿಗಳಿಗೆ ತಲಾ 2,000 ರೂಪಾಯಿ ದಂಡವನ್ನೂ ವಿಧಿಸಿದೆ.

ಕೊಲೆಯಾಗಿದ್ದ ವ್ಯಕ್ತಿ ರಮೇಶ್‌. ಈತ ಫ್ಯಾನ್ಸಿಯನ್ನು ಚುಡಾಯಿಸಿದ್ದರಿಂದ ಮೂವರೂ ಆರೋಪಿಗಳು ದೊಣ್ಣೆಯಿಂದ ಥಳಿಸಿ ಈತನನ್ನು ಹತ್ಯೆ ಮಾಡಿದ್ದರು. ಈ ಕುರಿತು ರಮೇಶ್‌ ತಂದೆ ಆನಂತರ ಪೊಲೀಸರಿಗೆ ದೂರು ಸಲ್ಲಿಸಿದ್ದರು. 2002ರಲ್ಲಿ ಈ ಪ್ರಕರಣ ನಡೆದಿತ್ತು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X