ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಲ್ಲಾವಾರು ಏಡ್ಸ್‌ ರೋಗಿಗಳ ವಿವರ ; ‘ಉಡುಪಿ’ ನಂ.1

By Staff
|
Google Oneindia Kannada News

ಬೆಂಗಳೂರು : 2006ರ ನವೆಂಬರ್‌ ಅಂತ್ಯದವರೆಗೆ ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ, ರಾಜ್ಯದಲ್ಲಿ ಹತ್ತು ಸಾವಿರ ಮಂದಿ ಏಡ್ಸ್‌ನಿಂದ ಬಳಲುತ್ತಿದ್ದಾರೆ ಎಂದು ಆರೋಗ್ಯ ಸಚಿವ ಆರ್‌. ಅಶೋಕ್‌ ಹೇಳಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಸೋಮವಾರ, ಪಕ್ಷೇತರ ಸದಸ್ಯ ಮರಿತಿಪ್ಪೇಗೌಡರ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಏಡ್ಸ್‌ ರೋಗಿಗಳ ಪಟ್ಟಿಯಲ್ಲಿ ಉಡುಪಿ ಜಿಲ್ಲೆ ಅಗ್ರ ಸ್ಥಾನದಲ್ಲಿದೆ. ಇಲ್ಲಿ 1804ಮಂದಿ ಏಡ್ಸ್‌ ರೋಗಿಗಳಿದ್ದಾರೆ ಎಂದು ಮಾಹಿತಿ ನೀಡಿದರು.

ಏಡ್ಸ್‌ ರೋಗಿಗಳಿಗೆ ಪ್ರತ್ಯೇಕ ಆಸ್ಪತ್ರೆ ಪ್ರಸ್ತಾಪವನ್ನು ತಳ್ಳಿಹಾಕಿದ ಸಚಿವರು, ರಾಜ್ಯದ 13ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಏಡ್ಸ್‌ ನಿಗ್ರಹ ಚಿಕಿತ್ಸೆ ಕಲ್ಪಿಸಲಾಗುವುದು. ಮಂಗಳೂರು(1,679), ಬೆಳಗಾವಿ(1620), ಬೆಂಗಳೂರು ನಗರ(1,483), ದಾವಣಗೆರೆ(1,010), ಧಾರವಾಡ (662), ಮಡಿಕೇರಿ-ಚಾಮರಾಜನಗರ(10-10), ಬೀದರ್‌(17), ಬಿಜಾಪುರ(20), ಕೊಪ್ಪಳ(32), ಚಿತ್ರದುರ್ಗ(42) ಜಿಲ್ಲೆಯಲ್ಲಿ ಏಡ್ಸ್‌ ರೋಗಿಗಳಿದ್ದಾರೆ ಎಂದು ಸಚಿವರು ಹೇಳಿದರು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X