ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪೋಲೊದಿಂದ ಗಾಲಿಗಳ ಮೇಲೆ ಆಸ್ಪತ್ರೆ ಸೇವೆ ಅರಂಭ

By Staff
|
Google Oneindia Kannada News

ಬೆಂಗಳೂರು : ಅಪೋಲೊ ಆಸ್ಪತ್ರೆಯು ತನ್ನ ಹೊಸ ಸೇವೆಯಾದ ಗಾಲಿಗಳ ಮೇಲೆ ಆಸ್ಪತ್ರೆಯನ್ನು ಪ್ರಾರಂಭಿಸಿದೆ.

ಟೆನ್ನಿಸ್‌ ಅಟಗಾರ್ತಿ ಶಿಖಾ ಒಬೇರಾಯ್‌ ಈ ಸೇವೆಯನ್ನು ಗುರುವಾರ(ಫೆ.16)ದಂದು ಉದ್ಘಾಟಿಸಿದರು. ಅಪೋಲೊ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವಿ .ಪಿ. ಕಾಮತ್‌ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸುಮಾರು 12 ಅಂಬ್ಯುಲೆನ್ಸ್‌ ಗಳನ್ನು ತುರ್ತು ಸೇವೆಯನ್ನು ಒದಗಿಸಲು ಸಜ್ಜುಗೊಳಿಸಲಾಗಿದೆ. ಒಬ್ಬ ನುರಿತ ವೈದ್ಯರು, 3 ಜನ ಸಹಾಯಕ ಸಿಬ್ಬಂದಿ, ಅಕ್ಸಿಜೆನ್‌ ನೀಡುವ ಉಪಕರಣ ಮುಂತಾದ ಅಗತ್ಯ ಸೌಲಭ್ಯಗಳನ್ನು ಈ ವಾಹನಗಳು ಹೊಂದಿರುತ್ತವೆ ಎಂದು ಕಾಮತ್‌ ಹೇಳಿದರು.

ಶೇಷಾದ್ರಿಪುರ, ತುಮಕೂರು ರಸ್ತೆ ಹಾಗೂ ಹೊಸೂರು ರಸ್ತೆ ಮುಂತಾದ ಪ್ರಮುಖ ಸ್ಥಳಗಳಲ್ಲಿ ಈ ಸುಸಜ್ಜಿತ ವಾಹನಗಳು ಸೇವೆ ನೀಡಲು ಸಜ್ಜಾಗಿರುತ್ತದೆ. ಸಾರ್ವಜನಿಕರು ತುರ್ತು ಪರಿಸ್ಥಿತಿಯಲ್ಲಿ ಹೆಲ್ಪ್‌ ಲೈನ್‌ ಸಂಖ್ಯೆ 1066ಕ್ಕೆ ಕರೆ ಮಾಡಿದರೆ ಸಾಕು. ಎಂದು ಕಾಮತ್‌ ಮಾಹಿತಿ ನೀಡಿದರು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X