ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಲ್ಕು ಇಂಜಿನೀಯರಿಂಗ್‌ ಕಾಲೇಜುಗಳ ಮಾನ್ಯತೆ ರದ್ದು

By Staff
|
Google Oneindia Kannada News

ಬೆಳಗಾವಿ : ಷರತ್ತುಗಳನ್ನು ಪಾಲಿಸದಿರುವ ಹಿನ್ನೆಲೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ನಾಲ್ಕು ಇಂಜಿನೀಯರಿಂಗ್‌ ಕಾಲೇಜುಗಳ ಮಾನ್ಯತೆ ರದ್ದುಗೊಳಿಸಿ, ಆದೇಶ ಹೊರಡಿಸಿದೆ.

ವಿವಿ ಕುಲಸಚಿವ ಎಂ.ಎಸ್‌.ಶಿವಕುಮಾರ್‌ ಶನಿವಾರ(ಫೆಬ್ರವರಿ 17) ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಬೆಂಗಳೂರಿನ ಮೂರು ಕಾಲೇಜುಗಳು ಹಾಗೂ ವಿಜಾಪುರದ ಒಂದು ಕಾಲೇಜು ವಿಶ್ವವಿದ್ಯಾಲಯದೊಂದಿಗೆ ಸಂಲಗ್ನ ಹೊಂದುವಾಗ ಹಾಕಲಾಗಿದ್ದ ಷರತ್ತುಗಳನ್ನು ಉಲ್ಲಂಘಿಸಿವೆ. ಹಾಗಾಗಿ ಅವುಗಳ ಮಾನ್ಯತೆ ರದ್ದುಗೊಳಿಸಲಾಗಿದೆ ಎಂದು ಹೇಳಿದರು.

ಈ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾಲಯದ ಬೇರೆ ಕಾಲೇಜುಗಳಿಗೆ ವರ್ಗಾವಣೆ ಮಾಡಲಾಗುವುದು. ಈ ನಿಮಿತ್ತ ಫೆಬ್ರವರಿ 21, 22 ಹಾಗೂ 23ರಂದು ಬೆಂಗಳೂರಿನ ಎಂ.ಎಸ್‌.ರಾಮಯ್ಯ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ವಿದ್ಯಾರ್ಥಿಗಳು ಹಾಜರಿರಬೇಕು ಎಂದು ಅವರು ಸ್ಪಷ್ಟಪಡಿಸಿದರು.

ರದ್ದಾದ ಕಾಲೇಜುಗಳು :

  • ಇಂಪ್ಯಾಕ್ಟ್‌ ಕಾಲೇಜ್‌ ಆಫ್‌ ಇಂಜಿನೀಯರಿಂಗ್‌ ಆ್ಯಂಡ್‌ ಅಪ್ಲೈಡ್‌ ಸೈನ್ಸಸ್‌, ಬೆಂಗಳೂರು.

  • ಎಸ್‌.ಸಿ.ಟಿ.ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಬೆಂಗಳೂರು.

  • ನಾಡಿಗೇರ್‌ ಇನ್ಸ್‌ಟಿಟ್ಯೂಟ್‌ ಆಫ್‌ ಇಂಜಿನೀಯರಿಂಗ್‌ ಆ್ಯಂಡ್‌ ಟೆಕ್ನಾಲಜಿ, ಬೆಂಗಳೂರು.

  • ಎಸ್‌.ಇ.ಸಿ.ಎ.ಬಿ.ಇನ್ಸ್‌ಟಿಟ್ಯೂಟ್‌ ಆಫ್‌ ಇಂಜಿನೀಯರಿಂಗ್‌ ಆ್ಯಂಡ್‌ ಟೆಕ್ನಾಲಜಿ, ವಿಜಾಪುರ.

(ಏಜನ್ಸೀಸ್‌)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X