ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರೇಪ್-ಮರ್ಡರ್ ಮಾಡಿದ ಶಿವು-ಜಡೇಸ್ವಾಮಿಗೆ ಗಲ್ಲು
ನವದೆಹಲಿ : ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದ, ಕರ್ನಾಟಕದ ಇಬ್ಬರು ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಮರಣದಂಡನೆ ಶಿಕ್ಷೆಯನ್ನು, ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.
ಅತ್ಯಾಚಾರ ಮತ್ತು ಕೊಲೆಗೆ ಪ್ರತ್ಯಕ್ಷಸಾಕ್ಷಿಗಳು ಇಲ್ಲದಿದ್ದರೂ ಸಾಂದರ್ಭಿಕ ಸಾಕ್ಷ್ಯ ಹಾಗೂ ವೈದಕೀಯ ವರದಿಗಳ ಅಧಾರದ ಮೇಲೆ ಶಿವು(20) ಹಾಗೂ ಜಡೇಸ್ವಾಮಿ(22) ಎಂಬ ಇಬ್ಬರು ಯುವಕರಿಗೆ ಮರಣದಂಡನೆ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ.
ಹಿನ್ನೆಲೆ : ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲ್ಲೂಕಿನ ಭದ್ರಯ್ಯನ ಹಳ್ಳಿಯಲ್ಲಿ, ಶಿವಮ್ಮ(17) ಎಂಬಾಕೆಯ ಮೇಲೆ ಶಿವು ಮತ್ತು ಜಡೇಸ್ವಾಮಿ ಅತ್ಯಾಚಾರವೆಸಗಲು ಪ್ರಯತ್ನಿಸಿದ್ದರು. ನಂತರ ಗುರು-ಹಿರಿಯಲು ಬುದ್ದಿಮಾತು ಹೇಳಿ, ಕ್ಷಮೆ ನೀಡಿದ್ದರು. ಇದಾದ ನಂತರವೂ ಅಂದ್ರೆ, 2001ರ ಅಕ್ಟೋಬರ್ 15ರಂದು ಶಿವಮ್ಮನ ಮೇಲೆ ಇವರಿಬ್ಬರೂ ಅತ್ಯಾಚಾರವೆಸಗಿ, ಸಾಯಿಸಿದ್ದರು.
(ಏಜನ್ಸೀಸ್)
Comments
Story first published: Saturday, February 17, 2007, 5:30 [IST]