ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡ್ರೆಸ್‌ಕೋಡ್‌ ಪಾಲಿಸದ ಎಮ್‌ಸಿಸಿ ವಿದ್ಯಾರ್ಥಿನಿಯರಿಗೆ ಶಿಕ್ಷೆ!

By Staff
|
Google Oneindia Kannada News

ಬೆಂಗಳೂರು : ಪ್ರೇಮಿಗಳ ದಿನಾಚರಣೆ ಸಂದರ್ಭದಲ್ಲಿ ವಸ್ತ್ರಸಂಹಿತೆ ಉಲ್ಲಂಘಿಸಿದ ನಗರದ ಮೌಂಟ್‌ ಕಾರ್ಮೆಲ್‌ ಕಾಲೇಜಿನ ವಿದ್ಯಾರ್ಥಿನಿಯರಿಗೆ, ಕಾಲೇಜು ಆವರಣ ಪ್ರವೇಶಿಸಿಲು ಅವಕಾಶ ನೀಡದಿರುವುದನ್ನು ವಿದ್ಯಾರ್ಥಿ ಸಂಘಟನೆಗಳು ಗುರುವಾರ ಖಂಡಿಸಿವೆ.

ಹೊಸ ವಿನ್ಯಾಸದ ವಸ್ತ್ರಗಳನ್ನು ತೊಟ್ಟು ಸಂಭ್ರಮದಿಂದ ಕಾಲೇಜಿಗೆ ಬಂದಿದ್ದ 152ವಿದ್ಯಾರ್ಥಿನಿಯರನ್ನು, ಬುಧವಾರ ಮನೆಗೆ ಕಳುಹಿಸಲಾಗಿದೆ. ವಸ್ತ್ರಸಂಹಿತೆ ಬಗ್ಗೆ ಪ್ರಾಂಶುಪಾಲರು ಸ್ಪಷ್ಟನೆ ನೀಡಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.

ನಿಯಮಗಳನ್ನು ಪಾಲಿಸಬೇಕು : ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕಾಲೇಜಿನ ಆಡಳಿತ ಮಂಡಳಿ, ವಸ್ತ್ರಸಂಹಿತೆಯನ್ನು ಕಾಲೇಜಿನ ನೋಟಿಸ್‌ ಬೋರ್ಡ್‌ನಲ್ಲಿ ಪ್ರಕಟಿಸಲಾಗಿದೆ. ಸಲ್ವಾರ್‌ ಕಮೀಜ್‌, ಉದ್ದನೆಯ ಕುರ್ತಾ, ಸಹಜವಾಗಿ ಕೂರಲು ಅವಕಾಶವಾಗುವಂತಹ ಜೀನ್ಸ್‌ ತೊಡಲು ಅವಕಾಶ ನೀಡಿದ್ದೇವೆ. ಸ್ಲೀವ್‌ಲೆಸ್‌, ಟಿ-ಶರ್ಟ್‌ ಧರಿಸಲು ನಿರ್ಬಂಧವಿದೆ ಎಂದಿದೆ.

ಇನ್ನೊಂದು ನಿಯಮ : ಕಾಲೇಜಿನ ನಿಯಮಗಳನ್ವಯ ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಪ್ರತಿಭಟನೆ ಅಥವಾ ಧರಣಿಗಳನ್ನು ನಡೆಸುವಂತಿಲ್ಲ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X